ಹೋಂ ಗಾರ್ಡ್ಸ್ ವತಿಯಿಂದ ವನಮಹೋತ್ಸವ ಆಚರಣೆ.
ತುಮಕೂರಿನ ಹೋಂ ಗಾರ್ಡ್ಸ್ ಕೇಂದ್ರ ಕಚೇರಿ ವತಿಯಿಂದ ಸಿದ್ದಗಂಗಾ ಮಠದ ಬಳಿಯ ಮರನಾಯಕನ ಪಾಳ್ಯ ಹಾಗೂ ಅಜ್ಜಿ ಮಾರಮ್ಮ ದೇವಸ್ಥಾನದ ಬಳಿ ತುಮಕೂರಿನ ಹೋಂ ಗಾರ್ಡ್ಸ್ ಕೇಂದ್ರ ಕಚೇರಿ ಹಾಗೂ ಉರ್ಡಿಗೆರೆ ಗೃಹರಕ್ಷಕ ದಳದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು.
ತುಮಕೂರು ಹೋಂ ಹೋಂಗಾರ್ಡ್ ಘಟಕದ ಜಿಲ್ಲಾ ಕಮಾಂಡೆಂಟ್ ಆರ್ ಪಾತಣ್ಣ ರವರ ಅಧ್ಯಕ್ಷತೆಯಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸುಮಾರು ಐನೂರಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ತುಮಕೂರು ಹೋಂಗಾರ್ಡ್ ಜಿಲ್ಲಾ ಕಮಾಂಡೆಂಟ್ ಆರ್ ಪಾತಣ್ಣ ಮಾತನಾಡಿ ಬೆಂಗಳೂರಿನ ಕೇಂದ್ರ ಕಚೇರಿಯ ಆದೇಶದ ಮೇರೆಗೆ ಡಿ ಜಿ ಪಿ, ಡಿ ಸಿ ಜಿ ಹಾಗೂ ಐಜಿ ರವರ ಆದೇಶದ ಮೇರೆಗೆ ವನಮಹೋತ್ಸವ ಕಾರ್ಯಕ್ರಮ ಆಚರಿಸಲಾಗುತ್ತಿದ್ದು ಅದರಂತೆ ತುಮಕೂರಿನ ಗೃಹರಕ್ಷಕದಳದ ವತಿಯಿಂದ ವನಮಹೋತ್ಸವ ಆಚರಿಸಲಾಗುತ್ತಿದೆ, ತುಮಕೂರು ಜಿಲ್ಲೆಯಲ್ಲಿ 18 ಘಟಕಗಳು ಇದ್ದು ಪ್ರತಿ ಘಟಕದ ವತಿಯಿಂದ ಸುಮಾರು 300 ರಿಂದ 400 ಗಿಡಗಳನ್ನು ನೆಡಲಾಗುತ್ತಿದ್ದು ಅದರಂತೆ ತುಮಕೂರಿನ ಕೇಂದ್ರ ಕಚೇರಿಯ ಘಟಕ ಹಾಗೂ ಉರ್ಡಿಗೆರೆ ಘಟಕದ ವತಿಯಿಂದ ಐನೂರಕ್ಕೂ ಹೆಚ್ಚು ಗಿಡಗಳನ್ನು ಇಂದು ನಮ್ಮ ಹೋಂ ಗಾರ್ಡ್ಸ್ ಸಿಬ್ಬಂದಿಗಳು ತುಮಕೂರಿನ ಹಲವುಭಾಗಗಳಲ್ಲಿ ಗಿಡಗಳನ್ನು ನಾಟಿ ಮಾಡುತ್ತಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಪ್ರತಿ ಹದಿನೈದು ದಿನಗಳಿಗೆ ಒಮ್ಮೆ ಹೋಂಗಾರ್ಡ್ ಸಿಬ್ಬಂದಿಗಳಿಂದ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಗಿಡಗಳ ಪೋಷಣೆ ಮಾಡಲಾಗುವುದು ಇದಕ್ಕೆ ಸಹಕರಿಸಿದ ಸಿಬ್ಬಂದಿಗಳಿಗೆ ಧನ್ಯವಾದಗಳು ಅರ್ಪಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಕೃಷ್ಣಪ್ಪ, ಉರ್ಡಿಗೆರೆ ಘಟಕದ ಅಧಿಕಾರಿಯಾದ ರಾಮಯ್ಯ, ತುಮಕೂರು ಘಟಕದ ಪ್ರಕಾಶ್ ಮೂರ್ತಿ, ಕಚೇರಿ ಸಿಬ್ಬಂದಿಗಳಾದ ಯತಿರಾಜು, ಇನ್ಸ್ಟ್ರಕ್ಟರ್ ಹನುಮಂತರಾಯಪ್ಪ, ಶ್ರೀನಿವಾಸ್ ಸೇರಿದಂತೆ ಹೋಂ ಗಾರ್ಡ್ಸ್ ಸಿಬ್ಬಂದಿಗಳು ಹಾಜರಿದ್ದರು.