ವಿದ್ಯೋದಯ ಕಾನೂನು ಕಾಲೇಜಿನ ಐ ಕ್ಯೂ ಎ ಸಿ ಅಡಿಯಲ್ಲಿ ಯೂತ್ ರೆಡ್ ಕ್ರಾಸ್ ಘಟಕ ಹಾಗೂ ಎನ್ ಎಸ್ ಎಸ್ ಘಟಕದ ವತಿಯಿಂದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಶ್ರೀ ದಯಾನಂದ್ ರವರು ಆಪ್ತಸಮಾಲೋಚಕರು ಐ ಸಿ ಟಿ ಸಿ.
ಜಿಲ್ಲಾ ಸರ್ಕಾರಿ ಆಸ್ಪತ್ರೆ ತುಮಕೂರು, ವಿದ್ಯಾರ್ಥಿಗಳಿಗೆ ಎಚ್ ಐ ವಿ ಏಡ್ಸ್ ಯಾವ ರೀತಿ ಹರಡುತ್ತದೆ ಹಾಗೂ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು, ಶ್ರೀ ರುದ್ರಮೂರ್ತಿ ಮೂರ್ತಿರವರು ಆರೋಗ್ಯ ಶಿಕ್ಷಣಾಧಿಕಾರಿಗಳು ಜಿಲ್ಲಾಸ್ಪತ್ರೆ ತುಮಕೂರು ಇವರು ವಿದ್ಯಾರ್ಥಿಗಳಿಗೆ ಪ್ರಾಚೀನ ಕಾಲದಿಂದ ಸಾಂಕ್ರಾಮಿಕ ರೋಗಗಳ ಬಗ್ಗೆ ಜನಸಾಮಾನ್ಯರು ಯಾವ ರೀತಿ ಜಾಗೃತಿ ಹೊಂದಿದ್ದರು ಎಂದು ಹಾಗೂ ಪ್ರಸ್ತುತ ಸಮಾಜದಲ್ಲಿ ಯಾವ ರೀತಿ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟ ಬೇಕೆಂದು ವಿವರಿಸಿದರು,ಶ್ರೀ ರಂಗಸ್ವಾಮಿ ರವರು ಐ ಸಿ ಟಿ ಸಿ ಆಪ್ತ ಸಮಾಲೋಚಕರು ಎಚ್ ಐವಿ ಏಡ್ಸ್ ತಡೆಗಟ್ಟುವ ಪ್ರತಿಜ್ಞಾ ವಿಧಿಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು, ಈ ಕಾರ್ಯಕ್ರಮದಲ್ಲಿ ಕಾಲೇಜಿನ ಯೂತ್ ರೆಡ್ ಕ್ರಾಸ್ ನ ಸಂಯೋಜಕರಾದ ಶ್ರೀ ಮಂಜುನಾಥ್ ರವರು ಐ ಕ್ಯೂ ಎ ಸಿ ಕೋ ಆರ್ಡಿನೇಟರ್ ಶ್ರೀ ಮತಿ ಶಮ
ಹಾಗೂ ಕಾನೂನು ಕಾಲೇಜಿನ ಎಲ್ಲಾ ಸಹಾಯಕ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು .
ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ ಕಿಶೋರ್ ವಿ ಕಾರ್ಯಕ್ರಮವನ್ನು ನಿರೂಪಿಸಿದರು, ಶ್ರೀಮತಿ ರಶ್ಮಿ ರವರು ಕಾರ್ಯಕ್ರಮದಲ್ಲಿ ಎಲ್ಲರನ್ನು ಸ್ವಾಗತಿಸಿದರು, ಡಾ. ಮುದ್ದುರಾಜ್ ರವರು ಎಲ್ಲರನ್ನು ವಂದಿಸಿದರು.