ಪಕ್ಷದ ಫ್ಲಕ್ಸ್ ಗಳನ್ನು ಕಟ್ಟಲು ಪಾಲಿಕೆ ಸಿಬ್ಬಂದಿಗಳನ್ನು ಬಳಸಿಕೊಂಡ ತುಮಕೂರು ಮಹಾನಗರ ಪಾಲಿಕೆ
ರಾಷ್ಟ್ರೀಯ ಪಕ್ಷದ ಕಾರ್ಯಕ್ರಮದ ಫ್ಲಕ್ಸ್ ಕಟ್ಟಲು ಪಾಲಿಕೆ ಸಿಬ್ಬಂದಿಯನ್ನು ಬಳಸಿಕೊಂಡ ತುಮಕೂರು ಮಹಾನಗರ ಪಾಲಿಕೆ.
ತುಮಕೂರಿನಲ್ಲಿ ಮಂಗಳವಾರ ನಡೆದ ಭಾರತೀಯ ಜನತಾ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಜನಾಶೀರ್ವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ತುಮಕೂರು ನಗರದಾದ್ಯಂತ ಫ್ಲಕ್ಸ್ ಗಳು ರಾರಾಜಿಸುತ್ತಿದ್ದವು ಅದರ ಮೂಲಕ ಪಕ್ಷದ ಪ್ರಮುಖ ನಾಯಕರಿಗೆ ಸ್ವಾಗತ ಕೋರುವ ಮೂಲಕ ತಮ್ಮ ನೆಚ್ಚಿನ ನಾಯಕರಿಗೆ ಗೌರವ ಸಲ್ಲಿಸಲಾಯಿತು ಆದರೆ ಮಂಗಳವಾರ ಬೆಳಗ್ಗೆ ಪಕ್ಷದ ಕಾರ್ಯಕ್ರಮದ ಫಲಕಗಳನ್ನು ಪೌರಕಾರ್ಮಿಕರ ಮೂಲಕ ತುಮಕೂರು ನಗರದ ಬಿಜಿಎಸ್ ವೃತ್ತದಲ್ಲಿ ಪಾಲಿಕೆ ಸಿಬ್ಬಂದಿ ಗಳನ್ನು ಬಳಸಿಕೊಂಡು ಫ್ಲಕ್ಸ್ ಗಳನ್ನು ಕಟ್ಟಲಾಯಿತು.
ಪಾಲಿಕೆಯ ನಡೆಗೆ ಸಾರ್ವಜನಿಕರ ಆಕ್ರೋಶ
ಪಕ್ಷದ ಫಲಕಗಳನ್ನು ಕಟ್ಟಲು ಪಾಲಿಕೆ ಸಿಬ್ಬಂದಿಗಳನ್ನು ಬಳಸಿಕೊಂಡಿದ್ದರೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ ಇನ್ನು ಪಾಲಿಕೆ ಹಾಗೂ ಪಾಲಿಕೆ ಸಿಬ್ಬಂದಿಗಳು ತಮಗೆ ಸಂಬಂಧಿಸಿದ ಕರ್ತವ್ಯಗಳನ್ನು ನಿರ್ವಹಿಸಲು ಇದ್ದಾರೋ ಅಥವಾ ಪಕ್ಷದ ಕಾರ್ಯಕ್ರಮದ ಫಲಕಗಳನ್ನು ಕಟ್ಟಲು ಇದ್ದಾರೋ ಎಂದು ಸಾರ್ವಜನಿಕರು ಪಾಲಿಕೆಯ ನಡೆಯನ್ನು ಪ್ರಶ್ನಿಸುವಂತಾಗಿದೆ.
ತರಾತುರಿಯಲ್ಲಿ ಫ್ಲೆಕ್ಸ್ಗಳನ್ನು ಕಟ್ಟಿದ ಪಾಲಿಕೆ ಸಿಬ್ಬಂದಿ.
ಇನ್ನು ಪಾಲಿಕೆ ಸಿಬ್ಬಂದಿಗಳು ಸಾರ್ವಜನಿಕರು ಎಲ್ಲಿ ತಮ್ಮನ್ನು ಗಮನಿಸುತ್ತಾರೆ ಎನ್ನುವ ಭಯದಿಂದ ತರಾತುರಿಯಲ್ಲಿ ಫ್ಲೆಕ್ಸ್ಗಳನ್ನು ಕಟ್ಟಿ ಕಾಲ್ಕಿತ್ತರು.
ಅದೇನೇ ಇರಲಿ ಪಾಲಿಕೆಯ ಸಿಬ್ಬಂದಿಗಳಿಗೆ ತಮಗೆ ಸಂಬಂಧಿಸಿದ ಕಾರ್ಯ ಮಾಡುವ ಬದಲು ಪಕ್ಷದ ಕಾರ್ಯಕ್ರಮಕ್ಕೆ ಬಳಸಿಕೊಂಡಿರುವುದು ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ ಇದಕ್ಕೆ ಸಂಬಂಧಿಸಿದಂತೆ ಪಾಲಿಕೆ ಅಧಿಕಾರಿಗಳು ಉತ್ತರ ನೀಡಬೇಕಾಗಿದೆ.