ತುಮಕೂರಿನ ೧ನೇ ವಾರ್ಡಿನ ಎಸ್.ಎನ್ ಪಾಳ್ಯ ಕೊಳಚೆ ಪ್ರದೇಶದ ಬೀಡಿ ಮತ್ತು ಮನೆಗೆಲಸ ಕಾರ್ಮಿಕ ಮಹಿಳೆಯರಿಗೆ ಇಂದು ತುಮಕೂರು ಕೊಳಗೇರಿ ಸಮಿತಿ ಎಪಿಪಿಐ ಬೆಂಬಲದೊoದಿಗೆ ಆಹಾರ ಕಿಟ್‌ಗಳನ್ನು ವಿತರಣೆ ಮಾಡಲಾಯಿತು. ನಗರ ಪಾಲಿಕೆ ಸದಸ್ಯರಾದ ಲಕ್ಷ್ಮಿ ನರಸಿಂಹ ರಾಜು ಕಿಟ್ ವಿತರಿಸಿ ಮಾತನಾಡಿದರು.
ಲಾಕ್‌ಡೌನ್ ತೊಂದರೆಯಲ್ಲಿರುವ ಬಡವರಿಗೆ ಮತ್ತು ಸ್ಲಂ ಜನರಿಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳಿಂದ ದೊರೆಯದಿರುವ ಸವಲತ್ತುಗಳನ್ನು ಇಂದು ಕೊಳಗೇರಿ ಸಮಿತಿ ಸಂಬoಧಪಟ್ಟ ಇಲಾಖೆಗಳು ಮತ್ತು ದಾನಿಗಳ ಹಿಂದೆ ಬಿದ್ದು ಜನರಿಗೆ ಮುಟ್ಟುವಂತೆ ಮಾಡುತ್ತಿದೆ. ೧ ಮತ್ತು ೩ನೇ ವಾರ್ಡಿನಲ್ಲಿರುವ ಎಸ್.ಎನ್ ಪಾಳ್ಯ ಹಾಗೂ ಶರಾಫ್ ನಾಗಣ್ಣನ ಪಾಳ್ಯ ಪ್ರದೇಶಗಳನ್ನು ಅಧೀಕೃತ ಕೊಳಚೆ ಪ್ರದೇಶಗಳನ್ನಾಗಿ ಘೋಷಣೆ ಮಾಡಿಸುವದರೊಂದಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸ್ಲಂ ಜನರಿಗೆ ತಲುಪಲು ಎಚ್ಚರಗೊಳಿಸುತ್ತಿರುವುದು ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಬಡವರಿಗೆ ಅನುಕೂಲವಾಗಿದೆ ಎಂದರು.
೧ನೇ ವಾರ್ಡಿನ ಮುಖಂಡರಾದ ಮೋಹನ್ ಮಾತನಾಡಿ ಹಲವಾರು ದಿನಗಳಿಂದ ಇಲ್ಲಿರುವ ಬಡವರಿಗೆ ಬೆಳಗ್ಗೆ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದು ಅಗತ್ಯವಿರುವ ೪೫ ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ನೀಡುವಂತೆ ಸಮಿತಿಗೆ ಮನವಿ ಮಾಡಿದರ ಫಲವಾಗಿ ಇಂದು ಕೊಳಚೆ ಪ್ರದೇಶದ ಕೋಟಾದಲ್ಲಿ ಆಹಾರ ಕಿಟ್‌ಗಳನ್ನು ನೀಡುತ್ತಿರುವ ಕೆಲಸವಿಲ್ಲದೆ ಮನೆಯಲ್ಲಿರುವ ಹಾಗೂ ಪಡಿತರ ಚೀಟಿ ಇಲ್ಲದ ಕುಟುಂಬಗಳಿಗೆ ಅನುಕೂಲವಾಗಿದೆ ಎಂದರು.
ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ ರಾಜ್ಯದಲ್ಲಿ ಸ್ಲಂ ಜನಾಂದೋಲನ ಸಂಘಟನೆಯಿoದ ಅಂದಾಜು ೧೫ ಸಾವಿರ ಸ್ಲಂ ಕುಟುಂಬಗಳಿಗೆ ತಕ್ಷಣಕ್ಕೆ ಆಹಾರ ಧಾನ್ಯ ಒದಗಿಸಲು ಅಜೀಂ ಪ್ರೇಮ್‌ಜೀ ಫೌಂಡೇಷನ್ ಮತ್ತು ಅಜೀಂ ಪ್ರೇಮ್‌ಜೀ ಫೀಲಾಂಥ್ರಾಪಿಕಲ್ ಸಂಸ್ಥೆಯಿoದ ೭೫ ಲಕ್ಷ ನೀಡಿದ್ದು, ಪ್ರತಿ ಆಹಾರದ ಕಿಟ್‌ನಲ್ಲಿ ಅಕ್ಕಿ, ಗೋಧಿ ಹಿಟ್ಟು, ಬೆಳೆ, ಸಕ್ಕರೆ, ಸಾಂಬರ್ ಪುಡಿ, ಕಡಳೆ ಕಾಳು, ಕಡ್ಳೆ ಬೀಜಾ ಇನ್ನಿತರೆ ಪದಾರ್ಥಗಳನ್ನು ಒಂದು ತಿಂಗಳಿಗಾಗುವ ಕಿಟ್ ಅನ್ನು ನೀಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಎಸ್.ಎನ್ ಪಾಳ್ಯ ಶಾಖೆ ಮುಖಂಡರಾದ ರಂಗನಾಥ್, ಗುಲ್ನಾಜ್ ಮತ್ತು ಸಮಿತಿಯ ಪದಾಧಿಕಾರಿಗಳಾದ ಅರುಣ್, ತಿರುಮಲಯ್ಯ, ಶಂಕರಯ್ಯ ಉಪಸ್ಥಿತರಿದ್ದರು.