ನಾವೂ ರೈತರೇ, ರಾಹುಲ್, ಪ್ರಿಯಾಂಕಾ ಗಾಂಧಿ ನಮ್ಮ ಮನೆಗೂ ಭೇಟಿ ನೀಡಿದ್ದರೆ ಖುಷಿಯಿಂದಲೇ ಸ್ವಾಗತಿಸುತ್ತಿದ್ದೆವು”

ನಾವೂ ರೈತರೇ, ರಾಹುಲ್, ಪ್ರಿಯಾಂಕಾ ಗಾಂಧಿ ನಮ್ಮ ಮನೆಗೂ ಭೇಟಿ ನೀಡಿದ್ದರೆ ಖುಷಿಯಿಂದಲೇ ಸ್ವಾಗತಿಸುತ್ತಿದ್ದೆವು”

 

ಲಖಿಂಪುರ ಖೇರಿ, ಅ.9: ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬುಧವಾರ ಲಖಿಂಪುರ ಖೇರಿ ಜಿಲ್ಲೆಯ ತಿಕುನಿಯಾಕ್ಕೆ ಭೇಟಿ ನೀಡಿ ಅ.3ರಂದು ನಡೆದಿದ್ದ ಹಿಂಸಾಚಾರದಲ್ಲಿ ಮೃತಪಟ್ಟಿರುವ ಪ್ರತಿಭಟನಾನಿರತ ರೈತರ ಕುಟುಂಬಗಳನ್ನು ಭೇಟಿಯಾಗಿದ್ದರು. ಘರ್ಷಣೆಗಳ ಸಂದರ್ಭ ಮೃತ ಪತ್ರಕರ್ತ ರಮಣ ಕಶ್ಯಪ ಅವರ ಮನೆಗೂ ಈ ನಾಯಕರು ಭೇಟಿ ನೀಡಿದ್ದರು. ಆದರೆ ಹಿಂಸಾಚಾರದಲ್ಲಿ ಮೃತಪಟ್ಟಿರುವ ಬಿಜೆಪಿ ಕಾರ್ಯಕರ್ತ ಶುಭಂ ಮಿಶ್ರಾನ ಕುಟುಂಬ ಸದಸ್ಯರು ಉಭಯ ನಾಯಕರು ತಮ್ಮನ್ನು ಭೇಟಿಯಾಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಎಂದು thewire.com ವರದಿ ಮಾಡಿದೆ.

ಹಿಂಸಾಚಾರದಲ್ಲಿ ತಮ್ಮವರನ್ನು ಕಳೆದುಕೊಂಡಿರುವ ಕುಟುಂಬಗಳೊಂದಿಗೆ ಏಕತೆಯನ್ನು ಪ್ರದರ್ಶಿಸಲು ರಾಹುಲ್ ಮತ್ತು ಪ್ರಿಯಾಂಕಾ ಇಲ್ಲಿಗೆ ಆಗಮಿಸಿದ್ದರು. ನಾವೂ ರೈತರೇ ಮತ್ತು ಹಿಂಸಾಚಾರದಲ್ಲಿ ನಾವೂ ನಮ್ಮ ಮಗನನ್ನು ಕಳೆದುಕೊಂಡಿದ್ದೇವೆ. ಉಭಯ ನಾಯಕರು ನಮ್ಮ ಮನೆಗೂ ಭೇಟಿ ನೀಡಿದ್ದರೆ ನಾವು ಖುಷಿಯಿಂದಲೇ ಅವರನ್ನು ಸ್ವಾಗತಿಸುತ್ತಿದ್ದೆವು ೞಎಂದು ಶುಭಂ ತಂದೆ ವಿಜಯ ಮಿಶ್ರಾ ಅವರು ಸುದ್ದಿಗಾರರಿಗೆ ತಿಳಿಸಿದರು.

     

ಶುಭಂ ಬಿಜೆಪಿ ಬೂತ್ ಅಧ್ಯಕ್ಷನಾಗಿದ್ದರೂ ಆತನ ಕುಟುಂಬವು, ಕೇಸರಿ ಪಕ್ಷವು ಆತನನ್ನು ‘ಬಲಿಯ ಕುರಿ’ಯನ್ನಾಗಿ ಬಳಸಿಕೊಂಡಿರಬಹುದು. ಕೆಲವು ಸ್ಥಳೀಯ ಬಿಜೆಪಿ ನಾಯಕರು ನಮ್ಮನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರಾದರೂ ಹಿರಿಯ ಬಿಜೆಪಿ ನಾಯಕರ್ಯಾರೂ ನಮ್ಮನ್ನು ಈವರೆಗೆ ಭೇಟಿಯಾಗಿಲ್ಲ ಎಂದು ಹೇಳಿದೆ.

“ನಾವು ಬಿಜೆಪಿಯೊಂದಿಗೆ ಹಿಂದಿನಿಂದಲೂ ಗುರುತಿಸಿಕೊಂಡಿದ್ದೇವೆ, ಆದರೆ ಕಾಂಗ್ರೆಸ್ ನಾಯಕರು ನಮ್ಮನ್ನು ಭೇಟಿಯಾಗಿದ್ದರೆ ನಾವು ತಿರಸ್ಕರಿಸುತ್ತಿರಲಿಲ್ಲ” ಎಂದು ಶುಭಂ ಕುಟುಂಬದ ಸದಸ್ಯರು ಹೇಳಿದರು. ಎಲ್ಲರೂ ತಮ್ಮನ್ನು ದೂರ ಮಾಡುತ್ತಿದ್ದಾರೆ. ಮಾಧ್ಯಮಗಳೂ ಶುಭಂನನ್ನು ಖಳನಾಯಕ ಎಂಬಂತೆ ಬಿಂಬಿಸುತ್ತಿವೆ ಎಂಬ ವಿಷಾದ ಕುಟುಂಬವನ್ನು ಆವರಿಸಿದೆ.

ಯಾರೂ ನಮ್ಮಂದಿಗೆ ಮಾತನಾಡುತ್ತಿಲ್ಲ,ಯಾರೂ ನಮ್ಮನ್ನು ಆಲಿಸುತ್ತಿಲ್ಲ. ರೈತರ ಕುಟುಂಬಗಳನ್ನು ಭೇಟಿಯಾಗಲು ತಾವು ಬಂದಿದ್ದಾಗಿ ರಾಹುಲ್ ಮತ್ತು ಪ್ರಿಯಾಂಕಾ ಹೇಳುತ್ತಾರೆ,ಆದರೆ ನಾವೂ ರೈತರಲ್ಲವೇ? ಸಂತ್ರಸ್ತರನ್ನು ಭೇಟಿಯಾಗಲು ತಾವು ಬಂದಿದ್ದಾಗಿ ಅವರು ಹೇಳುತ್ತಾರೆ,ನಾವೂ ಸಂತ್ರಸ್ತರಲ್ಲವೇ? ಅದೇ ಹಿಂಸಾಚಾರದಲ್ಲಿ ನಾವೂ ಮಗನನ್ನು ಕಳೆದುಕೊಂಡಿಲ್ಲವೇ ಎಂದು ವಿಜಯ ಮಿಶ್ರಾ ಪ್ರಶ್ನಿಸಿದರು.

ಶುಭಂ ತುಂಬ ದಯಾಳು ವ್ಯಕ್ತಿಯಾಗಿದ್ದ. ಕೋವಿಡ್ ಸಂದರ್ಭದಲ್ಲಿ ಆತ ಯಾರದೇ ಧರ್ಮ ಅಥವಾ ಜಾತಿಯನ್ನು ಪರಿಗಣಿಸದೇ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿದ್ದ. ಹಿಂದುಗಳಷ್ಟೇ ಮುಸ್ಲಿಮರಿಗೂ ಆತ ದಿನಸಿಯನ್ನು ವಿತರಿಸಿದ್ದ. ಅದೇ ರೀತಿ ದುಃಖಕ್ಕೆ ಯಾವುದೇ ಧರ್ಮ,ಜಾತಿ ಅಥವಾ ರಾಜಕೀಯವಿಲ್ಲ ಎಂದು ಶುಭಂ ಶ್ನೇಹಿತ ಪ್ರವೀಣ ಮಿಶ್ರಾ ನುಡಿದರು.

ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ ಕಾಂಗ್ರೆಸ್ ನಾಯಕರು ಶುಭಂ ಕುಟುಂಬವನ್ನೂ ಭೇಟಿಯಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದರು. ಕಾಂಗ್ರೆಸ್ ಆಡಳಿತದ ರಾಜ್ಯಗಳಾದ ಪಂಜಾಬ ಮತ್ತು ಛತ್ತೀಸ್ಗಡಗಳ ಮುಖ್ಯಮಂತ್ರಿಗಳು ಅ.3ರಂದು ಮೃತಪಟ್ಟ ರೈತರ ಕುಟುಂಬಗಳಿಗೆ 50 ಲ.ರೂ.ಗಳ ಪರಿಹಾರವನ್ನು ವಿತರಿಸಿದಾಗ ತಮ್ಮನ್ನೂ ಸೇರಿಸಿಕೊಳ್ಳಬೇಕಿತ್ತು ಎಂದು ಶುಭಂ ಕುಟುಂಬವು ಹೇಳಿತು.

ಶುಭಂ ಪುತ್ರಿ ಮತ್ತು ಪತ್ನಿಯನ್ನು ಅಗಲಿದ್ದಾನೆ. ನಮ್ಮ ಹಣಕಾಸು ಸ್ಥಿತಿ ಚೆನ್ನಾಗಿಲ್ಲ ಮತ್ತು ನಮಗೆ ಸಿಕ್ಕ ಎಲ್ಲ ನೆರವೂ ನಮಗೆ ಉಪಯೋಗಿಯಾಗುತ್ತಿತ್ತು. ದುಃಖದಲ್ಲಿ ಯಾವುದೇ ಪಕ್ಷ ರಾಜಕೀಯವಿರಬಾರದು ೞಎಂದು ವಿಜಯ ಮಿಶ್ರಾ ಹೇಳಿದರು.  

ಸುದ್ದಿಗಾರರನ್ನು ಬೀಳ್ಕೊಡುವಾಗ ವಿಜಯ ಮಿಶ್ರಾ, ನಮ್ಮ ದುಃಖವನ್ನು ಹಂಚಿಕೊಳ್ಳಲು ರಾಹುಲ್ ಮತ್ತು ಪ್ರಿಯಾಂಕಾರನ್ನು ನಾವು ಆಹ್ವಾನಿಸುತ್ತಿದ್ದೇವೆ ಎನ್ನುವುದನ್ನು ದಯವಿಟ್ಟು ನಿಮ್ಮ ವರದಿಯಲ್ಲಿ ಉಲ್ಲೇಖಿಸಿ ಎಂದು ಹೇಳಿದರು.

Leave a Reply

Your email address will not be published. Required fields are marked *

You cannot copy content of this page

error: Content is protected !!