ತುಮಕೂರಿನಲ್ಲಿ ಮಹಿಳೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಬೃಹತ್ ಪ್ರತಿಭಟನೆ.
ತುಮಕೂರು_ಆಗಸ್ಟ್ 30
ಆಗಸ್ಟ್ 24 ರಂದು ತುಮಕೂರಿನ ಕ್ಯಾತ್ಸಂದ್ರ ಬಳಿಯ ಚೋಟಸಬರ ಪಾಳ್ಯದಲ್ಲಿ ಅದೇ ಗ್ರಾಮದ ಮಹಿಳೆ ಮೇಲೆ ಅತ್ಯಾಚಾರ ಮಾಡಿದ ಆರೋಪಿಗಳು ಕೊಲೆ ಮಾಡಿ ಪರಾರಿಯಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಇದುವರೆಗೂ ಪೊಲೀಸ್ ಇಲಾಖೆ ಯಾವುದೇ ಆರೋಪಿ ಬಂಧಿಸಿಲ್ಲ ಹಾಗೂ ಮಹಿಳೆಗೆ ನ್ಯಾಯ ದೊರಕಬೇಕು ಆರೋಪಿಗಳು ಶೀಘ್ರ ಬಂದನವಾಗಬೇಕು ಎಂದು ತುಮಕೂರಿನ ತಿಗಳ ಸಮುದಾಯದ ಮುಖಂಡರು, ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ತುಮಕೂರಿನ ಮಹಾನಗರ ಪಾಲಿಕೆ ಮೇಯರ್ ಕೃಷ್ಣಪ್ಪ ,ಉಪಮೇಯರ್ ,ಪಾಲಿಕೆ ವಿರೋಧಪಕ್ಷದ ನಾಯಕರು ಪಾಲಿಕೆಯ ಮಾಜಿ ಹಾಗೂ ಹಾಲಿ ಸದಸ್ಯರು ಹಾಗೂ ಎಲ್ಲ ಪಕ್ಷದ ಮುಖಂಡರು, ಸಾರ್ವಜನಿಕರು ಸೇರಿ ಬೃಹತ್ ಪ್ರತಿಭಟನೆ ಮಾಡಿದರು.
ಘಟನೆ ನಡೆದು ವಾರಗಳೇ ಆಗುತ್ತಾ ಬಂದಿದ್ದು ಇದುವರೆಗೂ ಯಾವುದೇ ಆರೋಪಿಗಳ ಬಂಧನ ಹಾಗೂ ಸುಳಿವು ಸಿಗದೆ ಇದು ಆರೋಪಿಗಳ ಬಂಧನ ಸಾಧ್ಯವಾಗದೆ ಇರುವುದನ್ನು ನೋಡಿದರೆ ಇದರ ಹಿಂದೆ ದೊಡ್ಡ ಷಡ್ಯಂತ್ರ ಹಾಗೂ ವ್ಯವಸ್ಥಿತವಾಗಿ ಈ ಘಟನೆ ನಡೆದಿದೆ . ಕಳೆದ ವಾರ ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೈಸೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ತನಿಖೆ ಕೈಗೊಂಡಿದ್ದಾರೆ ಆದರೆ ತುಮಕೂರು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರ ಸಿಗದೆ ಆರೋಪಿಗಳ ಬಂಧನ ಸಾಧ್ಯವಾಗದೆ ಪೊಲೀಸರು ಹೈರಾಣಾಗಿದ್ದಾರೆ ಎಂದು ಸಮುದಾಯದ ಮುಖಂಡರು ಆಕ್ರೋಶ ಹೊರಹಾಕಿದರು.
ತುಮಕೂರಿನ ಟೌನ್ ಹಾಲ್ ವೃತ್ಹದಿಂದ ತಗೊಂಡ ಪ್ರತಿಭಟನೆ ರಸ್ತೆಯುದ್ದಕ್ಕೂ ಆರೋಪಿಗಳಿಗೆ ಧಿಕ್ಕಾರ ಕೂಗಿದರು.
ನಂತರ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು ಅತ್ಯಾಚಾರದಲ್ಲಿ ಮೃತ್ಪಪಟ್ಟ ಮಹಿಳೆಗೆ ನ್ಯಾಯ ದೊರಕಬೇಕು, ಕೂಡಲೇ ಆರೋಪಿಗಲಿಗೆ ಮರಣದಂಡನೆ ಶಿಕ್ಷೆ ಆಗಬೇಕು ರಾಜ್ಯದಲ್ಲಿ ಪದೇಪದೇ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು ಅದನ್ನು ತಡೆಯುವ ಸಲುವಾಗಿ ಕಠಿಣ ಕಾನೂನು ತರುವ ಮೂಲಕ ಅತ್ಯಾಚಾರ ಪ್ರಕರಣಗಳಿಗೆ ಅಂಕುಶ ಹಾಕಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ರವರು ತುಮಕೂರಿನ ಚಿಕ್ಕ ಹಳ್ಳಿಯಲ್ಲಿ ನಡೆದ ಘಟನೆ ಅಮಾನುಷ ಕೃತ್ಯವಾಗಿದ್ದು ಶೀಘ್ರ ಆರೋಪಿಗಳ ಬಂಧನ ವಾಗಬೇಕು ಕಠಿಣ ಕಾನೂನು ಜಾರಿಯಾದಾಗ ಮಾತ್ರ ಇಂತಹ ಪ್ರಕರಣಗಳು ತಡೆಯಲು ಸಾಧ್ಯ ಹಾಗಾಗಿ ಇದರ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು ಎಂದು ತಿಳಿಸಿದರು.
ವನ್ನಿಕುಲ ರಾಜ್ಯಾಧ್ಯಕ್ಷರಾದ ಜೈರಾಜ್ ಮಾತನಾಡಿ ತುಮಕೂರಿನಲ್ಲಿ ನಡೆದ ಘಟನೆ ಹೇಯ ಕೃತ್ಯವಾಗಿದ್ದು ಶೀಘ್ರವೇ ಆರೋಪಿಗಳ ಬಂಧನವಾಗಿದೆ ಮೈಸೂರಿನಲ್ಲಿ ನಡೆದ ಪ್ರಕರಣದಲ್ಲಿ ಈಗಾಗಲೇ ಪ್ರಕರಣ ಭೇದಿಸಿದ ಪೊಲೀಸರು ಟೋಪಿಗಳನ್ನು ಬಂದಿಸಿದ್ದಾರೆ ಆದರೆ ತುಮಕೂರು ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಆರೋಪಿಗಳ ಬಂಧನವಾಗಿದೆ ಇರುವುದು ಶೋಚನೀಯ. ಮೈಸೂರಿನಲ್ಲಿ ನಡೆದ ಘಟನೆಗೆ ಸಿಕ್ಕ ಮಹತ್ವ ತುಮಕೂರಿನ ಪ್ರಕರಣದಲ್ಲಿ ಸಿಗದೇ ಇರುವುದು ನಮ್ಮ ಸಮುದಾಯಕ್ಕೆ ತೀವ್ರ ನೋವುಂಟು ಮಾಡಿದೆ ಎಂದು ರಾಜ್ಯಾಧ್ಯಕ್ಷ ಜಯರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡರಾದ ಗೋವಿಂದರಾಜು, ಜಾಂಗೀರ್ ರವಿ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ನಾಯಾಜ್, ಪಾಲಿಕೆ ಮಾಜಿ ಮೇಯರ್ ಲಲಿತ ರವೀಶ್, ರೇವಣಸಿದ್ದಯ್ಯ ಸೇರಿದಂತೆ ವಿವಿಧ ಸಂಘ ಸoಸ್ಥೆಗಳ ಮುಖಂಡರು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.