ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ರವರನ್ನು ಸಾರಿಗೆ ನೌಕರರ ಸಂಘ ದ ಗೌರವಾಧ್ಯಕ್ಷ ಸ್ಥಾನದಿಂದ ಕೈ ಬಿಡುವ ಬಗ್ಗೆ ಕಿತ್ತಾಡಿಕೊಂಡ ಸಾರಿಗೆ ನೌಕರರು.

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ರವರನ್ನು ಸಾರಿಗೆ ನೌಕರರ ಸಂಘ ದ ಗೌರವಾಧ್ಯಕ್ಷ ಸ್ಥಾನದಿಂದ ಕೈ ಬಿಡುವ ಬಗ್ಗೆ ಕಿತ್ತಾಡಿಕೊಂಡ ಸಾರಿಗೆ ನೌಕರರು.

 

 

ತುಮಕೂರು_ಇತ್ತೀಚೆಗೆ ರಾಜ್ಯದ ಖಾಸಗಿ ಸುದ್ದಿವಾಹಿನಿಯ ಸ್ಟಿಂಗ್ ಆಪರೇಷನ್ ನಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಪ್ರತಿಭಟನೆ ಕೈ ಬಿಡುವ ಸಲುವಾಗಿ ಹಣದ ಆಮಿಷ ಒಡ್ಡಿದ್ದರು ಎನ್ನುವ ಆರೋಪ ಕೇಳಿಬಂದಿತ್ತು.

 

 

 

ಇದರ ಬೆನ್ನಲ್ಲೇ ಕೋಡಿಹಳ್ಳಿ ಚಂದ್ರಶೇಖರ್ ರವರು ಕೆಎಸ್ಆರ್ಟಿಸಿ ಸಾರಿಗೆ ನೌಕರರ ಸಂಘದ ಗೌರವ ಅಧ್ಯಕ್ಷರ ನೇತೃತ್ವದಲ್ಲಿ ಕಳೆದ ಒಂದು ವರ್ಷದ ಹಿಂದೆ ಪ್ರತಿಭಟನೆ ನಡೆಸಲಾಗಿತ್ತು ಇನ್ನೂ ಪ್ರತಿಭಟನೆ ಕೈಬಿಡಲು ಹಣದ ಆಮಿಷ ಒಡ್ಡಿದ್ದರು ಎನ್ನುವ ಬಗ್ಗೆ ರೈತ ಮುಖಂಡರ ಮೇಲೆ ಆರೋಪ ಕೇಳಿಬಂದಿತ್ತು ಇನ್ನು ಆರೋಪ ದ ಬಗ್ಗೆ ಸುದ್ದಿವಾಹಿನಿಯಲ್ಲಿ ಸುದ್ದಿ ಪ್ರಸಾರವಾದ ಕೂಡಲೇ ರಾಜ್ಯಾದ್ಯಂತ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸಾಕಷ್ಟು ಪರ-ವಿರೋಧ ಚರ್ಚೆ ಹಾಗೂ ಪ್ರತಿಭಟನೆಗಳು ನಡೆದು ರೈತಸಂಘದಿಂದ ಕೊಡಿ ಹಳ್ಳಿ ಚಂದ್ರಶೇಖರ್ ಅವರನ್ನು ಕೈಬಿಡಬೇಕು ಎಂದು ಒತ್ತಾಯ ಕೇಳಿಬಂದಿತ್ತು.

ಇನ್ನು ಘಟನೆ ಸಂಬಂಧ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ರವರು ಸಹ ನನ್ನ ಮೇಲೆ ಕೇಳಿಬಂದಿರುವ ಆರೋಪದ ಸುಳ್ಳು  ಎಂದು ಸ್ಪಷ್ಟೀಕರಣ ನೀಡಿದ್ದರು

 

 

 

 

ಇನ್ನು ಈ ಸಂಬಂಧ ಕೆಎಸ್ಆರ್ಟಿಸಿ ರಾಜ್ಯ ನೌಕರರ ಸಂಘದ ಗೌರವಾಧ್ಯಕ್ಷರಾಗಿದ್ದ ಕೋಡಿಹಳ್ಳಿ ಚಂದ್ರಶೇಖರ್ ರವರ ವಿಚಾರವಾಗಿ ತುಮಕೂರಿನಲ್ಲಿ ಕರ್ನಾಟಕ ರಾಜ್ಯ ಸಾರಿಗೆ ನೌಕರರ ಕೂಟದ ವತಿಯಿಂದ ರಾಜ್ಯದ ನಾಲ್ಕು ನಿಗಮದ ನೌಕರರ ಕೂಟದ ವತಿಯಿಂದ ರಾಜ್ಯ ಕಾರ್ಯಕಾರಣಿ ಸಭೆ ತುಮಕೂರಿನ ಕನ್ನಡ ಭವನದಲ್ಲಿ ಗುರುವಾರ ನಡೆದಿದ್ದು.

 

 

ಇನ್ನು ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಚಂದ್ರು ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ರವರನ್ನು ಸಂಘದಲ್ಲಿ ಉಳಿಸಿಕೊಳ್ಳಬೇಕು ಬೇಡವೋ ಎನ್ನುವ ಬಗ್ಗೆ ನೌಕರರು ಚರ್ಚೆ ನಡೆಸಿದ್ದು ಬಹುತೇಕರು ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಸಂಘದಿಂದ ಕೈಬಿಡಬೇಕು ಎನ್ನುವ ಒತ್ತಾಯ ಕೇಳಿಬಂದಿತ್ತು ಆದರೆ ಕೋಡಿಹಳ್ಳಿ ಚಂದ್ರಶೇಖರ್ ಪರವಾದ ಒಂದು ಬಣ ಸಂಘದಲ್ಲಿ ಉಳಿಸಿಕೊಳ್ಳ ಎಂದು ಪಟ್ಟು ಹಿಡಿದಿದ್ದು ಕೊನೆಗೆ ಸಾರಿಗೆ ನೌಕರರೇ ಪರಸ್ಪರ ಕಿತ್ತಾಡಿಕೊಂಡು ಹಲ್ಲೆ ಮಾಡಿಕೊಂಡ ಘಟನೆ ನಡೆದಿದೆ.

 

 

 

ಇನ್ನು ತುಮಕೂರಿನಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿಯಲ್ಲಿ ರಾಜ್ಯದ  ಹಲವು ಜಿಲ್ಲೆಗಳ ಸಾರಿಗೆ ನೌಕರರು ಭಾಗವಹಿಸಿದ್ದರು   ಕೊನೆಗೆ ಸಭೆಯಲ್ಲಿ ಗದ್ದಲ ಗಲಾಟೆ ಉಂಟಾದ ಕೂಡಲೇ ರಾಜ್ಯಾಧ್ಯಕ್ಷರಾದ ಚಂದ್ರುರವರು ಸಭೆಯಿಂದ ಹೊರ ನಡೆದಿದ್ದಾರೆ. ಕೊನೆಗೆ ಸಭೆಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳದ ಸಭೆ ಅರ್ಧಕ್ಕೆ ಮೊಟಕುಗೊಂಡು ಆಚೆ ಬಂದಿರುವ ನೌಕರರು ಬೀದಿಯಲ್ಲು ಸಹ ಪರ-ವಿರೋಧ ಚರ್ಚೆಯಲ್ಲಿ ತೊಡಗಿದ್ದು ಕಂಡುಬಂದಿದೆ.

 

 

ಕೋಡಿಹಳ್ಳಿ ಚಂದ್ರಶೇಖರ್ ರವರ ಮೇಲೆ ಕೇಳಿಬಂದಿರುವ ಆರೋಪಕ್ಕೆ ಸಂಬಂಧ ರೈತಸಂಘದಿಂದ ಅವರನ್ನು ಉಚ್ಛಾಟನೆ ಮಾಡುವ ಸಂಬಂಧ ರೈತ ಹಾಗೂ ಪ್ರಗತಿ ಪರ ಸಂಘಟನೆಗಳ ನಡುವೆ ರಾಜ್ಯಾದ್ಯಂತ ಪರ-ವಿರೋಧ ಚರ್ಚೆಗಳು ನಡೆದಿದ್ದು ಈ ಬಗ್ಗೆ ಪ್ರತಿಕ್ರಿಯೆ ನೀಡುವ ವೇಳೆ ಬೆಂಗಳೂರಿನಲ್ಲಿ ರೈತ ಮುಖಂಡ ಟಿಕಾಯತ್ ಅವರ ಮೇಲೂ ಸಹ ಮಸಿ ಬಳಿದಿದ್ದು ಸಾಕಷ್ಟು ಆಕ್ರೋಶ ದೇಶ ಹಾಗೂ ರಾಜ್ಯಾದ್ಯಂತ ವ್ಯಕ್ತವಾಗಿತ್ತು.

 

 

 

 

ಅದೇನೇ ಇರಲಿ ಸರ್ಕಾರಿ ನೌಕರರು ಪರಸ್ಪರ ಕೈ ಕೈ ಮಿಲಾಯಿಸಿ ಕೆಲವರ ಮೇಲೆ ಹಲ್ಲೆ ಸಹ ನಡೆದಿದೆ ಎನ್ನುವ ಆರೋಪ ಕೇಳಿಬಂದೆ.

 

 

 

ತುಮಕೂರಿನಲ್ಲಿ ನಡೆದ ಘಟನೆ ಬಗ್ಗೆ ಸಂಘದ ರಾಜ್ಯಾಧ್ಯಕ್ಷ ಚಂದ್ರುರವರು ಇನ್ನಾದರೂ ಸ್ಪಷ್ಟೀಕರಣ ನೀಡುವರೇ ಕಾದುನೋಡಬೇಕು.

Leave a Reply

Your email address will not be published. Required fields are marked *

You cannot copy content of this page

error: Content is protected !!