ರೈಲು ನಿಲ್ದಾಣದ ಬಳಿ ಮೂರು ದಿನದ ಹಸುಗೂಸಿನ ಶವ ಪತ್ತೆ ಜಿಲ್ಲೆಯಲ್ಲಿ ಹೆಚ್ಚಾದ ಮಕ್ಕಳ ಆಪಹರಣ ಪ್ರಕರಣಗಳು ….??
ತುಮಕೂರು: ಮೂರು ದಿನದ ಹಸುಗೂಸಿನ ಶವ ಪತ್ತೆಯಾಗಿರುವ ಘಟನೆ ತುಮಕೂರು ನಗರದ ರೈಲು ನಿಲ್ದಾಣದ ಮುಂಭಾಗ ಬುಧವಾರ ರಾತ್ರಿ ಸಂಭವಿಸಿದೆ.
ನಗರದ ರೈಲು ನಿಲ್ದಾಣದ ಆವರಣದ ಮುಂಬಾಗ ಬುಧವಾರ ರಾತ್ರಿ ಸುಮಾರು 9.30 ರ ಸಂದರ್ಭದಲ್ಲಿ ಮಗುವಿನ ಶವ ಪತ್ತೆಯಾಗಿದ್ದು, ಎರಡು ಮೂರು ದಿನಗಳ ಹಸುಗೂಸು ಎಂದು ಹೇಳಲಾಗಿದೆ.
ರೈಲು ನಿಲ್ದಾಣದ ಬಳಿ ಬಟ್ಟೆಯಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ಮಗು ಕಂಡುಬಂದಿದ್ದು, ಮಗುವಿನ ಶವವನ್ನು ಕಂಡ ಪ್ರಯಾಣಿಕರೊಬ್ಬರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಆಧರಿಸಿ ಸ್ಥಳಕ್ಕಾಗಮಿಸಿದ ಪೋಲಿಸರು ಸ್ಥಳ ಪರಿಶೀಲನೆ ನಡೆಸಿ ಮಗುವಿನ ಮೃತ ದೇಹವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಶವಾಗಾರದಲ್ಲಿ ಇರಿಸಿದ್ದಾರೆ.
ಜಿಲ್ಲೆಯಲ್ಲಿ ಮಕ್ಕಳ ಕಳ್ಳಸಾಗಾಣಿಕೆಯ ಕುರಿತಂತೆ ಈಗಾಗಲೇ ಸುದ್ದಿಯಾಗಿದ್ದು, ಅಕ್ರಮವಾಗಿ ಮಕ್ಕಳ ಕಳ್ಳಸಾಗಾಣಿಕೆಯಲ್ಲಿ ಭಾಗಿಯಾದವರನ್ನು ಪೋಲಿಸರು ಬಂಧಿಸಿ ಜೈಲಿಗೂ ಸಹ ಅಟ್ಟಿದ್ದಾರೆ.
ಮಗುವಿನ ಮೃತ ದೇಹದ ಮೇಲೆಲ್ಲಾ ಇರುವೆ ಕ್ರಿಮಿ ಕೀಟಗಳು ತುಂಬಿಕೊಂಡಿದ್ದು, ಪೋಷಕರು ಹುಟ್ಟಿದ ಮಗುವನ್ನು ಬಿಟ್ಟು ಹೋಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.
ಮಗುವಿನ ಕೈಯಲ್ಲಿ ಪೋಷಕರ ಹೆಸರು ಇರುವ ಬ್ಯಾಂಡ್ನಲ್ಲಿ ತಾಯಿಯ ಹೆಸರು ಸಹ ಕಂಡು ಬಂದಿದೆ ಎನ್ನಲಾಗಿದೆ.
ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ .
ವರದಿ – ಮಾರುತಿ ಪ್ರಸಾದ್ ತುಮಕೂರು