ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದಿಂದ ಮತದಾರರಿಗೆ ಮತ ಪಟ್ಟಿ ಪರಿಶೀಲನಾ ಜಾಗೃತಿ ಅಭಿಯಾನ.
ತುಮಕೂರು_2023 ರ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರ ಪಟ್ಟಿಯ ಲೋಪ ದೋಷಗಳ ಬಗ್ಗೆ ಕೇಳಿಬರುತ್ತಿರುವ ಆರೋಪದ ಹಿನ್ನಲೆಯಲ್ಲಿ ತುಮಕೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ, ಅಲ್ಪಸಂಖ್ಯಾತರ ವಿಭಾಗದಿಂದ ಮತದಾರರಿಗೆ ಮತ ಪಟ್ಟಿ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ.
ತುಮಕೂರು ನಗರದ ಮರಳೂರು ದಿಣ್ಣೆಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಅತಿಕ್ ಅಹಮದ್ ಹಾಗೂ ಕೆಪಿಸಿಸಿ ವಕ್ತಾರ ಮುರಳೀಧರ್ ಹಾಲಪ್ಪ ನೇತೃತ್ವದಲ್ಲಿ ತುಮಕೂರಿನ 35 ವಾರ್ಡ್ ಗಳಲ್ಲಿ ಮತದಾರರನ್ನು ಜಾಗೃತಿ ಗೊಳಿಸುವುದು ಜೊತೆ ಮತದಾನದ ಅರಿವು, ಮಹತ್ವ ತಿಳಿಸುವುದರ ಮೂಲಕ ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .
ಇದೇ ವೇಳೆ ಮಾತನಾಡಿದ ತುಮಕೂರು ನಗರ ವಿ. ಸ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಅತಿಕ್ ಅಹಮದ್ ಮಾತನಾಡಿ ಮತ ದಾನ ಈ ದೇಶದ ಸಂವಿಧಾನದ ಹಕ್ಕು ಆ ಹಕ್ಕನ್ನು ಕಸಿಯುವ ದೊಡ್ಡ ಹುನ್ನಾರವನ್ನು ಬಿಜೆಪಿ ನೇತೃತ್ವದ ಸರಕಾರ ಮಾಡುತ್ತಿದೆ ಇನ್ನೂ ರಾಜ್ಯವನ್ನು ಮುನ್ನಡೆಸಬೇಕಾಗಿರುವ ಸರ್ಕಾರ ಮತದಾನದ ಹಕ್ಕನ್ನು ಕಸಿಯುವ ಕೆಲಸಮಾಡುತ್ತಿದೆ ಆ ಮೂಲಕ 40 ಕಮಿಷನ್ ಹಗರಣ ಆಚೆ ಬರುತ್ತದೆ ಎಂದು ಹೆದರಿ ಈ ರಿತಿಯಾಗಿ ಮತ ದಾನದ ಹಕ್ಕನ್ನು ಕಸಿಯಲು ಹೊರಟಿದ್ದಾರೆ ಹಾಗಾಗಿ ಮತದಾರರು ಜಾಗೃತರಾಗಿ ಎಂದರು .
ಕೆಪಿಸಿಸಿ ವಕ್ತಾರ ಮುರಳೀಧರ್ ಹಾಲಪ್ಪ ಮಾತನಾಡಿ ಅಂಬೇಡ್ಕರ್ ಕೊಟ್ಟ ಹಕ್ಕು ಕಸಿಯಲು ಬಿಜೆಪಿ ಪಕ್ಷ ಮುಂದಾಗಿದೆ ತುಮಕೂರು ನಗರದಲ್ಲಿ 15 ಸಾವಿರದಿಂದ ದಿಂದ 35 ಸಾವಿರಕ್ಕೂ ಹೆಚ್ಚು ದಲಿತರು, ಅಲ್ಪಸಂಖ್ಯಾತರು, ಕ್ರೈಸ್ತರು ಹಾಗೂ ಕೆಳವರ್ಗದ ಮತದಾರರನ್ನು ಮತ ದಾರರ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಆರೋಪಿಸಿದ್ದಾರೆ.
ಇನ್ನು ಚುನಾವಣಾ ಸಮೀಪಿಸುತ್ತಿದ್ದಂತೆ ಮತದಾರರನ್ನು ಕೈ ಬಿಡುವ ಕೆಲಸಕ್ಕೆ ಬಿಜೆಪಿ ಸರಕಾರ ಮುಂದಾಗಿದ್ದು ಕೂಡಲೇ ಮತದಾರರು ಜಾಗೃತರಾಗಿ ಇಂತಹ ತಪ್ಪುಗಳನ್ನು ಪ್ರಶ್ನೆ ಮಾಡುವಂತೆ ಆಗಬೇಕು ಆ ಮೂಲಕ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಇದೆ ಎಂದು ಖಾತ್ರಿಪಡಿಸಿಕೊಂಡು ಮತ ಚಲಾವಣೆ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಮರಳೂರು ವಾರ್ಡ ವ ವಿವಿಧ ಭಾಗಗಳಲ್ಲಿ ಸಂಚರಿಸಿ ಮತದಾರರನ್ನು ಜಾಗೃತಿಗೊಳಿಸಲಾಯಿತು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಶಿವಾಜಿ, ಅಬ್ದುಲ್ ವಾಹಿದ್ ಆನ್ಸರ್, ಥಾಮಸ್, ಕಾಂಗ್ರೆಸ್ ಮುಖಂಡ ರಹೀಮ್ ಸೇರಿದಂತೆ ಹಲವು ನಾಯಕರು ಹಾಜರಿದ್ದರು.
ವರದಿ _ಮಾರುತಿ ಪ್ರಸಾದ್ ತುಮಕೂರು