ಕೊರೊನಾ ಸೋಂಕು ಧೃಡಪಟ್ಟು ಹೋಂ ಐಸೋಲೇಶನ್ ನಲ್ಲಿ ಇರುವ ಸೋಂಕಿತರಿಗೆ ತುಮಕೂರಿನ ಯೂತ್ ಫಾರ್ ಸೇವಾ ಸಂಸ್ಥೆ ವತಿಯಿಂದ ಉಚಿತವಾಗಿ ಮೆಡಿಸಿನ್ ಕಿಟ್ ವಿತರಣೆ ಮಾಡಲಾಯಿತು.
ರಾಜ್ಯಾದ್ಯಂತ ಕೊರೊನಾ ಸೋಂಕು ಹೆಚ್ಚಿದ್ದು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗಿರುವ ಕಾರಣ ರೋಗಿಗಳು ಔಷಧಿಗಳಿಗಾಗಿ ಪರಿತಪಿಸುತ್ತಿದ್ದು ಇದನ್ನು ಗಮನಿಸಿದ ಯೂತ್ ಫಾರ್ ಸೇವಾ ನಾಸ್ಕಾಂ ಹಾಗೂ ಸೇವಾ ಇಂಟರ್ನ್ಯಾಷನಲ್ ಅವರ ಸಹಯೋಗದೊಂದಿಗೆ ಯೂಥ್ ಫಾರ್ ಸೇವಾ ಸಂಸ್ಥೆ ದೃಢ ಹೆಜ್ಜೆಯನ್ನು ಇಡುವ ಮೂಲಕ ಕೊರನ ಸೋಂಕಿತರಿಗೆ ಬೇಕಿರುವ ಔಷಧಿಗಳ ಕಿಟ್ಟನ ಉಚಿತವಾಗಿ ನೀಡುವ ಮೂಲಕ ಸೋಂಕಿತರಿಗೆ ನೆರವಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಯೂತ್ ಫಾರ್ ಸೇವಾ ಸಂಸ್ಥೆಯ ತುಮಕೂರು ವಿಭಾಗದ ಸಂಯೋಜಕರಾದ ಸುಪ್ರೀತ್ ರವರು ತುಮಕೂರು ಜಿಲ್ಲೆಯಲ್ಲಿ ಯೂತ್ ಫಾರ್ ಸೇವಾ ಸಂಸ್ಥೆ ವತಿಯಿಂದ ಸಾವಿರಕ್ಕೂ ಹೆಚ್ಚು ಮೆಡಿಸಿನ್ ಕಿಟ್ಗಳನ್ನು ತರಲಾಗಿದ್ದು ಸೋಂಕಿತರಿಗೆ ಉಚಿತವಾಗಿ ನೀಡುತ್ತಿರುವುದಾಗಿ ಮಾಹಿತಿ ನೀಡಿದರು. ಇನ್ನು ಈ ಮೆಡಿಸಿನ್ ಕಿಟ್ ನಲ್ಲಿ ಸೋಂಕಿತರಿಗೆ ಅತ್ಯಾವಶ್ಯಕವಾಗಿರುವ ಮಾತ್ರೆಗಳು, ಗಾರ್ಗಲ್ ಸಲ್ಯೂಷನ್, ಪಲ್ಸ್ ಹಾಕ್ಸಿ ಮೀಟರ್, ಥರ್ಮಾಮೀಟರ್ ಸೇರಿದಂತೆ ಅಗತ್ಯ ಮಾತ್ರೆಗಳ ಕಿಟ್ ಒಳಗೊಂಡಿದ್ದು ಇದರ ಸದುಪಯೋಗವನ್ನು ಕೊರನಾ ಸೋಂಕಿತರು ಪಡೆಯಬೇಕಾಗಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ph 9886551310