ಅಕಾಲಿಕ ಮಳೆಗೆ ಆತಂಕ ವ್ಯಕ್ತಪಡಿಸಿದ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್.

ಅಕಾಲಿಕ ಮಳೆಗೆ ಆತಂಕ ವ್ಯಕ್ತಪಡಿಸಿದ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್.

 

ತುಮಕೂರು ನಗರದಾದ್ಯಂತ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಸಾಕಷ್ಟು ತೊಂದರೆಗಳು ಆಗುತ್ತಿತ್ತು ಇದರಿಂದ ಆತಂಕ ತಂದೊಡ್ಡಿದೆ ಎಂದು ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ತಿಳಿಸಿದರು.

 

 

ಶುಕ್ರವಾರ ಸಂಜೆ ತುಮಕೂರಿನ ಅಮಾನಿಕೆರೆ 21 ವರ್ಷಗಳ ನಂತರ ಕೋಡಿ ಬಿದ್ದ ಸಲುವಾಗಿ ಕೆರೆಗೆ ಭೇಟಿ ನೀಡಿದ ಶಾಸಕರು ಅಕಾಲಿಕ ಮಳೆಗೆ ಆತಂಕ ವ್ಯಕ್ತಪಡಿಸಿದ್ದಾರೆ.

 

ಇನ್ನೂ ಕಳೆದ ಮೂರು ದಿನಗಳಿಂದ ತುಮಕೂರು ನಗರದಾದ್ಯಂತ ಸುರಿದಿರುವ ಮಳೆಗೆ ಸಾಕಷ್ಟು ತೊಂದರೆಗಳು ತಂದೊಡ್ಡಿದೆ ಇದರಿಂದ ತಗ್ಗು ಪ್ರದೇಶಗಳಿಗೆ ಸಾಕಷ್ಟು ನೀರು ನುಗ್ಗಿ ತೊಂದರೆ ಸಹ ಆಗಿದೆ ಎಂದರು.

ತುಮಕೂರು ಅಮಾನಿಕೆರೆ ಕೋಡಿ ಬಿದ್ದ ಪರಿಣಾಮ ತುಮಕೂರು ಆಮಾನಿಕೆರೆಯ ಕೆಳಭಾಗದಲ್ಲಿ ಸುಮಾರು 30 ಕುಟುಂಬಗಳು ವಾಸವಿದ್ದಾರೆ ಕೆರೆ ಕೋಡಿ ಬಿದ್ದ ಪರಿಣಾಮ ನೀರಿನ ಹೊರ ಹರಿವು ಹೆಚ್ಚಾಗುತ್ತಿದ್ದು ಇದರಿಂದ ಕೆರೆ ಕೋಡಿ ಕೆಳಭಾಗದಲ್ಲಿರುವ ಕುಟುಂಬಗಳಿಗೆ ತೊಂದರೆಯಾಗಲಿದೆ ಅದಕ್ಕಾಗಿ ಶೀಘ್ರವೇ 30 ಕುಟುಂಬಗಳನ್ನು ತುಮಕೂರು ಸದಾಶಿವನಗರದ ಅಂಬಾವಿಲಾಸ ಕಲ್ಯಾಣಮಂಟಪಕ್ಕೆ ಸ್ಥಳಾಂತರಿಸಲಾಗುತ್ತಿದೆ .ಇನ್ನು ಅಕಾಲಿಕ ಮಳೆಯಿಂದಾಗಿ ರಾಜಕಾಲುವೆಗಳು ಸಾಕಷ್ಟು ಒತ್ತುವರಿಯಾಗಿದೆ ನೀರು ಸರಾಗವಾಗಿ ಹರಿಯಲು ಆಗುತ್ತಿಲ್ಲ ಇನ್ನು ಕೆಲವು ಭಾಗದಲ್ಲಿ ಕಾಲುವೆಗಳಲ್ಲಿ ಹೂಳು ಸಹ ತುಂಬಿಕೊಂಡಿದ್ದು ನೀರು ಹರಿಯದೆ ಸಾಕಷ್ಟು ತೊಂದರೆ ಆಗುತ್ತದೆ ಅದಕ್ಕಾಗಿ ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಹೂಳು ತುಂಬಿರುವ ಭಾಗದಲ್ಲಿ ಜೆಸಿಬಿ ಮೂಲಕ ಅವುಗಳನ್ನು ತೆರವುಗೊಳಿಸಲು ಸನ್ನದ್ಧರಾಗಿದ್ದಾರೆ ಎಂದರು.

ತುಮಕೂರು ನಗರದ ಸದಾಶಿವನಗರ, ಶ್ರೀರಾಮನಗರ ,ಶಿರಾಗೇಟ್, ಆರ್ ಟಿ ನಗರ, ದಿಬ್ಬೂರು ಭಾಗದಲ್ಲಿ ಸಾಕಷ್ಟು ಸಮಸ್ಯೆ ತಂದೊಡ್ಡಿದೆ ಇನ್ನೂ ಅಕಾಲಿಕ ಮಳೆಯ ಮುನ್ಸೂಚನೆ ಇಲ್ಲದೆ ಇರುವುದರಿಂದ ನಾವು ಸಕಲ ರೀತಿಯಲ್ಲೂ ಸನ್ನದ್ದರಾಗಲು ಸಾಧ್ಯವಾಗಿಲ್ಲ ಇದರಿಂದ ನಮಗೂ ಸಹ ಸಾಕಷ್ಟು ಆತಂಕ ತಂದೊಡ್ಡಿದೆ ಎಂದರು.

 

ಸುಖಾಸುಮ್ಮನೆ ಯಾರು ಮನೆಯಿಂದ ಆಚೆ ಬರಬೇಡಿ ಶಾಸಕರ ಮನವಿ.

ತುಮಕೂರು ನಗರದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಸಾಕಷ್ಟು ಸಮಸ್ಯೆಗಳು ಉದ್ಭವವಾಗುತ್ತದೆ ಇನ್ನು ಸಾರ್ವಜನಿಕರು ಸುಖಾಸುಮ್ಮನೆ ಮನೆಯಿಂದ ಆಚೆ ಬರೆದೆ ಮನೆಯಲ್ಲಿಯೇ ಇರಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

 

ಇದೇ ಸಂದರ್ಭದಲ್ಲಿ ತುಮಕೂರು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ನಯಾಜ್, ಪಾಲಿಕೆ ಸದಸ್ಯರಾದ ಮಂಜುನಾಥ್, ಗಿರಿಜಾ ಧನ್ಯಕುಮಾರ್, ಧರಣೇಂದ್ರ ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!