ಭಾರತ ದೇಶ ಇಡೀ ವಿಶ್ವದಲ್ಲೇ ಮಾದರಿಯಾಗಿದ್ದು ನಮ್ಮ ದೇಶ ಸಂಸ್ಕೃತಿ , ಪರಂಪರೆ ಸೌಹಾರ್ದತೆಯ ಸಂಕೇತವಾಗಿದೆ ಎಂದು ತುಮಕೂರು ಜಿಲ್ಲಾಧಿಕಾರಿಗಳು ಆದ ವೈ ಎಸ್ ಪಾಟೀಲ್ ತಿಳಿಸಿದರು.
ಬಕ್ರೀದ್ ಹಬ್ಬದ ಪ್ರಯುಕ್ತ ತುಮಕೂರಿನ ಬಾರ್ ಲೈನ್ ರಸ್ತೆಯ ಮಕ್ಕ ಮಸೀದಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯಗಳನ್ನು ಕೋರಿದರು.
ಬಕ್ರೀದ್ ಹಬ್ಬ ತ್ಯಾಗ ಬಲಿದಾನದ ಸಂಕೇತವಾಗಿದ್ದು ಒಂದು ಅರ್ಥಪೂರ್ಣ ಆಚರಣೆಯಲ್ಲಿ ಬಕ್ರೀದ್ ಹಬ್ಬ ಕೂಡ ಒಂದಾಗಿದೆ ನಮ್ಮ ದೇಶದ ಸಮಸ್ತ ನಾಗರಿಕರು ಸೌಹಾರ್ದತೆಯ ಸಂಕೇತವಾಗಿದ್ದು ಎಲ್ಲರೂ ಕೂಡ ಸಾಮೂಹಿಕವಾಗಿ ಹಬ್ಬಗಳನ್ನು ಆಚರಿಸುವ ಮೂಲಕ ದೇಶ ಹಾಗೂ ವಿಶ್ವಕ್ಕೆ ಮಾದರಿಯಾಗಿದ್ದು ತುಮಕೂರು ಜಿಲ್ಲೆ ಸಹ ಎಲ್ಲಾ ಸಮುದಾಯದವರು ಶಾಂತಿಗೆ ಪ್ರಾಮುಖ್ಯತೆ ನೀಡಿ ಸೌಹಾರ್ಧತೆಯ ಸಂಕೇತ ವಾಗಿರುವುದು ಎಲ್ಲರಲ್ಲೂ ಅಭಿನಂದನ ಅರ್ಹವಾದದ್ದು ಎಂದರು.
ಎರಡು ವರ್ಷದಿಂದ ಎಲ್ಲಾ ಸಮುದಾಯದವರು ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸುವ ಮೂಲಕ ಸರಳತೆಗೆ ಒತ್ತು ನೀಡಿದ್ದು ಕರೋನ ಸಂಕ್ರಮಿಕ ರೋಗದಿಂದ ಮುಕ್ತಿ ಸಿಗಲಿ ದೇಶದ ಪ್ರತಿಯೊಬ್ಬರಲ್ಲುಶಾಂತಿ ಸುಖ ನೆಮ್ಮದಿ ಸಿಗಲಿ ಪ್ರತಿಯೊಬ್ಬ ಮನುಷ್ಯನಿಗೂ ದೇಹದ ಆರೋಗ್ಯ ,ಕಾಳಜಿ ಮುಖ್ಯವಾಗಿದ್ದು ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಹುಲ್ ಕುಮಾರ್ ಶಹಪೂರ್ವಾಡ್ ರವರು ಮಾತನಾಡಿ ಜಿಲ್ಲೆಯ ಸಮಸ್ತ ಬಾಂಧವರಿಗೆ ಈದ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ತುಮಕೂರು ನಗರದ ಮಾಜಿ ಶಾಸಕರಾದ ರಫೀಕ್ ಅಹಮದ್ ಅವರು ಮಾತನಾಡಿ ಎಲ್ಲರಿಗೂ ಬಕ್ರೀದ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು ಬಕ್ರೀದ್ ಹಬ್ಬವನ್ನು ವಿಶ್ವದಾದ್ಯಂತ ಬಹಳ ಭಕ್ತಿ ಪೂರ್ವಕವಾಗಿ ಆಚರಿಸಲಾಗುತ್ತಿದ್ದು ಪ್ರವಾದಿ ಇಬ್ರಾಹಿಂ ಹಾಗೂ ಮಗನ ಸ್ಮರಣೆಯಲ್ಲಿ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನ ಹಿರಿಯ ಮುಖಂಡರಾದ ಶಫಿ ಅಹಮದ್, ಮಸೀದಿಯ ಮುಖ್ಯಸ್ಥರು ಹಾಗೂ ಹಿರಿಯ ಮುಖಂಡರು, ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಮುರಳೀಧರ ಹಾಲಪ್ಪ ಸೇರಿದಂತೆ ಸಮುದಾಯದ ಮುಖಂಡರು ಹಾಜರಿದ್ದರು.