ಖಾಸಗಿ ಆಂಬುಲೆನ್ಸ್ ಗಳ ಪಾರ್ಕಿಂಗ್ ಏರಿಯಾ ಆಗಿ ಬದಲಾಯಿತಾ ತುಮಕೂರು ಜಿಲ್ಲಾ ಆಸ್ಪತ್ರೆ ಆವರಣ….????
ತುಮಕೂರು -ತುಮಕೂರಿನ ಹೃದಯ ಭಾಗದಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಖಾಸಗಿ ಆಂಬುಲೆನ್ಸ್ ದಂಧೆ ರಾಜಾ ರೋಷವಾಗಿ ನಡೆಯುತ್ತಿದೆ.
ಜಿಲ್ಲಾಸ್ಪತ್ರಿಯ ಅವರಣದಲ್ಲಿ ಖಾಸಗಿ ಆಂಬುಲೆನ್ಸ್ ನಿಲುಗಡೆಗೆ ಅವಕಾಶವಿಲ್ಲ ಹಾಗೂ ನಿಲ್ಲಿಸಬಾರದು ಎಂದು ನಾಮಫಲಕ ಅಳವಡಿಸಲಾಗಿದೆಯಾದರೂ ಈ ನಾಮಫಲಕದಲ್ಲಿ ಉಲ್ಲೇಖಿಸಿರುವ ವಿಷಯ ಯಾರಿಗೆ ಅನ್ವಯವಾಗುತ್ತದೆ ಎಂಬುದಕ್ಕೆ ಜಿಲ್ಲಾ ಶಸ್ತ್ರ ಚಿಕಿತ್ಸಕರೇ ಉತ್ತರಿಸಬೇಕಿದೆ.
ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗ, ಸ್ಕ್ಯಾನಿಂಗ್ ಸೆಂಟರ್ ಟ್ರಾಮಾ ಕೇರ್ ಸೆಂಟರ್ ಹಾಗೂ ಆಡಿಟೋರಿಯಂ ಬಳಿ ಠಿಕಾಣಿ ಖಾಸಗೀ ಆಂಬ್ಯುಲೆನ್ಸ್ ಡ್ರೈವರ್ ಗಳು ಠಿಕಾಣಿ ಹೂಡುತ್ತಾರೆ, ಜಿಲ್ಲಾಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ರೋಗಿಯನ್ನು ಬೆಂಗಳೂರಿನ ಉನ್ನತ ಆಸ್ಪತ್ರೆಗೆ ದಾಖಲಿಸಲು ಜಿಲ್ಲಾಸ್ಪತ್ರೆಯಲ್ಲಿರುವ ಆಂಬುಲೆನ್ಸ್ ಗಳಲ್ಲಿ ರೋಗಿಗಳನ್ನು ಬೆಂಗಳೂರಿಗೆ ರವಾನೆ ಮಾಡುವ ಬದಲು ಖಾಸಗೀ ಆಂಬ್ಯುಲೆನ್ಸ್ ಡ್ರೈವರ್ ಗಳನ್ನು ಆಶ್ರಯಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಜಿಲ್ಲಾಸ್ಪತ್ರೆಯ ಆವರಣದಲ್ಲಿ ಖಾಸಗಿ ಆಂಬುಲೆನ್ಸ್ ಗಳ ದಂದೆ ರಾಜಾರೋಷವಾಗಿ ನಡೆಯುತ್ತಿದ್ದರೂ ಸಹ ಇದಕ್ಕೆ ಕಡಿವಾಣ ಹಾಕಬೇಕಾದ ಜಿಲ್ಲಾ ಶಸ್ತ್ರ ಚಿಕಿತ್ಸೆಕರು ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ತೀವ್ರ ಅನುಮಾನಕ್ಕೆ ಕಾರಣವಾಗಿದೆ.
ಇನ್ನು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಕೆಲಸ ನಿರ್ವಹಿಸುತ್ತಿರುವ ಪಾರ್ಕಿಂಗ್ ಗುತ್ತಿಗೆ ಪಡೆದಿರುವ ಗುತ್ತಿಗೆದಾರರಿಂದ ಮತ್ತೊರ್ವ ಗುತ್ತಿಗೆದಾರ ಸಬ್ ಲೀಸ್ ಗೆ ಪಾರ್ಕಿಂಗ್ ನಿರ್ವಹಿಸುತ್ತಿದ್ದು ಇದರ ಬಗ್ಗೆ ಸಾಕಷ್ಟು ದೂರುಗಳು ಸಹ ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ನೀಡಿದರು ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಜಿಲ್ಲಾ ಶಸ್ತ್ರಚಿಕಿತ್ಸಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಜಿಲ್ಲಾ ಆಸ್ಪತ್ರೆ ಆವರಣ ಖಾಸಗಿ ಆಂಬುಲೆನ್ಸ್ ಗಳ ಸುಲಿಗೆ ತಾಣವಾಗಿದ್ದು ಜಿಲ್ಲಾ ಆಸ್ಪತ್ರೆಗೆ ಆಗಮಿಸುವ ಬಡ ರೋಗಿಗಳಿಂದ ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಿಗೆ ತೆರಳಲು ದುಬಾರಿ ಶುಲ್ಕ ನಿಗದಿ ಮಾಡಿ ಹಗಲು ದರೋಡೆಗೆ ಇಳಿದಿರುವುದು ಗುಟ್ಟಾಗೇನು ಉಳಿದಿಲ್ಲ
ಇನ್ನು ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಕೆಲ ವೈದ್ಯರು ಆಂಬುಲೆನ್ಸ್ ಡ್ರೈವರ್ ಗಳು ನೀಡುವ ಎಂಜಲು ಕಾಸಿಗೆ ಮಾರುಹೋಗಿ ಅಂಬುಲೆನ್ಸ್ ಡ್ರೈವರ್ ಗಳನ್ನ ತಮ್ಮ ಸಿಬ್ಬಂದಿಗಳು ಎಂದು ಬಿಲ್ಡಪ್ ಕೊಡುತ್ತಾ ಸಾರ್ವಜನಿಕರನ್ನು ಸಹ ಯಾಮಾರಿಸುತ್ತಿರುವ ಸಾಕಷ್ಟು ಉದಾಹರಣೆಗಳು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಪ್ರತಿನಿತ್ಯ ನಡೆಯುತ್ತಿದೆ.
ಇನ್ನು ಜಿಲ್ಲಾ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಆಗಮಿಸುವ ಎಮರ್ಜೆನ್ಸಿ ಪೇಷಂಟ್ ಗಳಿಗೆ ಖಾಸಗಿ ಆಂಬುಲೆನ್ಸ್ ಗಳ ಡ್ರೈವರ್ ಗಳು ಸಹ ವೈದ್ಯರೊಂದಿಗೆ ಫಸ್ಟ್ಡ್ ಏಡ್ ಕಾರ್ಯ ನಿರ್ವಹಿಸುತ್ತಿರುವುದು ಸಹ ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕರ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಬಹುದೊಡ್ಡ ವೈಫಲ್ಯ ಎಂದರೆ ತಪ್ಪಾಗಲಾರದು
ಆಂಬುಲೆನ್ಸ್ ಸೇವೆಯ ನೆಪದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಬಡವರ ಸುಲಿಗೆ ಮಾಡಲಾಗುತ್ತಿದೆ ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಆರೋಗ್ಯ ಸಚಿವರು ಖಾಸಗಿ ಆಂಬುಲೆನ್ಸ್ ದಂದೆಗೆ ಕಡಿವಾಣ ಹಾಕಬೇಕೆಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.