ಕೋಣದ ದಾಳಿಯಿಂದ ಗಾಯಗೊಂಡಿರುವ ಮಹಿಳೆ

 

ಮಧುಗಿರಿ : ಕೊಡಿಗೇನಹಳ್ಳಿ ಹೋಬಳಿ ಹೊಲದಲ್ಲಿ ಎಮ್ಮೇ ಮೇಯಿಸುತ್ತಿದ್ದ ಮಹಿಳೆ ಮೇಲೆ ಗ್ರಾಮದಲ್ಲಿ ಸಾಕಿದ್ದ ಕೋಣವೊಂದು ದಾಳಿ ಮಾಡಿ ಮಹಿಳೆಯನ್ನು ಗಂಭೀರ ಗಾಯಗೊಳಿಸಿದ ಘಟನೆ ವರದಿಯಾಗಿದೆ.

 

ಹೋಬಳಿ ಗುಂಡಗಲ್ಲು ಗ್ರಾಮದಲ್ಲಿ ಕಳೆದ 5 ವರ್ಷಗಳ ಹಿಂದೆ ಬಿಟ್ಟಿದ್ದು ಕೋಣವೊಂದು ಬಲಿಷ್ಠವಾಗಿದ್ದು ಗ್ರಾಮದ ಸಾರ್ವಜನಿಕರಿಗೆ ಪ್ರತಿ ನಿತ್ಯ ಕಿರಕಿರಿ ಉಂಟು ಮಾಡುತ್ತಿದೆ. ಸಿದ್ಧಗಂಗಮ್ಮ ಕೋಂ ನಾರಾಯಣರೆಡ್ಡಿ ಎಂಬ ಮಹಿಳೆ ತನ್ನ ಜಮೀನಿನಲ್ಲಿ ಎಮ್ಮೆ ಮೇಯಿಸುತ್ತಿದ್ದಾಗ ಮಾರಣಾಂತಿಕ ಹಲ್ಲೇ ಮಾಡಿ ಗಂಭೀರಗಾಯಗೊಳಿಸದೆ ಎಂದು ಇಲ್ಲಿ ಗ್ರಾಮಸ್ಥರು ಆರೋಪಿಸಿದ್ದಾರೆ.

 

ಇನ್ನು ಮುಂದಾದರ ಗ್ರಾಮದಲ್ಲಿ ಕೋಣದ ದಾಳಿಯಿಂದ ರಕ್ಷಣೆ ಮಾಡಬೇಕೆಂದು ಇಲ್ಲಿ ಸಾರ್ವಜನಿಕರು ಒತ್ತಾಯಿಸಿದ್ದು ಕೂಡಲೇ ಸದರಿ ಕೋಣವನ್ನು ಸ್ಥಳಾಂತರ ಮಾಡುವಂತೆ ಗ್ರಾಮಸ್ಥರಾದ ಸತ್ಯನಾರಯಣ, ನರಸಿಂಹಮೂರ್ತಿ, ನರೇಂದ್ರ, ಸುಮಿತ್ರ, ಮಧುಮತಿ, ರಾಜೇಖರ್ ರೆಡ್ಡಿ, ನರಸಿಂಹಯ್ಯ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!