ಜಾನಪದ ಸಂಪತ್ತನ್ನು ರಕ್ಷಿಸಬೇಕು : ಜಾನಪದ ಗಾಯಕಿ ಗಂಗಹುಚ್ಚಮ್ಮ.

ಜಾನಪದ ಸಂಪತ್ತನ್ನು ರಕ್ಷಿಸಬೇಕು : ಜಾನಪದ ಗಾಯಕಿ ಗಂಗಹುಚ್ಚಮ್ಮ.

 

ಮೌಖಿಕ ಪರಂಪರೆಯ, ನೆಲಮೂಲ ಸಂಸ್ಕೃತಿಯ ತಾಯಿ ಬೇರಾದ ಜಾನಪದ ಸಂಪತ್ತನ್ನು ಮುಂದಿನ ತಲೆಮಾರಿಗೆ ಸಂರಕ್ಷಿಸಿ ರವಾನಿಸಬೇಕಾದ ಅಗತ್ಯತೆ ಇದು ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಜಲಧಿಗೆರೆ ಶ್ರೀಮತಿ ಗಂಗ ಹುಚ್ಚಮ್ಮ ಅಭಿಪ್ರಾಯ ಪಟ್ಟರು.

 

 

 

 

 

ಅವರು ಕುಣಿಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಸಮಿತಿ ಹಾಗೂ ಐಕ್ಯೂಎಸಿ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಜನಪದ ಗೀತೆ ಸ್ಪರ್ಧೆ ಪರಂಪರಾ ದಿನ, ಆಹಾರ ಮೇಳ ಹಾಗೂ ಜಾನಪದ ವಸ್ತು ಪ್ರದರ್ಶನ – 2024ರ ಕಾರ್ಯಕ್ರಮವನ್ನು ರಾಗಿ ಬೀಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

 

 

 

 

ವಿಜ್ಞಾನ – ತಂತ್ರಜ್ಞಾನದ ನಾಗಾಲೋಟದಲ್ಲಿ ಸಾಗುತ್ತಿರುವ ಇಂದಿನ ಯುವ ಜನತೆಗೆ ನೈತಿಕ ಮತ್ತು ಜಾನಪದದಲ್ಲಿನ ಮೌಲ್ಯಗಳನ್ನು ತಿಳಿಸುವ ಅಗತ್ಯತೆ ಇದ್ದು, ಇಂದಿನ ಯುವ ಜನಾಂಗವನ್ನು ಜಾನಪದ ಗೀತೆಯ ಕಡೆಗೆ ಕರೆದುಕೊಂಡು ಹೋಗುತ್ತಿರುವುದು ಈ ಕಾರ್ಯಕ್ರಮದ ಹೆಗ್ಗಳಿಕೆ ಮತ್ತು ಶ್ರೇಷ್ಠತೆ ಎಂದು ಶ್ಲಾಘಿಸಿದರು.

 

 

 

 

 

 

 

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಮಾಯಾ ಸಾರಂಗಪಾಣಿ ಅವರು ಮಾತನಾಡುತ್ತಾ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಯ ಭಾಗವಾಗಿ ಅವರ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವ ಮತ್ತು ಜಾನಪದ ಸಾರಸ್ವತ ಲೋಕವನ್ನು ಪರಿಚಯಿಸುವ ಈ ಕಾರ್ಯಕ್ರಮ ವಿಶೇಷವಾದದ್ದು ಎಂದರು.

 

 

 

 

 

 

 

ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ, ತೀರ್ಪುಗಾರರಾಗಿ ಆಗಮಿಸಿದ್ದ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಶಶಿಕುಮಾರ್, ಹಿರಿಯ ಜಾನಪದ ಗಾಯಕರು ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಿರಿವರ ಶಿವರಾಮಯ್ಯ ಹಾಗೂ ಸಂಗೀತ ಪ್ರೋತ್ಸಾಹಕರು, ಹಿರಿಯ ಶಿಕ್ಷಕರಾದ ಶ್ರೀಮತಿ ಗೀತಾಂಜಲಿಯವರು ಉಪಸ್ಥಿತರಿದ್ದರು.

 

 

 

 

 

ರಾಜ್ಯಮಟ್ಟದ ಜನಪದ ಗೀತೆ ಸ್ಪರ್ಧೆಗೆ ರಾಜ್ಯದ ಸುಮಾರು 17 ಕಾಲೇಜುಗಳ 27 ಸ್ಪರ್ಧಾಳುಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮೊದಲ ಬಹುಮಾನವಾಗಿ 5000 ರೂ ಗಳನ್ನು ಕುಣಿಗಲ್ ಪ್ರಥಮ ದರ್ಜೆ ಕಾಲೇಜಿನ ನಿವೇದಿತ, ದ್ವಿತೀಯ ಬಹುಮಾನ 3000 ರೂಗಳನ್ನು ತುಮಕೂರಿನ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ವರ್ಷಿಣಿ ಹಾಗೂ ತೃತೀಯ ಬಹುಮಾನವನ್ನು ವಿದ್ಯ ವಾಹಿನಿ ಪ್ರಥಮ ದರ್ಜೆ ಕಾಲೇಜಿನ ಧನುಷ್ ಪಡೆಯುವುದರೊಂದಿಗೆ ಪಾರಿತೋಷಕವನ್ನು ತಮ್ಮದಾಗಿಸಿಕೊಂಡರು. ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

 

 

 

 

 

 

 

ಇದರ ಅಂಗವಾಗಿ ಪರಂಪರಾದಿನ ಮತ್ತು ಎಲ್ಲಾ ವಿದ್ಯಾರ್ಥಿಗಳು ಆಹಾರ ಮೇಳದಲ್ಲಿ ತುಂಬಾ ಉತ್ಸಾಹದಿಂದ ಪಾಲ್ಗೊಂಡು 37 ಅಂಗಡಿ ಮಳಿಗೆಗಳನ್ನು ಹಾಕಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದು ವಿಶೇಷವಾಗಿತ್ತು.

 

ವೇದಿಕೆಯ ಮೇಲೆ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ ಗೋವಿಂದರಾಯ ಎಂ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಿರಿಯ ಪ್ರಾಧ್ಯಾಪಕರಾದ ರಾಮಾಂಜನಪ್ಪ, ಐಕ್ಯೂಎಸಿ ಸಂಚಾಲಕರಾದ ಡಾ. ಜೆ ಶಿವಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಜಿ ಎಸ್ ರವೀಶ್, ಹನುಮಂತಪ್ಪ, ಡಾ. ಶ್ರೀನಿವಾಸ್, ಮೈಲಾರಯ್ಯ ಪಿ ಎಲ್, ಡಾ. ಗಿರಿಜಾಂಬ ಕೆ ಎನ್, ರುಕ್ಮಿಣಿ ವಿ, ಡಾ. ಮಮತಾ, ಡಾ. ಧರಣೇಶ್, ನಾರಾಯಣದಾಸ್, ಗಂಗಾಧರ್, ಸುರೇಶ್, ಸತೀಶ್ ಕುಮಾರ್, ನಾಗಮಣಿ, ಡಾ. ರಾಧಾಕೃಷ್ಣ, ಶ್ರೀನಿವಾಸ ಪ್ರಭು ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!