ತುಮಕೂರು ನಗರದಲ್ಲಿ ಮರಗಳ ಮಾರಣಹೋಮ ಪ್ರಕರಣ ಸಮಗ್ರ ತನಿಖೆಗೆ ಒತ್ತಾಯ.
ತುಮಕೂರು_ಕಳೆದ ನಾಲ್ಕು ದಿನಗಳ ಹಿಂದೆ ತುಮಕೂರಿನ ಬಿ.ಹೆಚ್ ರಸ್ತೆಯಲ್ಲಿ ಬೇವಿನ ಮರಗಳನ್ನು ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ ಆಡ್ ಸಿಟಿ ಔಟ್ ಡೋರ್ ವೀಡಿಯೋಸ್ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್.
ಕಳೆದ ನಾಲ್ಕೈದು ತಿಂಗಳಿನಿಂದ ತುಮಕೂರಿನ ಬಿ.ಎಚ್ ರಸ್ತೆಯಲ್ಲಿ ಜಾಹೀರಾತು ಫಲಕಗಳಿಗೆ ಅಡ್ಡಿಯಾಗಿದೆ ಎಂದು ಕೆಲ ಮರಗಳನ್ನು ಕಡಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಜಾಹೀರಾತು ಫಲಕಗಳ ಟೆಂಡರ್ ಪಡೆದಿದ್ದ ಅಡ್ ಸಿಟಿ ಔಟ್ ಡೋರ್ ಮೀಡಿಯಾ ಸಲ್ಯೂಷನ್ ಸಂಸ್ಥೆಯ ಪದಾಧಿಕಾರಿಗಳು ತುಮಕೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡಿದ್ದಾರೆ.
ಬಗ್ಗೆ ಪ್ರತಿಕ್ರಿಯಿಸಿದ ಅಡ್ ಸಿಟಿ ಸಂಸ್ಥೆಯ ಮುಖ್ಯಸ್ಥ ರಂಗನಾಥ್ ಮಾತನಾಡಿ ತುಮಕೂರು ಬಿ.ಹೆಚ್ ರಸ್ತೆ ಒಳಗೊಂಡಂತೆ ತುಮಕೂರು ನಗರದ ಪ್ರಮುಖ ರಸ್ತೆಗಳಲ್ಲಿ ನಮ್ಮ ಸಂಸ್ಥೆಗೆ ಜಾಹಿರಾತು ಫಲಕಗಳನ್ನು ಅಳವಡಿಸುವ ಸಂಬಂಧ ಟೆಂಡರ್ ನೀಡಲಾಗಿದ್ದು ಅದಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಾರ್ಗಸೂಚಿಗಳನ್ವಯ ಕೆಲಸ ನಿರ್ವಹಿಸುತ್ತಿದ್ದೇವೆ ಆದರೆ ಕೆಲ ಕಿಡಿಗೇಡಿಗಳು ಹಾಗೂ ಕಾಣದ ಕೈಗಳು ಮರಗಳನ್ನ ಕಡಿಯುವ ಮೂಲಕ ಜಾಹೀರಾತು ಟೆಂಡರ್ ಗಳನ್ನು ಪಡೆದಿರುವ ಸಂಸ್ಥೆಗಳಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಕೆಲವರು ಪಿತೂರಿ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಠಾಣೆಯಲ್ಲಿ ದೂರು ಸಹ ನೀಡಲಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಮರಗಳನ್ನು ಕಡಿದ ಕಿಡಿಗೇಡಿಗಳು ಇರುವ ಸಿಸಿಟಿವಿ ಫೂಟೇಜ್ ಗಳನ್ನು ಪಡೆಯಲಾಗಿದ್ದು ಸ್ಥಳೀಯ ಅಧಿಕಾರಿಗಳು ಹಾಗೂ ಪೊಲೀಸ್ ಠಾಣೆಗೆ ದೂರು ನೀಡಿದ್ದು ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ಹೊರಬರಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
2015ರಿಂದ ನಮ್ಮ ಸಂಸ್ಥೆಗೆ ಟೆಂಡರ್ ಆಗಿದ್ದು ಅದರಂತೆ ನಾವು ತುಮಕೂರು ನಗರದಲ್ಲಿ ಯಾವುದೇ ಲೋಪದೋಷ ಕಂಡುಬರುವಂತೆ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಆದರೆ ಕೆಲ ಕಾಣದ ಕೈಗಳು ನಮ್ಮ ವಿರುದ್ಧ ಪಿತೂರಿ ನಡೆಸಿ ಕೆಟ್ಟ ಹೆಸರು ತರುವ ಮೂಲಕ ಟೆಂಡರ್ ತಪ್ಪಿಸಲು ದೊಡ್ಡ ಹುನ್ನಾರವನ್ನು ನಡೆಸುತ್ತಿದ್ದಾರೆ ಹಾಗಾಗಿ ಇದಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು ಎಂದರು ಈ ಮೂಲಕ ಸಾರ್ವಜನಿಕ ವಲಯದಲ್ಲಿ ನಮ್ಮ ಸಂಸ್ಥೆಯ ವಿರುದ್ಧ ಕೇಳಿಬರುತ್ತಿರುವ ಆರೋಪಗಳಿಂದ ಮುಕ್ತರಾಗಬೇಕು ಎಂದರು.
ಇನ್ನು ಪತ್ರಿಕಾಗೋಷ್ಠಿಯಲ್ಲಿ ಲೋಕೇಶ್, ಬಸವರಾಜು ಹಾಗೂ ಮಹೇಶ್ ಹಾಜರಿದ್ದರು.
ವರದಿ_ ಮಾರುತಿ ಪ್ರಸಾದ್ ತುಮಕೂರು