ತುಮಕೂರು.
ಉಳಿದಿರುವ ೨ ವರ್ಷಗಳ ಪೂರ್ತಿ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಂದುವರೆ ಸುವಂತೆ ಚಿಕ್ಕತೊಟ್ಲುಕೆರೆ ಅಟವಿ ಮಠದ ಅಧ್ಯಕ್ಷರಾದ ಶ್ರೀ ಅಟವೀ ಶಿವಲಿಂಗಸ್ವಾಮೀಜಿ ಮತ್ತು ವೀರಶೈವ ಸಮಾಜದ ಮುಖಂಡರು ಬಿಜೆಪಿ ವರಿಷ್ಠರಿಗೆ ಮನವಿ ಮಾಡಿದರು.
ನಗರದ ಜೆ.ಸಿ. ರಸ್ತೆಯ ವೀರಶೈವ ಕಲ್ಯಾಣ ಮಂಟಪ ದಲ್ಲಿ ಇಂದು ಬೆಳಿಗ್ಗೆ ಏರ್ಪ ಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ವಯಸ್ಸಿನ ಕಾರಣ ನೀಡಿ, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದು ಸೂಕ್ತವಲ್ಲ ಎಂದ ಸ್ವಾಮೀಜಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷ ಆಂತರಿಕವಾಗಿ ಚರ್ಚಿಸಿ, ಸೂಕ್ತ ನಿರ್ಧಾರಕ್ಕೆ ಬರಬಹುದಿತ್ತು. ಅದನ್ನು ಬಿಟ್ಟು ಸಾರ್ವಜನಿಕ ಚರ್ಚೆಗೆ ಅವಕಾಶವಾಗ ಬಾರದಿತ್ತು ಎಂದು ಸಲಹೆ ನೀಡಿದರು.
ಯಡಿಯೂರಪ್ಪನವರು ಉಳಿದಿರುವ ೨ ವರ್ಷ ಮುಖ್ಯಮಂತ್ರಿಯಾಗಿ ಸರ್ಕಾರ ನಡೆಸಿದರೆ ಬಿಜೆಪಿ ಪಕ್ಷಕ್ಕೆ ಹೆಚ್ಚು ಅನುಕೂಲವಾಗಲಿದೆ. ಇಲ್ಲದಿ ದ್ದರೆ ಹೆಚ್ಚು ನಷ್ಟ ಸಂಭವಿಸುವ ಸಾಧ್ಯತೆ ಇದೆ ಎಂದರು.
ಕೊರೊನಾ ಸಂಕಷ್ಟ ಕಾಲದಲ್ಲಿ ಸರ್ಕಾರವನ್ನು ಹೆಚ್ಚು ದಕ್ಷತೆಯಿಂದ ನಡೆಸಿದ ಸಮರ್ಥ ನಾಯಕ ಯಡಿ ಯೂರಪ್ಪನವರನ್ನು ನಾಯ ಕತ್ವದಿಂದ ಬದಲಾಯಿಸುವ ಅಗತ್ಯವಿಲ್ಲ. ಅವರನ್ನು ಮುಂದುವರೆಸಿ, ಕೊರೊನಾ ಮೂರನೆ ಅಲೆ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲು ಅವಕಾಶ ಮಾಡಿಕೊಡಬೇಕು ಎಂದರು.
ನಗರ ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ. ಶೇಖರ್ ಮಾತನಾಡಿ, ಬಿ.ಎಸ್. ಯಡಿಯೂರಪ್ಪರನ್ನು ಮುಖ್ಯ ಮಂತ್ರಿ ಸ್ಥಾನದಿಂದ ಪದಚ್ಯುತಿ ಗೊಳಿಸುವ ಹುನ್ನಾರವನ್ನು ನಮ್ಮ ಸಮಾಜ ಖಂಡಿಸುತ್ತದೆ ಎಂದರು.
ಉಳಿದ ಅವಧಿಗೆ ಅವರೆ ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಎಂದು ನಮ್ಮ ಸಮಾಜದ ಎಲ್ಲ ಅಂಗ ಸಂಸ್ಥೆಗಳಿAದ ಬಿಜೆಪಿ ವರಿಷ್ಠರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದು, ಪೂರ್ಣಾವಧಿ ನಂತರ ಮುಂದಿನ ನಿರ್ಧಾರ ಪ್ರಕಟಿಸ ಬಹುದು ಎಂದರು.
ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಯಡಿಯೂರಪ್ಪ ನವರು ಕಟ್ಟಿ, ಬೆಳೆಸಿದ್ದು, ಎಲ್ಲ ಜನಾಂಗದ ಸರ್ವಸಮ್ಮತ ನಾಯಕರಾಗಿದ್ದಾರೆ ಇಂತಹವರನ್ನು ಪದಚ್ಯುತಿ ಗೊಳಿಸುವುದು ನೋವಿನ ಸಂಗತಿಯಾಗಿದೆ ಎಂದರು.
ರಾಜ್ಯದ ವಿವಿಧ ಮಠಾ ಧೀಶರು ಯಡಿಯ್ಯೂರಪ್ಪನವರ ಬೆಂಬಲಕ್ಕೆ ನಿಂತಿದ್ದು, ಇದೊಂದು ಜನಾಂದೋಲನ ವಾಗಿ ಮಾರ್ಪಡುವ ಮುಂಚೆ ಬಿಜೆಪಿ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಪಡಿಸಿದರು.
ಈ ಹಿಂದೆ ನಮ್ಮ ಸಮುದಾಯದ ವ್ಯಕ್ತಿಗಳು ಮುಖ್ಯಮಂತ್ರಿಯಾಗಿದ್ದಾಗ ಅವರು ಪೂರ್ಣಾವಧಿ ಅಧಿಕಾರ ನಡೆಸಲು ಸಾಧ್ಯವಾಗಿಲ್ಲ. ಇದು ನಮ್ಮ ಸಮುದಾಯಕ್ಕೆ ಬೇಸರ ತರಿಸುತ್ತಿದೆ ಎಂದರು.
ಸಮಾಜದ ಉಪಾಧ್ಯಕ್ಷ ಎಸ್.ಜಿ.ಚಂದ್ರಮೌಳಿ, ಯುವ ಘಟಕದ ಅಧ್ಯಕ್ಷ ಅತ್ತಿರೇಣುಕಾನಂದ, ಅಖಿಲ ಭಾರತ ವೀರಶೈವ ಸಭಾದ ಅಧ್ಯಕ್ಷ ಮೋಹನಕುಮಾರ್ ಪಟೇಲ್, ಮುಖಂಡರಾದ ಹೆಚ್.ಮಲ್ಲಿಕಾರ್ಜುನಯ್ಯ, ಟಿ.ಎನ್. ಮಹದೇವಪ್ಪ, ರುದ್ರಪ್ಪ, ಶಿವಲಿಂಗಮ್ಮ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.