ದೇವನಹಳ್ಳಿ ನಗರದ ಬಿ.ಕೆ.ಎಸ್‌ಪ್ರತಿಷ್ಠಾನದ ಕಛೇರಿಯಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ನಾಗರೀಕರ ಹಿತರಕ್ಷಣಾ ವೇದಿಕೆ, ದೇವನಹಳ್ಳಿ ತಾಲ್ಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಬಿ.ಕೆ.ಎಸ್.ಪ್ರತಿಷ್ಠಾನದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಲಾಯಿತು.
ಉನ್ನತ ಪದವಿ ಪೂರೈಸಿ ಕೆಪಿಎಸ್ ಸಿ ಪರೀಕ್ಷೆ ಎದುರಿಸಿ ಪೌರಾಡಳಿತ ನಿರ್ದೇಶನಾಲಯದಲ್ಲಿ ಉದ್ಯೋಗ ಪಡೆದು ಸಾಧನೆಗೆ ಅಂಗವಿಕಲತೆ ಶಾಪವಲ್ಲ ಎಂಬುದನ್ನು ಸಾಬೀತುಪಡಿಸಿರುವ ವಿಜಯಪುರ ಹೋಬಳಿ ಧರ್ಮಪುರ ಗ್ರಾಮದ ನೇತ್ರಾವತಿ ಎಂಬ ಅಂಧ ಯುವತಿ ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಎಲೆ ಮರೆ ಕಾಯಿಯಂತೆ ಶ್ರಮಿಸುತ್ತಿರುವ ತಿಮ್ಮಹಳ್ಳಿ ಗ್ರಾಮದ ಸ್ವರ್ಣಾ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಿ.ಕೆ.ಎಸ್ ಪ್ರತಿಷ್ಠಾನ ಹಾಗೂ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ನಾಗರೀಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಕೆ.ಶಿವಪ್ಪ, ದೇವನಹಳ್ಳಿ ತಾಲ್ಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷ ಎನ್.ಚಂದ್ರಶೇಖರ್, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಪ್ರಧಾನ ಕಾರ್ಯದರ್ಶಿ ಲೀಲಾವತಿ, ಸಮಾಜ ಸೇವಕಿ ಕುಸುಮಾ,ಕವಿತಾ, ಸರಸ್ವತಿ ವರಲಕ್ಷ್ಮಿ ಸ್ವಯಂ ಸೇವಕರಾದ ಪ್ರಕಾಶ್, ಇರ್ಫಾನ್, ಅನಿಲ್ ಕುಮಾರ್, ಮಂಜುನಾಥ್, ನಾಗರಾಜ್, ಮಂಜುನಾಥ ಸೇರಿದಂತೆ ಮತ್ತಿತರರಿದ್ದರು.
ಗುರುಮೂರ್ತಿ ಬೂದಿಗೆರೆ
8861100990