ಧಾರ್ಮಿಕ ಸಂಘಟನೆಯಿಂದಲೇ ಸಿದ್ದರಾಮಯ್ಯ ಸಿಎಂ ಆಗಿದ್ದು , ಅವರು ಅದನ್ನು ಮರೆತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು .

ಮೈಸೂರು

 

 

ಧಾರ್ಮಿಕ ಸಂಘಟನೆಯಿಂದಲೇ ಸಿದ್ದರಾಮಯ್ಯ ಸಿಎಂ ಆಗಿದ್ದು , ಅವರು ಅದನ್ನು ಮರೆತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು .

 

ಮೈಸೂರಿನಲ್ಲಿಂದು ಕುರುಬ ಎಸ್ ಟಿಗೆ ಸೇರಿಸುವ ವಿಚಾರ , ಸ್ವಾಮೀಜಿ ಪಾದಯಾತ್ರೆಗೆ ಆರ್ ಎಸ್ ಎಸ್ ಫಂಡ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ ಸಮಾಜ ನಿಮ್ಮನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು .

 

ಇಡೀ ಸಮುದಾಯಕ್ಕೆ ನೀವು ಅವಮಾನ ಮಾಡುತ್ತಿದ್ದೀರಾ , ಸಿದ್ದರಾಮಯ್ಯ ಆರೋಪದಿಂದ ನನಗೆ ಬಹಳ ನೋವಾಗಿದೆ . ಅವರು ನಮ್ಮ ಸಮುದಾಯದ ಸ್ವಾಮೀಜಿ , ಭಕ್ತಿ ಭಾವದಿಂದ ನೋಡುತ್ತಿದ್ದೇವೆ .

 

ಮಠದ ಮೇಲೆ ಇಂತಹ ದೊಡ್ಡ ಆಪಾದನೆ ಸರಿಯಲ್ಲ , ಸಿದ್ದರಾಮಯ್ಯ ಮರೆತಿದ್ದಾರೆ ಮಠದಿಂದ ಧಾರ್ಮಿಕ ಸಂಘಟನೆಯಿಂದಲೇ ಅವರು ಸಿಎಂ ಆಗಿದ್ದು , ನಿಮಗೆ ಮಠನೂ ಗೊತ್ತಿಲ್ಲ ಸ್ವಾಮೀಜಿನೂ ಗೊತ್ತಿಲ್ಲ.ಮಠದ ಬಗ್ಗೆ ನಿಮಗೆ ಗೌರವ ಇಲ್ಲ.ಸಿದ್ದರಾಮಯ್ಯ ನಮ್ಮ ಸ್ವಾಮಿಗಳ ಮಾನ ಹರಾಜು ಹಾಕುತ್ತಿದ್ದಾರೆ.

 

ಇದು ನಿಮಗೆ ಗೌರವ ತರುತ್ತಾ ? . ನಮ್ಮ ಬಗ್ಗೆ ನೀವು ಹೇಳಿ ಆದರೆ ಸ್ವಾಮೀಜಿ ಬಗ್ಗೆ ಮಾತನಾಡಬೇಡಿ ನೀವು ತುಂಬಾ ಚಿಕ್ಕವರಾಗಿದ್ದೀರಾ . ಎಂದು ವಾಗ್ದಾಳಿ ನಡೆಸಿದರು . ಸಿದ್ದರಾಮಯ್ಯ ಇಬ್ಬಂದಿತನವನ್ನು ನಿಲ್ಲಿಸಬೇಕು . ಅವರಿಗೆ ಬಹುಪರಾಕ್ ಹೇಳುವವರು ಬೇಕು , ಏಕಮಯ ದ್ವಿತೀಯ ಬಹುಪಾರಕ್ ಹೇಳಬೇಕು ಅವರಿಗೆ . ಸ್ವಾಮೀಜಿ ವಿರುದ್ಧದ ಹೇಳಿಕೆಯನ್ನು ವಾಪಸ್ಸು ಪಡೆಯಬೇಕು . ಇಲ್ಲವಾದರೆ ಸಮಾಜದಿಂದ ಬಹಿಷ್ಕಾರ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು .

 

ಸ್ವಾಮೀಜಿ ಸಾಕಷ್ಟು ಬೇಸರಗೊಂಡಿದ್ದಾರೆ.ಸ್ವಾಮಿಗಳು ಈ ಮಾತಿನಿಂದ ಕುಗ್ಗಿ ಹೋಗಿದ್ದಾರೆ ಎಂದರು . ಕುಲಶಾಸ್ತ್ರ ಅಧ್ಯಯನ ಮಾಡಬೇಕು ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯ ನೀವೊಬ್ಬರೇ ಬುದ್ದಿವಂತ ಅಲ್ಲ.ನಮಗೂ ಅದು ಗೊತ್ತಿದೆ , ಹೋರಾಟಕ್ಕೆ ಬರುವುದಾದರೆ ಬಲ್ಲಿ ಇಲ್ಲ ಬಿಡಿ , ಈ ರೀತಿ ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ಕಿಡಿ ಕಾರಿದರು .

 

ಬಿಳಿ ಬಟ್ಟೆ ಹಾಕಿರೋ ಸಿದ್ದರಾಮಯ್ಯಗೆ ಜನರ ಕಷ್ಟ ಸುಖಗಳು ಅರ್ಥ ಆಗ್ಲಿಲ್ವಾ , ಇಡೀ ಸಮುದಾಯವನ್ನು ಅವಮಾನ ಮಾಡ್ತಾ ಇದೀರಾ , ಮಠ ಕಟ್ಟಲು ಭಿಕ್ಷೆ ಎತ್ತಿದ್ದೇವೆ . ನಿಮ್ಮಿಂದ ಈ ಮಠಕ್ಕೆ 10 ಪೈಸೆ ಇದ್ಯಾ , ಬಹಳ ಲಘವಾಗಿ ಮಠವನ್ನ ಸಮಾಜವನ್ನು ಸ್ಮಾಮಿಗಳನ್ನು ಮಾತಾಡೋದು ಶೋಭೆ ತರುವಂತದ್ದಲ್ಲ . ಜನರನ್ನ ದಿಕ್ಕುತಪ್ಪಿಸಬೇಡಿ . ಸಮುದಾಯದ ಋಣ ನಿಮ್ಮ ಮೇಲಿದೆ . ಸಮಾಜದಿಂದಲೇ ನೀವು ಇಷ್ಟೆಲ್ಲ ಆಗಿದ್ದು , ಉತ್ತರ ಕರ್ನಾಟಕದ ಕುರುಬರ ಕಷ್ಟ ಸಿದ್ದರಾಮಯ್ಯನಿಗೆ ಅರ್ಥವಾಗಿಲ್ಲ . ಬಿಳಿ ಬಟ್ಟೆ ಹಾಕಿರೋ ಸಿದ್ದರಾಮಯ್ಯ ಗೆ ಇದು ಅರ್ಥ ಆಗಲ್ಲ . ನೀವು ಮುಖ್ಯಮಂತ್ರಿ ಆಗಬೇಕಾದರೆ ನಮ್ಮ ಸಮಾಜ ಕಾರಣ . ನಿಮಗೆ ಇಷ್ಟ ಇದ್ರೆ ಹೋರಾಟಕ್ಕೆ ಬನ್ನಿ . ಜನರನ್ನ ದಿಕ್ಕು ತಪ್ಪಿಸಬೇಡಿ . ನಿಮಗೆ ಸಮುದಾಯದ ಋಣ ಇದೆ . ಅದರಂತೆ ನಡೆದುಕೊಳ್ಳಿ ಎಂದರು ..

Leave a Reply

Your email address will not be published. Required fields are marked *

You cannot copy content of this page

error: Content is protected !!