ಸಂಭ್ರಮ ಸಡಗರದ ದೀಪಾವಳಿ ಆಚರಣೆಗೆ ತುಮಕೂರು ನಗರ ಸಜ್ಜು.
ತುಮಕೂರು_ಕಳೆದ ಎರಡು ವರ್ಷದಿಂದ ಕೋವಿಡ್ ಕಾರಣದಿಂದ ಕಳೆಗುಂದಿದ್ದ ದೀಪಾವಳಿ ಹಬ್ಬವನ್ನು ಈ ಬಾರಿ ಪಟಾಕಿಗಳ ದರ ಏರಿಕೆಯ ನಡುವೆಯೂ ಸಾರ್ವಜನಿಕರು ಪಟಾಕಿ ಖರೀದಿಗೆ ಮುಂದಾಗಿದ್ದು ದೀಪಾವಳಿ ಹಬ್ಬವನ್ನು ಈ ಬಾರಿ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲು ನಗರದ ಜನತೆ ಸಜ್ಜಾಗಿದ್ದಾರೆ.
ಹಸಿರು ಪಟಾಕಿ ಖರೀದಿಗೆ ಮೊರೆ ಹೋದ ಸಾರ್ವಜನಿಕರು
ಇನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಹಸಿರು ಪಟಾಕಿಗೆ ಮೋರೆ ಹೋಗಿರುವ ಸಾರ್ವಜನಿಕರು ಮಾಲಿನ್ಯ ಮುಕ್ತ ದೀಪಾವಳಿ ಹಬ್ಬವನ್ನು ಆಚರಿಸುವ ಸಲುವಾಗಿ ಹಸಿರು ಪಟಾಕಿಗಳ ಖರೀದಿಗೆ ಮುಂದಾಗಿದ್ದು ಪ್ರತಿ ಅಂಗಡಿಗಳಲ್ಲೂ ಹಸಿರು ಪಟಾಕಿಯನ್ನು ಮಾರುವುದರ ಮೂಲಕ ಮಾಲಿನ್ಯ ಮುಕ್ತ ದೀಪಾವಳಿ ಹಬ್ಬದ ಆಚರಣೆಗಾಗಿ ಪಟಾಕಿ ಅಂಗಡಿಯ ಮಾಲೀಕರುಗಳು ಹಾಗೂ ಸಾರ್ವಜನಿಕರು ಮುಂದಾಗಿದ್ದಾರೆ.
ಪಟಾಕಿ ಬೆಲೆ ದುಪಟ್ಟಾದರೂ ಖರೀದಿಯಿಂದ ಹಿಂದೆ ಬೀಳದ ಜನತೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಟಾಕಿಯ ಬೆಲೆಗಳು 20 ರಿಂದ 40ರಷ್ಟು ಬೆಲೆ ಹೆಚ್ಚಾದರೂ ಸಹ ಸಾರ್ವಜನಿಕರು ಪಟಾಕಿ ಖರೀದಿ ಮಾಡುವ ಮೂಲಕ ಹಬ್ಬವನ್ನು ಆಚರಿಸಲು ಮುಂದಾಗಿದ್ದಾರೆ.
ಬೇರಿಯಂ ನೈಟ್ರೇಟ್ ಅಭಾವದಿಂದ ಪಟಾಕಿ ದರದಲ್ಲಿ ಹೆಚ್ಚಳ.
ಪಟಾಕಿಯಲ್ಲಿ ಬಳಸುವ ಬೇರಿಯಂ ನೈಟ್ ರೈಟ್ಸ್ ಅನ್ನು ರಾಸಾಯನಿಕವಾಗಿ ಬಳಸಲಾಗುತ್ತಿದ್ದು ಈ ರಾಸಾಯನಿಕ ಬಳಕೆ ಮೇಲೆ ಸರ್ಕಾರ ವಿಧಿಸಿರುವ ನಿರ್ಬಂಧದಿಂದ ಕಚ್ಚಾ ಸಾಮಗ್ರಿಗಳು ದೊರೆಯದೆ ಪಟಾಕಿ ಉತ್ಪಾದನೆಯಲ್ಲಿ ಕುಂಠಿತವಾಗಿದ್ದು ಹಿಂದಿನ ವರ್ಷಕ್ಕಿಂತ ಈ ಬಾರಿ ಶೇಕಡ 60 ರಿಂದ 80ರಷ್ಟು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹಲವು ಪಟಾಕಿ ಅಂಗಡಿ ಮಾಲೀಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ನಗರದ ವಿವಿಧ ಭಾಗಗಳಲ್ಲಿ ಪಟಾಕಿ ಮಾರಾಟ ಮಳಿಗೆಗಳು ಆರಂಭ
ತುಮಕೂರು ನಗರದ ಬಿ ಎಚ್ ರಸ್ತೆ ಹಾಗೂ ಕೋಡಿ ಬಸವೇಶ್ವರ ದೇವಸ್ಥಾನದ ಬಳಿ ಹಲವು ಪಟಾಕಿ ಅಂಗಡಿ ಮಳಿಗೆಗಳು ಪ್ರಾರಂಭವಾಗಿದ್ದು ಕಳೆದ ಎರಡು ದಿನದಿಂದ ಸಾರ್ವಜನಿಕರು ಪಟಾಕಿ ಖರೀದಿಗೆ ಮುಂದಾಗಿದ್ದಾರೆ.
ವರದಿ_ಮಾರುತಿ ಪ್ರಸಾದ್ ತುಮಕೂರು