ತುಮಕೂರು _ಬಿಜೆಪಿ ಪಕ್ಷದಲ್ಲಿ ಬಕೆಟ್ ಹಿಡಿದು ರಾಜಕಾರಣ ಮಾಡುವವರಿಗೆ ಮನೆ ಹಾಕಲಾಗುತ್ತಿದೆ ಇನ್ನು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಾಗೂ ಮುಖಂಡರ ಕಡೆಗಣಿಸಲಾಗುತ್ತಿದೆ ಎಂದು ತುರುವೇಕೆರೆ ಕ್ಷೇತ್ರದ ಶಾಸಕ ಮಸಾಲ ಜಯರಾಮ್ ಆರೋಪಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು ಮನೆಯಲ್ಲಿ ಮಲಗಿದವರಿಗೆ ಕರೆದು ನಿಗಮ-ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಿ ಅಧ್ಯಕ್ಷರನ್ನಾಗಿ ಮಾಡುತ್ತಾರೆ ಪಕ್ಷದಲ್ಲಿ ಹೋರಾಟ ಮಾಡಿ ಪಕ್ಷ ಸಂಘಟನೆ ಮಾಡಿದ ಕಾರ್ಯಕರ್ತರಿಗೆ ಪಕ್ಷದಲ್ಲಿ ಬೆಲೆ ಸಿಗುತ್ತಿಲ್ಲ ಎಂದರು.
ಇನ್ನು ಜಿಲ್ಲೆಯಲ್ಲಿ ನಡೆದ ಉಪಚುನಾವಣೆ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಪಟ್ಟಣ ಪಂಚಾಯಿತಿ ಚುನಾವಣೆ ಸೇರಿದಂತೆ ಸಾಕಷ್ಟು ಚುನಾವಣೆಗಳಲ್ಲಿ ತೊಡಗಿಸಿಕೊಂಡಿದ್ದು ಸಾಕಷ್ಟು ಹೋರಾಟ ಮಾಡಿ ದರು ಪಕ್ಷದ ವರಿಷ್ಠರು ಮುಖ್ಯಮಂತ್ರಿಗಳು ಹಾಗೂ ಮುಖಂಡರು ನಮ್ಮನ್ನ ಗುರುತಿಸುತ್ತಿಲ್ಲ ಇನ್ನು ನಮ್ಮನ್ನ ಮೂಲೆಗುಂಪು ಮಾಡುವ ಪ್ರಯತ್ನ ಪಕ್ಷದಲ್ಲಿ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ತಾವು ಸಚಿವ ಸ್ಥಾನ ಕೇಳುತ್ತಿಲ್ಲ ನಾನು ಕೇಳುತ್ತಿರುವುದು ನಿಗಮ ಮಂಡಳಿ ಇನ್ನು ಮನೆಯಲ್ಲಿ ಮಲಗಿದವರಿಗೆ ಕರೆದು ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುತ್ತಾರೆ ಇದರಿಂದ ತಮಗೂ ಕೂಡ ವೈಯಕ್ತಿಕ ಬೇಸರ ತರಿಸಿದೆ ಹಾಗಾಗಿ ನವಂಬರ್ 1 ನೇ ತಾರೀಖಿನವರೆಗೂ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದು ಒಂದನೇ ತಾರೀಖಿನ ನಂತರ ನನ್ನ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸುವುದಾಗಿ ವರಿಷ್ಠರಿಗೆ ಎಚ್ಚರಿಕೆ ಸಂದೇಶವನ್ನು ಸಹ ನೀಡಿದ್ದಾರೆ
ಬಿಜೆಪಿ ಪಕ್ಷದಲ್ಲಿ ಬಕೆಟ್ ರಾಜಕಾರಣ ನಡೆಯುತ್ತಿದೆ.
ಇನ್ನು ರಾಜ್ಯ ಬಿಜೆಪಿ ಪಕ್ಷದಲ್ಲಿ ಬಕೆಟ್ ರಾಜಕಾರಣ ಇದ್ದು ಅದರಿಂದ ನಿಷ್ಠಾವಂತ ಕಾರ್ಯಕರ್ತರು ಹಾಗೂ ಪಕ್ಷಕ್ಕಾಗಿ ದುಡಿದ ಮುಖಂಡರನ್ನು ಕಡೆಗಣಿಸಲಾಗುತ್ತಿದೆ ಇನ್ನೂ ಮುಖಂಡರ ಮುಂದೆ ಓಡಾಡಿಕೊಂಡು ದೇವಸ್ಥಾನಗಳಲ್ಲಿ ಕಾಯಿ ಒಡೆದು ಪೂಜೆ ಮಾಡಿಸುವವರಿಗೆ ಪಕ್ಷದಲ್ಲಿ ಮಣೆ ಹಾಕಲಾಗುತ್ತಿದೆ ಇನ್ನು ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಯಾವುದೇ ಮನ್ನಣೆ ಸಿಗದಿರುವುದು ಬೇಸರ ತರಿಸಿದೆ ಎಂದರು.
ಇನ್ನು ನಮ್ಮ ಪಕ್ಷದ ಕಾರ್ಯಕರ್ತರೇ ನಮ್ಮನ್ನ ಪ್ರಶ್ನೆ ಮಾಡುವಂತಹ ಸ್ಥಿತಿಗೆ ನಾವಿಂದು ಬಂದಿದ್ದೇವೆ. ತಾಲೂಕಿನಲ್ಲಿ ಗರಿಷ್ಠ ಗ್ರಾಮ ಪಂಚಾಯತ್ ಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದು ಜಿಲ್ಲಾ ಪಂಚಾಯತ್ ತಾಲೂಕ್ ಪಂಚಾಯತ್ ಚುನಾವಣೆಗಳಲ್ಲಿ ಶ್ರಮಿಸಿದ್ದಾರೆ. ಇನ್ನು ಲೋಕಸಭಾ ಚುನಾವಣೆಯಲ್ಲಿ ತಾವು ಪಡೆದ ಮತ ಕಿಂತ ಹೆಚ್ಚು ಮತಗಳನ್ನು ಲೋಕಸಭಾ ಚುನಾವಣೆಯಲ್ಲಿ ಹಾಕಿಸುವ ಮೂಲಕ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಗೆ ತುರುವೇಕೆರೆ ಕ್ಷೇತ್ರದ ಮತದಾರರು ಗೆಲುವಿನಲ್ಲಿ ಕೈಜೋಡಿಸಿದ್ದಾರೆ ಇದರ ಮೂಲಕ ಮಾಜಿ ಪ್ರಧಾನಿಯೊಬ್ಬರು ಸೋಲನ್ನು ಸಹ ಅನುಭವಿಸುವಂತಾಯಿತು ಎಂದರು.
ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿ ತಮಗೆ ಬೇಡವಾಗಿದ್ದು ಇನ್ನೂ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರೆಯುವ ಇಂಗಿತವನ್ನು ಶಾಸಕ ಮಸಾಲೆ ಜಯರಾಮ್ ವ್ಯಕ್ತಪಡಿಸಿದ್ದಾರೆ.