ಗುಬ್ಬಿ ತಾಲ್ಲೂಕಿನ ಚೇಳೂರು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಚಳಿ ಬೀಡಿಸಿದ ಗ್ರಾಮಸ್ಥರು.
ಚೇಳೂರು ಗ್ರಾಮಗದ ಯಾವುದೇ ಚರಂಡಿಗಳನ್ನು ಸ್ವಚ್ಚಗೊಳಿಸದೇ ಎಲ್ಲಿದರಲ್ಲಿ ಕಸದ ರಾಶಿ ಬಿದ್ದಿದರೂ ತಿರುಗಿ ನೋಡದ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದರು.
ಮೊನ್ನೆಯಷ್ಟೇ ಸುರಿದ ಭಾರಿ ಪ್ರಮಾಣದ ಮಳೆ ನೀರು ಗ್ರಾಮದಿಂದ ಹೊರಗೆ ಹೋಗಲು ಚರಂಡಿಗಳು ಸ್ವಚ್ಚ ವಿಲ್ಲಾದ ಕಾರಣ ಗ್ರಾಮದಲ್ಲಿರುವ ರಸ್ತೆಗಳೆಲ್ಲವು ನೀರಿನಿಂದ ತುಂಬಿ ಜನರು ಓಡಾಡುವುದು ತುಂಬ ಕಷ್ಟಕರವಾಗಿದೆ ಇದನ್ನು ಮನಗಂಡ ಜನತೆ ಆಕ್ರೋಶಭರಿತರಾಗಿ ಗ್ರಾಮ ಪಂಚಾಯ್ತಿ ಕಾರ್ಯಲಯದ ಮುಂಭಾಗದಲ್ಲಿ ಮುತ್ತಿಗೆ ಹಾಕಿ ಇಲ್ಲಿನ ಅಧಿಕಾರಿಗಳ ಬೇಜವಾಬ್ದಾರಿ ತನದ ವಿರುದ್ಧ ವಾಗ್ದಾಳಿ ನಡೆಸಿದರು.
ಗ್ರಾಮಗಳ ವಿಕ್ಷಣೆಗೆಂದು ಬಂದಿದ್ದ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ನರಸಿಂಹಯ್ಯ ನವರು ಗ್ರಾಮದ ಜನರನ್ನು ಎಷ್ಠೇ ಸಮಾಧಾನ ಮಾಡಿದರೂ ಸಮಾಧಾನವಾಗದ ಚೇಳೂರು ಗ್ರಾಮಸ್ಥರು ಅಧಿಕಾರಿಗಳಿಗೆ ಹಿಡಿ ಶಾಪಹಾಕಿ ನಿವೇಲ್ಲಾ ಹಣಕ್ಕಾಗಿ ಬಂದಿದ್ದೀರಾ ನಿಮ್ಮಗೆಲ್ಲ ಅಧಿಕಾರ ಬೇಕಾಗಿಲ್ಲ ಜನರ ಸಮಸ್ಯೆಗಳ ಬಗ್ಗೆ ನಿಮಗೆ ಕಿಂಚಿತ್ತು ಕಾಳಜಿ ಇಲ್ಲಾ ನಿಮ್ಮಂತಹ ಅಧಿಕಾರಿಗಳು ಗ್ರಾಮ ಪಂಚಾಯಿತಿ ಬಿಟ್ಟು ತೊಲಗಿ ಎಂದು ಗ್ರಾಮಸ್ಥರು ತಮ್ಮ ಆಕ್ರೋಶ ಹೊರಹಾಕಿದರು.
ಕಾರ್ಯನಿರ್ವಾಹಕ ಅಧಿಕಾರಿಗಳಾದ ನರಸಿಂಹಯ್ಯನವರು ವಿವಿಧ ಗ್ರಾಮಗಳನ್ನು ವೀಕ್ಷೀಸಿ ಚೇಳೂರಿಗೆ ಬಂದಾಗ ಗ್ರಾಮ ಪಂಚಾಯಿತಿ ಮುಂದೆ ಅವರಿಗೆ ಗೇರವೂ ಹಾಕಿ ಗಲಾಟೆ ಮಾಡಿದರು.ಗ್ರಾಮ ಪಂಚಾಯಿತಿ ಅಧಿಕಾರಿಗಳು ತಿಳಿದು ತಿಳಿಯದಂತೆ ಕೈಕಟ್ಟಿ ನಿಂತಿದ್ದರು.ಇಓ ನರಸಿಂಹಯ್ತನವರು ಸರಿಪಡಿಸದಾಗಿ ಹೇಳಿದರು ಸಹ ಸುಮ್ಮನಾಗದ ಗ್ರಾಮಸ್ಥರು ಚರಂಡಿಯಲ್ಲಿ ಕಸ ಬಿದ್ದಿರುವುದನ್ನು ತೋರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇಓ ನರಸಿಂಹಯ್ಯನವರು ಮಾತನಾಡಿ ಗ್ರಾಮದ ಚರಂಡಿ ಸ್ವಚ್ಚತೆ ಬಗ್ಗೆ ಪಿಡಿಓ ಅಧ್ಯಕ್ಷರ ಜತೆ ಚರ್ಚಿಸಿ ಕೊಡಲೇ ಚರಂಡಿಗಳನ್ನು ಸ್ವಚ್ಚಮಾಡಲು ಈಗಲೇ ತಿಳಿಸುತ್ತೇನೆ ಎಂದು ಭರವಸೆ ನೀಡಿದಾಗ ಪ್ರತಿಭಟನೆಯನ್ನು ಹಿಂಪಡೆದರು.
ವರದಿ ಯೋಗೀಶ್ ಮೇಳೇಕಲ್ಲಹಳ್ಳಿ