ರಸ್ತೆಗಾಗಿ ಧರಣಿ ಕುಳಿತ ಪಾಲಿಕೆ ಸದಸ್ಯ ಮಂಜುನಾಥ್

ರಸ್ತೆಗಾಗಿ ಧರಣಿ ಕುಳಿತ ಪಾಲಿಕೆ ಸದಸ್ಯ ಮಂಜುನಾಥ.

 

 

ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸರಸ್ವತಿ ಪುರಂ ಬಡಾವಣೆಯಲ್ಲಿ ಕಳೆದ 20 ವರ್ಷದಿಂದ ಸಾರ್ವಜನಿಕರಿಗೆ ಓಡಾಡಲು ರಸ್ತೆ ಇಲ್ಲದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು ಇದಕ್ಕೆ ಸಂಬಂಧಿಸಿದಂತೆ ತುಮಕೂರು ಮಹಾನಗರ ಪಾಲಿಕೆ ಸದಸ್ಯ ಮಂಜುನಾಥ್ ರವರು ಸಾಕಷ್ಟು ಬಾರಿ ಸ್ಥಳೀಯ ಶಾಸಕರು ಸಂಸದರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದ್ದು ಸಾಕಷ್ಟು ದಿನಗಳಿಂದ ಹೋರಾಟ ನಡೆಸುತ್ತಿದ್ದರು ಆದರೆ ಅದಕ್ಕೆ ಸರಿಯಾದ ಸ್ಪಂದನೆ ದೊರಕದ ಇದ್ದುದರಿಂದ ಸೋಮವಾರ ಬೆಳಗ್ಗೆ ದಿಡೀರ್ ಸರಸ್ವತಿಪುರಂ ಬಡಾವಣೆಯ ರಸ್ತೆಯೊಂದರಲ್ಲಿ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.

 

ಇದಕ್ಕೆ ಸಂಬಂಧಿಸಿದಂತೆ ಪಾಲಿಕೆ ಸದಸ್ಯರಾದ ಮಂಜುನಾಥ್ ರವರ ಬೆರಣಿ ಹಿನ್ನೆಲೆಯಲ್ಲಿ ತುಮಕೂರು ಮಹಾನಗರ ಪಾಲಿಕೆ ಮೇಯರ್ ರೇಣುಕಾ, ವಿರೋಧಪಕ್ಷದ ನಾಯಕ ಕುಮಾರ್, ಉಪ ಮಹಾಪೌರರಾದ ನಾಜಿಮಾಬಿ, ಸ್ಥಾಯಿ ಸಮಿತಿ ಅಧ್ಯಕ್ಷ ನಯಾಜ್ ಸೇರಿದಂತೆ ಹಲವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡರು.

 

ಇದೇ ಸಂದರ್ಭದಲ್ಲಿ ಮಾತನಾಡಿದ ತುಮಕೂರು ಮಹಾನಗರ ಪಾಲಿಕೆಯ 17ನೇ ವಾರ್ಡ್ ನ ಕಾರ್ಪೊರೇಟರ್ ಮಂಜುನಾಥ್ ಮಾತನಾಡಿ ಕಳೆದ 20 ವರ್ಷಗಳಿಂದ ಈ ಭಾಗದಲ್ಲಿ ಸಾರ್ವಜನಿಕರಿಗೆ ಓಡಾಡಲು ರಸ್ತೆ ಇಲ್ಲದೆ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದರು ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಾಕಷ್ಟು ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಇನ್ನು ಸ್ಥಳೀಯವಾಗಿ ಪ್ರಭಾವಿ ರಾಜಕೀಯ ಮುಖಂಡರೊಬ್ಬರ ಖಾಸಗಿ ಜಾಗವಿದ್ದು ಇದಕ್ಕೆ ಸಂಬಂಧಿಸಿದಂತೆ ಒಂಬತ್ತು ಗುಂಟೆ ಜಮೀನನ್ನ ರಸ್ತೆಗೆ ಬಿಡಲು ಆದೇಶವಿದ್ದರೂ ಸಹ ಬಿಡದೆ ಇರುವುದರಿಂದ ಈ ಭಾಗದ ಸಾರ್ವಜನಿಕರಿಗೆ ರಸ್ತೆ ಇಲ್ಲದೆ ಕಿರಿಕಿರಿ ಅನುಭವಿಸಲಾಗುತ್ತದೆ ಹಾಗಾಗಿ ಸಾರ್ವಜನಿಕರ ಮುಖ್ಯವಾಗಿ ಬೇಕಾಗಿರುವುದು ರಸ್ತೆ ರಸ್ತೆಗಾಗಿ ತಾವು ರಸ್ತೆಯಲ್ಲೇ ಧರಣಿ ಕೂತಿದ್ದು ರಸ್ತೆ ಸಮಸ್ಯೆ ಬಗೆಹರಿಯುವವರೆಗೂ ನನ್ನ ಹೋರಾಟ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

 

ಅಸೂಕ್ಷ್ಮತೆಯನ್ನು ಅರಿತ ಪಾಲಿಕೆ ಮೇಯರ್ ಹಾಗೂ ವಿರೋಧ ಪಕ್ಷದ ನಾಯಕರು ಪಾಲಿಕೆ ಸದಸ್ಯರು ಮಂಜುನಾಥ್ ರವರ ಮನವೊಲಿಸುವ ಪ್ರಯತ್ನ ಮಾಡಿದರು ಕೈಗೂಡದ ಕಾರಣ ಸ್ಥಳದಲ್ಲೇ ರಸ್ತೆಯನ್ನು ಸರ್ವೆ ಮಾಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

 

ಈ ಸಂದರ್ಭದಲ್ಲಿ ಮಾತನಾಡಿದ ವಿರೋಧಪಕ್ಷದ ನಾಯಕ ಕುಮಾರ್ ಮಾತನಾಡಿ ಇನ್ನು ಈ ಭಾಗದ ಸಾರ್ವಜನಿಕರಿಗೆ ಕಳೆದ 20 ವರ್ಷಗಳಿಂದ ರಸ್ತೆ ಇಲ್ಲದೆ ಸಮಸ್ಯೆ ಉಂಟಾಗಿತ್ತು ಇದಕ್ಕೆ ಸಂಬಂಧಿಸಿದಂತೆ ಪಾಲಿಕೆ ಸದಸ್ಯ ಮಂಜುನಾಥ್ ರವರ ಧರಣಿ ಹಿನ್ನೆಲೆಯಲ್ಲಿ ಕೂಡಲೇ ಸರ್ವೆ ಕಾರ್ಯ ಮಾಡುತ್ತಿದ್ದು ಮುಂದಿನ ಎರಡು ದಿನದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

 

ಇದೇ ಸಂದರ್ಭದಲ್ಲಿ ಸ್ಥಳೀಯ ನಾಗರಿಕರು ಸ್ಥಳೀಯ ಮುಖಂಡರು ಹಾಗೂ ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!