ಮಗನ ಮದುವೆಗೆ ಒಂದು ದಿನ ಬಾಕಿ ಇದ್ದರೂ ಕೆಲಸ ನಿರ್ವಹಿಸುತ್ತಿರುವ ಕಾಲೇಜು ಪ್ರಾಚಾರ್ಯ.

ಮಗನ ಮದುವೆಗೆ ಒಂದು ದಿನ ಬಾಕಿ ಇದ್ದರೂ ಕೆಲಸ ನಿರ್ವಹಿಸುತ್ತಿರುವ ಕಾಲೇಜು ಪ್ರಾಚಾರ್ಯ.

 

 

ತುಮಕೂರಿನ ಪ್ರಸಿದ್ಧ ಶಾಲಾ ಕಾಲೇಜು ಗಳಲ್ಲಿ ಒಂದಾದ ತುಮಕೂರಿನ ಸರ್ಕಾರಿ ಎಂಪ್ರೆಸ್ ಕಾಲೇಜಿನ ಪ್ರಾಚಾರ್ಯರಾದ ಎಸ್ ಷಣ್ಮುಖ ರವರು ಇಂದು ಕಾಲೇಜುಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕಾಲೇಜಿನ ಉಸ್ತುವಾರಿ ನಿರ್ವಹಿಸಿದರು.

 

ರಾಜ್ಯ ಸರ್ಕಾರ ಆಗಸ್ಟ್ 23ರಿಂದ ರಾಜ್ಯದ್ಯಂತ 9ರಿಂದ 12ನೇ ತರಗತಿ ಗೆ ಸಂಬಂಧಪಟ್ಟಂತೆ ಶಾಲಾ ಕಾಲೇಜುಗಳನ್ನು ತೆರೆಯಲು ಆದೇಶ ಹೊರಡಿಸಿತ್ತು ರಾಜ್ಯಾದ್ಯಂತ ಶಾಲಾ ಕಾಲೇಜುಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡ ವಿದ್ಯಾರ್ಥಿಗಳನ್ನು ಕೈಬೀಸಿ ಕರೆಯುವಂತೆ ಶಾಲಾ-ಕಾಲೇಜುಗಳು ಸಿಂಗಾರಗೊಂಡಿವೆ.

ಇನ್ನೂ ವಿಶೇಷವೆಂದರೆ ತುಮಕೂರಿನ ಸರ್ಕಾರಿ ಎಂಪ್ರೆಸ್ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕೆಲಸ ನಿರ್ವಹಿಸುತ್ತಿರುವ ಷಣ್ಮುಖ ರವರು ಸರಕಾರದ ನಿಯಮದಂತೆ ಇಂದು ಶಾಲಾ ಕಾಲೇಜುಗಳನ್ನು ಪುನರಾರಂಭ ಮಾಡುತ್ತಿರುವ ಹಿನ್ನೆಲೆಯಲ್ಲಿ ಉಸ್ತುವಾರಿಯನ್ನು ನಿರ್ವಹಿಸಿ ಸರ್ಕಾರಿ ನಿಯಮಗಳನುಸಾರ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಮೇಲುಸ್ತುವಾರಿಯನ್ನು ನಿರ್ವಹಿಸಿದರು.

 

ಇನ್ನು ಪ್ರಾಚಾರ್ಯರಾದ ಷಣ್ಮುಖರವರು ಆಗಸ್ಟ್ 24 25ರಂದು ತಮ್ಮ ಮಗನ ಮದುವೆ ನಿಗದಿಯಾಗಿದೆ ಆದರೆ ಮಗನ ಮದುವೆಯ ಒತ್ತಡದಲ್ಲೂ ಎಂಪ್ರೆಸ್ ನ ಶಾಲಾ-ಕಾಲೇಜಿನ ಉಸ್ತುವಾರಿಯನ್ನು ನಿರ್ವಹಿಸುತ್ತಿದ್ದಾರೆ.

ಇನ್ನು ವಿಜಯಭಾರತ ಬಳಗದೊಂದಿಗೆ ಮಾತನಾಡಿದ ಪ್ರಾಚಾರ್ಯರು ರಾಜ್ಯದ್ಯಂತ ಕರೋನಾ ಬಂದಾಗಿನಿಂದ ಶೈಕ್ಷಣಿಕ ಚಟುವಟಿಕೆಗಳು ಮಂಕಾಗಿದ್ದವು ಆದರೆ ರಾಜ್ಯ ಸರ್ಕಾರ ಇಂದಿನಿಂದ 9ರಿಂದ 12ನೇ ತರಗತಿಯವರೆಗೆ ಶಾಲಾ ಕಾಲೇಜುಗಳನ್ನು ತೆರೆಯಲು ನಿರ್ಧರಿಸಿದೆ ಇದು ತುಂಬಾ ಸಂತೋಷದಾಯಕ ವಿಷಯವಾಗಿದ್ದು ಅದರಂತೆ ನಾವು ಇಂದು ನಮ್ಮ ಕಾಲೇಜಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡು ವಿದ್ಯಾರ್ಥಿಗಳಿಗೆ ಪಾಠಪ್ರವಚನಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಟ್ಟಿದ್ದೇವೆ. ಇನ್ನೂ ನಾಳೆ ನಾಡಿದ್ದು ಮಗನ ಮದುವೆ ನಿಶ್ಚಯವಾಗಿದ್ದು ಅದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಇನ್ನು ಮಗನ ಮದುವೆ ಎಷ್ಟು ಮುಖ್ಯವೋ ಮಕ್ಕಳ ವಿದ್ಯಾಭ್ಯಾಸ ಹಾಗೂ ಶೈಕ್ಷಣಿಕ ಚಟುವಟಿಕೆಗಳು ಸಹ ಅಷ್ಟೇ ಮುಖ್ಯವಾಗಿದೆ. ಹಾಗಾಗಿ ಮಗನ ಮದುವೆಗೆ ಎಷ್ಟು ಸಮಯ ಮಿಸಲಿರಿಸಿದ್ದರು ಅದೇರೀತಿ ಇಂದು ನಮ್ಮ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳು ಮುಂದುವರಿಯಬೇಕು ಎನ್ನುವ ಉತ್ಸಾಹ ನಮ್ಮಲ್ಲಿದ್ದು ಅದಕ್ಕೆ ಸಂಬಂಧಿಸಿದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ ಇನ್ನೂ ನಮ್ಮ ನುರಿತ ಉಪನ್ಯಾಸಕರ ತಂಡ ವಿದ್ಯಾರ್ಥಿಗಳಿಗೆ ಉತ್ತಮ ಪಾಠ ಪ್ರವಚನಗಳನ್ನು ಮುಂದುವರಿಸಲಿದೆ ಇನ್ನು ಮಗನ ಮದುವೆ ಎಷ್ಟು ಖುಷಿ ತಂದಿದೆಯೋ ಹಾಗೆ ಈಗ ಶಾಲಾ-ಕಾಲೇಜುಗಳು ಆರಂಭವಾಗಿರುವುದು ಕೂಡ ಅಷ್ಟೇ ಸಂತೋಷವನ್ನುಂಟು ಮಾಡಿರುವುದಾಗಿ ತಿಳಿಸಿದರು.

 

ಇನ್ನು ಪ್ರಾಚಾರ್ಯರಾದ ಎಸ್ ಶಣ್ಮುಖ ರವರ ಕಾರ್ಯವೈಕರಿ ಬಗ್ಗೆ ಕಾಲೇಜಿನ ಬೋಧಕ ಸಿಬ್ಬಂದಿಗಳು ಹಾಗೂ ಸಾರ್ವಜನಿಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ ಪ್ರಾಂಶುಪಾಲರ ಕಾರ್ಯವೈಖರಿ ಹಾಗೂ ಅವರಲ್ಲಿನ ಶ್ರದ್ಧೆ ನಿಜಕ್ಕೂ ಶ್ಲಾಘನೀಯ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!