ಎನ್ಎಸ್ಎಸ್ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆ.
ತುಮಕೂರು_ ವಿದ್ಯೋದಯ ಕಾನೂನು ಕಾಲೇಜಿನ ಎನ್ನೆಸ್ಸೆಸ್ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಕರ್ನಾಟಕ ಅರಣ್ಯ ಇಲಾಖೆ ತುಮಕೂರು ವಲಯ ಹಾಗೂ ನಚಿಕೇತ್ ಅಗ್ನಿ ಫೌಂಡೇಶನ್ ವತಿಯಿಂದ ಆಚರಿಸಲಾಯಿತು.
ತುಮಕೂರಿನ ನಾಮದ ಚಿಲುಮೆ ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಗಳನ್ನು ಆಯ್ದು ಸ್ವಚ್ಚತೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮಕ್ಕೆ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ ಎ ನಾರಾಯಣಸ್ವಾಮಿ ಹಾಗೂ ಸಹಾಯಕ ಪ್ರಾಧ್ಯಾಪಕರುಗಳಾದ ಡಾ ರಮೇಶ್. ಡಾ.ಮುದ್ದು ರಾಜ,ಶ್ರೀಮತಿ ರಶ್ಮಿ ಹಾಗೂ ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿಗಳಾದ ಕಿಶೋರ್ ಇವರುಗಳು ಉಪಸ್ಥಿತರಿದ್ದರು ಹಾಗೂ ಕಾನೂನು ಕಾಲೇಜಿನ ಎಲ್ಲಾ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಕೂಡ ಭಾಗವಹಿಸಿ ಸ್ವಚ್ಛತೆ ಮಾಡುವ ಮೂಲಕ ಜನರಿಗೆ ಪ್ಲಾಸ್ಟಿಕ್ ಪರಿಣಾಮಗಳನ್ನು ತಿಳಿಸಿ ಅರಿವನ್ನು ಮೂಡಿಸಿದರು , ಹಾಗೂ
ನಾಮದ ಚಿಲುಮೆಯ ಸುತ್ತಮುತ್ತಲೂ ಸಸಿಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಯಶಸ್ವಿಯಾಗಿ ನೆರವೇರಿಸಲಾಯಿತು ಈ ಕಾರ್ಯಕ್ರಮಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳಾದ ಗಿರೀಶ್ ರವರು ಭಾಗವಹಿಸಿ ಕಾರ್ಯಕ್ರಮದ ಕುರಿತು ಹಾಗೂ ಕಾಲೇಜಿನ ಕೆಲಸದ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು ಕಾರ್ಯಕ್ರಮದಲ್ಲಿ ನಚಿಕೇತ್ ಅಗ್ನಿ ಫೌಂಡೇಶನ್ ನ ಎಲ್ಲಾ ಸದಸ್ಯರು ಕೂಡ ಭಾಗವಹಿಸಿ ಕಾರ್ಯಕ್ರಮಕ್ಕೆ ಯಶಸ್ವಿಗೆ ಶ್ರಮಿಸಿದ್ದಾರೆ.
ವರದಿ- ಶ್ರೀನಿವಾಸಮೂರ್ತಿ ತುಮಕೂರು .