ತುಮಕೂರು ಜಿಲ್ಲೆಯಲ್ಲಿ ಎಷ್ಟು ನಕಲಿ ಕ್ಲಿನಿಕ್ ಗಳು ಇವೆ ಗೊತ್ತಾ…?
ತುಮಕೂರು ಜಿಲ್ಲೆಯಲ್ಲಿರುವ ನಕಲಿ ಡಾಕ್ಟರ್ ಗಳಗಳನ್ನು ಪತ್ತೆ ಹಚ್ಚಿ ಅವರ ಮೇಲೆ ಪೊಲೀಸ್ ಠಾಣೆಯಲ್ಲಿ ನಿರ್ಧಾಕ್ಷಿಣ್ಯವಾಗಿ ಪ್ರಕರಣ ದಾಖಲಿಸುವಂತೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಡಿಎಚ್ಒ ಡಾ.ಮಂಜುನಾಥ್ ಗೆ ಖಡಕ್ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಕಲಿಗಳು ಎಷ್ಟೇ ದೊಡ್ಡವರಿರಲಿ,ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ಮೇಲೆ ಯಾವುದೇ ಮುಲಾಜಿಲ್ಲದೆ ನಿರ್ಧಾಕ್ಷಿಣ್ಯ ಕ್ರಮಜರುಗಿಸಲಾಗುವುದು ಎಂದರು.
ನಕಲಿ ಡಾಕ್ಟರ್ ಗಳ ಪಟ್ಟಿ ನೀವೇ ಕೊಟ್ಟಿದ್ದೀರಿ,ಕ್ರಮ ಏನಾಗಿದೆ ಎಂದು ಡಿಹೆಚ್ಒ ಮಂಜುನಾಥ್ ಗೆ ತೀವ್ರ ತರಾಟೆ ತಗೆದುಕೊಂಡ ಗೃಹಸಚಿವರು ಈತ ನಕಲಿ ಡಾಕ್ಟರ್ ಎಂದು ತಿಳಿದರೆ ತಕ್ಷಣ ಪ್ರಕರಣ ದಾಖಲಿಸಿ ಅರೆಸ್ಟ್ ಮಾಡಿಸಿ ನಿಮ್ಮ ಜೊತೆ ಸರ್ಕಾರ ಇದೆ,ಜನರ ಜೀವದ ಜೊತೆ ಆಟ ಆಡುವುದನ್ನು ನಾನು ಸಹಿಸುವುದಿಲ್ಲ ಎಂದರು.
ಇನ್ನು ತುಮಕೂರು ಜಿಲ್ಲಾ ಆರೋಗ್ಯ ಇಲಾಖೆ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.
ಕಾರಣ ಅದೆಷ್ಟು ಅಮಾಯಕರು ನಕಲಿ ವೈದ್ಯರ ಚಿಕಿತ್ಸೆಗೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುತ್ತಿರುವುದು ಪ್ರಮುಖ ಕಾರಣ.
ಇನ್ನು ತಾಲೂಕುವಾರು ನಕಲಿ ವೈದ್ಯರ ಪಟ್ಟಿ ಬಿಡುಗಡೆ ಮಾಡಿರುವ ತುಮಕೂರು ಜಿಲ್ಲಾ ಆರೋಗ್ಯ ಇಲಾಖೆಯ ಅಂಕಿ ಅಂಶದಂತೆ ಜಿಲ್ಲೆಯಲ್ಲಿ 98ಕ್ಕೂ ಹೆಚ್ಚು ನಕಲಿ ವೈದ್ಯರು ನಕಲಿ ಕ್ಲಿನಿಕ್ ಮೂಲಕ ಚಿಕಿತ್ಸೆ ನೀಡುತ್ತಾ ಸಾರ್ವಜನಿಕರ ಜೀವದ ಜೊತೆ ಆಟವಾಡುತ್ತಿದ್ದಾರೆ.
ತಾಲೂಕು ವಾರು ನಕಲಿ ವೈದ್ಯರ ಅಂಕಿ ಅಂಶ ಕೆಳಕಂಡಂತಿದೆ.
ತುಮಕೂರು_14
ಗುಬ್ಬಿ -12 .
ಕುಣಿಗಲ್ -0
ಸಿರಾ 21
ಪಾವಗಡ 34
ಮಧುಗಿರಿ 11
ಕೊರಟಗೆರೆ 4
ತುರುವೇಕೆರೆ-02
ತಿಪಟೂರು 2 ಚಿಕ್ಕನಾಯಕನಹಳ್ಳಿ -08
ಸೇರಿದಂತೆ ಜಿಲ್ಲೆಯಲ್ಲಿ 98ಕ್ಕೂ ಹೆಚ್ಚು ನಕಲಿ ಕ್ಲಿನಿಕ್ ಗಳು ಚಾಲ್ತಿಯಲ್ಲಿದ್ದು ಇನ್ನಾದರೂ ಸಂಬಂಧಪಟ್ಟ ಜಿಲ್ಲಾ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ನಕಲಿ ಡಾಕ್ಟರ್ ಗಳ ಆಟಕ್ಕೆ ಕಡಿವಾಣ ಹಾಕುವುದೇ ಕಾದು ನೋಡಬೇಕಿದೆ.
ವರದಿ ಮಾರುತಿ ಪ್ರಸಾದ್ ತುಮಕೂರು