ವಾಹನಗಳ ಟೋಯಿಂಗ್ ಸಂಬಂಧ ಸಾರ್ವಜನಿಕರು ಹಾಗೂ ಟ್ರಾಫಿಕ್ ಪೊಲೀಸರ ನಡುವೆ ವಾಗ್ವಾದ.

ವಾಹನಗಳ ಟೋಯಿಂಗ್ ಸಂಬಂಧ ಸಾರ್ವಜನಿಕರು ಹಾಗೂ ಟ್ರಾಫಿಕ್ ಪೊಲೀಸರ ನಡುವೆ ವಾಗ್ವಾದ.

 

ತುಮಕೂರು_ತುಮಕೂರು ನಗರದಲ್ಲಿ ದಿನದಿನ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದ್ದು ಟ್ರಾಫಿಕ್ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆ ಸಾಕಷ್ಟು ಕ್ರಮಗಳನ್ನು ಕೈಗೊಂಡು ತುಮಕೂರು ನಗರದ ಹಲವು ಪ್ರದೇಶಗಳಲ್ಲಿ ಪಾರ್ಕಿಂಗ್ ಸಂಬಂಧ ಜಾಗಗಳನ್ನು ಗುರುತಿಸಿ ಪಾರ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ.

 

 

ಈ ಸಂಬಂಧ ಟ್ರಾಫಿಕ್ ಪೊಲೀಸ್ ಇಲಾಖೆ ವಾಹನಗಳ ನಿಗದಿತ ನಿಲುಗಡೆ ಪ್ರದೇಶದಲ್ಲಿ ನಿಂತಿರುವ ವಾಹನಗಳನ್ನು ಬಿಟ್ಟು ಅನಧಿಕೃತವಾಗಿ ನೋ ಪಾರ್ಕಿಂಗ್ ಜಾಗದಲ್ಲಿ ನಿಂತಿರುವ ವಾಹನಗಳನ್ನು ಸಾಮಾನ್ಯವಾಗಿ ಟೋಯಿಂಗ್ ಮಾಡಿ ಗಾಡಿಗಳನ್ನು ಸೀಜ್ ಮಾಡುವ ಮೂಲಕ ವಾಹನ ಸವಾರರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡುತ್ತಿದ್ದಾರೆ ಇದು ಎಲ್ಲರಿಗೂ ಗೊತ್ತಿರುವ ವಿಷಯ.

 

 

ಆದರೆ ಗುರುವಾರ ತುಮಕೂರಿನ ಚರ್ಚ್ ವೃತ್ತದ ಬಳಿಯಿರುವ ಉಪ ನೋಂದಣಾಧಿಕಾರಿಗಳ ಕಚೇರಿ ಬಳಿ ನಿಂತಿದ್ದ ವಾಹನಗಳನ್ನು ಪೊಲೀಸರು ನೋ ಪಾರ್ಕಿಂಗ್ ಜಾಗದಲ್ಲಿ ಹಾಗೂ ನಿಲುಗಡೆ ಪ್ರದೇಶದಲ್ಲಿದ್ದ ಎಲ್ಲಾ ವಾಹನಗಳನ್ನು ಟೋಯಿಂಗ್ ಮಾಡುತ್ತಿದ್ದಾರೆ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಟ್ರಾಫಿಕ್ ಪೊಲೀಸರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ನಡೆಸಿದ್ದಾರೆ.

 

 

ಈ ಸಂಬಂಧ ವಿಡಿಯೋ ವೈರಲ್ ಆಗಿದ್ದು ಸಾರ್ವಜನಿಕರು ಸ್ಥಳಕ್ಕೆ ಶಾಸಕರು ಹಾಗೂ ಸಂಸದರು ಬರಬೇಕು ಎಂದು ಪಟ್ಟು ಹಿಡಿದಿರುವ ಘಟನೆ ನಡೆದಿದ್ದು ಪೊಲೀಸರ ಮನವೊಲಿಕೆ ನಂತರ ಪರಿಸ್ಥಿತಿ ತಿಳಿದುಕೊಂಡಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!