ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ಗೆ ಪಾಲಿಕೆ ಮೀನಾಮೇಷ ಏಕೆ…?
ತುಮಕೂರು–ಸರ್ಕಾರಿ ರಸ್ತೆ ಜಾಗವನ್ನು ಒತ್ತುವರಿ ಮಾಡಿ ಅಕ್ರಮವಾಗಿ ಹಾಸ್ಟೆಲ್ ಕಟ್ಟಡ ನಿರ್ಮಿಸಿದ್ದ ಹೆಚ್ ಎಂ ಎಸ್ ಸೊಸೈಟ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್.ಷಪಿ ಅಹಮದ್ ಅವರಿಗೆ ತುಮಕೂರು ಮಹಾನಗರ ಪಾಲಿಕೆ ನೋಟೀಸ್ ಜಾರಿ ಮಾಡಿ ಒತ್ತುವರಿ ತೆರವಿಗೆ ಖಡಕ್ ಸೂಚನೆ ನೀಡಿದೆ.
ಯುನೈಟೆಡ್ ಅಸೋಸಿಯೇಟ್ಸ್ ಸಂಸ್ತೆ ನೀಡಿದ ದೂರನ್ನು ಪರಿಗಣಿಸಿ ತುಮಕೂರು ನಗರಾಭಿವೃದ್ದಿ ಪ್ರಾಧಿಕಾರ ಹಾಗೂ ತುಮಕೂರು ಮಹಾನಗರ ಪಾಲಿಕೆ ಪ್ರತ್ಯೇಕ ಸರ್ವೇ ಕಾರ್ಯ ನಡೆಸಿದ್ದು ಇದರಲ್ಲಿ ರಸ್ತೆ ಜಾಗ ಒತ್ತುವರಿಯಾಗಿರುವ ಬಗ್ಗೆ ಹಾಗೂ ರಸ್ತೆಯಲ್ಲಿ ಹಾಸ್ಟೆಲ್ ಕಟ್ಟಡ ಕಟ್ಟಿರುವುದು ಧೃಡಪಟ್ಟಿದ್ದು ವಾರ್ಡ್ ನಂ.31 ರ ಶೆಟ್ಟಿಹಳ್ಳಿ ಗ್ರಾಮದ ಸರ್ವೆ ನಂ.48/2 ರಲ್ಲಿನ ಬಡಾವಣೆಯಲ್ಲಿ ರಸ್ತೆ ಜಾಗವನ್ನು ಒತ್ತುವರಿ ಮಾಡಿರುವ ಬಗ್ಗೆ ದೂರು ಸಲ್ಲಿಸಿರುವ ಬಗ್ಗೆ ಸ್ಥಳ ಪರಿಶೀಲಿಸಲಾಗಿ, ತಾವು ರಸ್ತೆ ಒತ್ತುವರಿ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ, ಸ್ವತ್ತಿನ ಮೂಲ ದಾಖಲೆಗಳನ್ನು ಸಲ್ಲಿಸಲು ಉಲ್ಲೇಖ (2), (3) ಮತ್ತು (4) ರನ್ವಯ ನೋಟೀಸ್ ನೀಡಿರುವ.
ಉಲ್ಲೇಖ (5) ರ ಪತ್ರದ ಆದೇಶದನ್ವಯ ಪಾಲಿಕೆಯ ತಾಂತ್ರಿಕ ಸಿಬ್ಬಂದಿ, ಕಂದಾಯ ಶಾಖೆಯ ಸಿಬ್ಬಂದಿ ಹಾಗೂ ಸರ್ವೆ ಶಾಖೆಯಿಂದ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿಯೊಂದಿಗೆ ಜಂಟಿಯಾಗಿ ಸ್ಥಳ ಪರಿಶೀಲಿಸಿ ಮಹಜರ್ ಮಾಡಿದ್ದು, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನೀಡಿರುವ ವರದಿಯನ್ವಯ ತಾವು 2.5 ಮೀಟರಷ್ಟು ರಸ್ತೆ ಒತ್ತುವರಿ ಮಾಡಿರುವುದು ದೃಢಪಟ್ಟಿರುತ್ತದೆ. ಇದರಿಂದಾಗಿ ಕಟ್ಟಡದ ಮಾಲೀಕರಾದ ತಾವು ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ ಕಾಯ್ದೆ 1976ರ ನಿಯಮ ಮತ್ತು ಬೈಲಾಗಳನ್ನು ಉಲ್ಲಂಘಿಸಿ ಕಟ್ಟಡವನ್ನು ನಿರ್ಮಾಣ ಮಾಡಿರುವುದು ದೃಢಪಟ್ಟಿರುತ್ತದೆ.
ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಕಾಯ್ದೆ 1976ರ ಕಲಂ 321 (1) ಮತ್ತು (2)ರಂತೆ ನಿಯಮ ಮತ್ತು ಬೈಲಾಗಳನ್ನು ಉಲ್ಲಂಘಿಸಿ ವ್ಯತಿರಿಕ್ತವಾಗಿ ನಿರ್ಮಿಸಿರುವ ಕಟ್ಟಡದ ಭಾಗಗಳನ್ನು ಕೆಡವಿ ಹಾಕಬೇಕೆಂದು ನಿರ್ದೇಶಿಸುತ್ತಾ,26-11-2024 ತಾತ್ಕಾಲಿಕ ಆದೇಶವನ್ನು ಸ್ಥಿರೀಕರಣಗೊಳಿಸಲಾಗಿದೆ. ಈ ಆದೇಶಕ್ಕನುಗುಣವಾಗಿ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಿದ ಭಾಗಗಳನ್ನು 3 ದಿನಗಳೊಳಗಾಗಿ ತೆರವುಗೊಳಿಸಿಕೊಳ್ಳಲು ತಿಳಿಸಲಾಗಿದೆ. ಒಂದು ವೇಳೆ ತಾವು ತೆರವುಗೊಳಿಸದಿದ್ದರೆ ಈ ಕಛೇರಿ ವತಿಯಿಂದ ತೆರವುಗೊಳಿಸಿಲು ಕ್ರಮವಹಿಸಿ ತಗಲುವ ವೆಚ್ಚವನ್ನು ತಮ್ಮಿಂದ ತೆರಿಗೆ ರೂಪದಲ್ಲಿ ವಸೂಲಿ ಮಾಡಲಾಗುವುದೆಂದು ತುಮಕೂರು ಮಹಾನಗರ ಪಾಲಿಕೆ ಆಯುಕ್ತರು ಆದೇಶಿಸಿದ್ದಾರೆ.
ಡಿಸೆಂಬರ್ ತಿಂಗಳಲ್ಲೇ ಕಟ್ಟಡ ತೆರವಿಗೆ ಆದೇಶವಾಗಿದ್ದರೂ ಪಾಲಿಕೆ ಅಧಿಕಾರಿಗಳು ಕಟ್ಟಡ ಕೆಡವಲು ಮೀನಾಮೇಶ ಎಣಿಸುತ್ತಿರುವುದು ಹಲವು ಅನುಮಾನ ಹುಟ್ಟು ಹಾಕಿದೆ