ತುಮಕೂರಿನ ವಕೀಲ ಬಿ.ಎನ್.ಪುಟ್ಟನರಸರೆಡ್ಡಿ ಅರೆಸ್ಟ್ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ ನ್ಯಾಯಾಧೀಶರು.
ತುಮಕೂರು:ತುಮಕೂರು ನಗರದ ಎಂ.ಜಿ.ರಸ್ತೆಯ ದ್ವಾರಕಾ ಹೋಟೆಲ್ ಹಿಂಭಾಗ ಲಕ್ಷ್ಮಿ ರಾಂ ಬಿಲ್ಡಿಂಗ್ ನಲ್ಲಿದ್ದ ಶ್ರೀ ವಿನಾಯಕ ಪತ್ತಿನ ಸಹಕಾರಿ ನಿಯಮಿತದ ಮಾಜಿ ಅಧ್ಯಕ್ಷರು,ಉಪಾಧ್ಯಕ್ಷರು,ಕಾರ್ಯದರ್ಶಿಗಳು ಮತ್ತು ಕೆಲವು ನಿರ್ದೇಶಕರು ಸೇರಿ ಸದರಿ ಬ್ಯಾಂಕ್ ನಲ್ಲಿ ಹಣವನ್ನು ದುರುಪಯೋಗಪಡಿಸಿಕೊಂಡು ಸದರಿ ನಿಯಮಿತದಲ್ಲಿ ಇಟ್ಟಿದ್ದ ನಿಗಧಿತ ಠೇವಣಿ ಹಣ,ಉಳಿತಾಯ ಖಾತೆಯಲ್ಲಿದ್ದ ಹಣ,ರಿಕರಿಂಗ್ ಡಿಪಾಸಿಟ್(ಆರ್.ಡಿ) ಮತ್ತು ಷೇರು ಹಣವನ್ನು ದುರುಪಯೋಗಪಡಿಸಿಕೊಂಡು ಸದರಿ ನಿಗದಿತ ಠೇವಣಿದಾರರಿಗೆ ಹಾಗೂ ಉಳಿತಾಯ ಖಾತೆದಾರರು,ಆರ್.ಡಿ.ಖಾತೆದಾರರಿಗೆ ಹಣವನ್ನು ಮರುಪಾವತಿಸದೆ ಸದರಿ ನಿಯಮಿತವನ್ನು ಮುಚ್ಚಿರುವುದರಿಂದ ಠೇವಣಿದಾರರಾದ ಶ್ರೀಮತಿ ಚಿಕ್ಕಹನುಮಕ್ಕ ಮತ್ತು ಎಂ.ಕೃಷ್ಣಮೂರ್ತಿರವರು ತುಮಕೂರು ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದಲ್ಲಿ ಅಮಲ್ಜಾರಿ ಸಂಖ್ಯೆ ೫೨/೨೦೨೧ ಮತ್ತು ಅಮಲ್ಜಾರಿ ಸಂಖ್ಯೆ ೭/೨೦೨೨ ಎರಡು ದಾವೆಗಳನ್ನು ಸಲ್ಲಿಸಿ ಸದರಿ ದಾವೆಗಳಲ್ಲಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕರಾದ ಬಿ.ಎನ್.ಪುಟ್ಟನರಸರೆಡ್ಡಿರವರನ್ನು ತುಮಕೂರು ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು.