ಸಿದ್ದಗಂಗಾ ಮಠದ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಕರಡಿಯೊಂದು ಬಿದ್ದಿದೆ. ಬೆಳಗುಂಬ ಹಾಗೂ ಉರ್ಡಿಗೆರೆ ಭಾಗದಲ್ಲಿ ಪದೇಪದೇ ಸಾರ್ವಜನಿಕರಿಗೆ ಕಾಣಿಸಿಕೊಳ್ಳುತ್ತಿದ್ದ ಕರಡಿಯೊಂದು ಕಳೆದ ರಾತ್ರಿ 7 ಗಂಟೆ ಸುಮಾರಿನಲ್ಲಿಸುಮಾರು 5 ವರ್ಷದ ಗಂಡು ಕರಡಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ. ಕಳೆದ ಕೆಲ ತಿಂಗಳುಗಳ ಹಿಂದೆ ಸಿದ್ದಗಂಗಾ ಮಠದಲ್ಲಿ ಕಾಣಿಸಿಕೊಂಡಿದ್ದ ದಿನದಿಂದಲೂ ಕಾರ್ಯಪ್ರವೃತ್ತರಾಗಿದ್ದು ಅರಣ್ಯ ಇಲಾಖೆ ಸಿಬ್ಬಂದಿಗಳು ಅಂದಿನಿಂದಲೂ ಇದರ ಬಗ್ಗೆ ಜಾಗೃತಿ ವಹಿಸಿದ್ದರು. ಕಳೆದ ರಾತ್ರಿ ಕರಡಿ ಬೋನಿಗೆ ಬಿದ್ದ ವಿಷಯ ರಾತ್ರಿ 10ಗಂಟೆ ಸುಮಾರಿನಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ಸಿಕ್ಕಿ ಸ್ಥಳಕ್ಕೆ ಭೇಟಿ ನೀಡಿ ಬೋನಿಗೆ ಬಿದ್ದ ಕರಡಿಯನ್ನು ರಕ್ಷಿಸಿದ್ದು ಬೆಂಗಳೂರಿನ ಬನ್ನೇರುಘಟ್ಟಕ್ಕೆ ಸ್ಥಳಾಂತರಿಸಲಾಗುವುದು ಎಂದು ಜಿಲ್ಲಾ ಅರಣ್ಯಧಿಕಾರಿ ಗಿರೀಶ್ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಉರ್ಡಿಗೆರೆ ವಲಯದ ಡಿಫ್ಆರ್ ಓ ಮನು ರವರು ಅರಣ್ಯ ಇಲಾಖೆಯ ಇಟ್ಟಿದ್ದ ಬೋನಿಗೆ ಕರಡಿ ಬಿದ್ದಿದ್ದು ಈ ಭಾಗದಲ್ಲಿ ಸಂಚರಿಸುವ ಜನರಿಗೆ ಈಗ ನಿಟ್ಟುಸಿರು ಬಿಡುವಂತಾಗಿದೆ ಹಾಗೂ ರಾತ್ರಿ ವೇಳೆಯಲ್ಲಿ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ಜಾಗೃತರಾಗಿ ಸಂಚರಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅರಣ್ಯಧಿಕಾರಿ ಚಿಕ್ಕ ರಾಜೇಂದ್ರ , ಅರ್ ಎಫ್ ಓ ನಟರಾಜ್, ಕೇಶವಮೂರ್ತಿ, ಬಾಲಕೃಷ್ಣ ,ನರಸಿಂಹರಾಜು, ರಾಘವೇಂದ್ರ ಸ್ವಾಮಿ ಹಾಜರಿದ್ದರು.