ಟಿಪ್ಪು ಸುಲ್ತಾನ್ ಅಪ್ರತಿಮ ದೇಶಭಕ್ತ _ಮಾಜಿ ಶಾಸಕ ಕೆ ಎನ್ ರಾಜಣ್ಣ.

ಟಿಪ್ಪು ಸುಲ್ತಾನ್ ಅಪ್ರತಿಮ ದೇಶಭಕ್ತ _ಮಾಜಿ ಶಾಸಕ ಕೆ ಎನ್ ರಾಜಣ್ಣ.

ತುಮಕೂರು_ಟಿಪ್ಪು ಸುಲ್ತಾನ್ ಅಪ್ರತಿಮ ದೇಶಭಕ್ತ ಆತನ ವಿರುದ್ಧ ಇಂದು ಹಲವರು ಹಲವು ಆರೋಪ ಮಾಡುತ್ತಿರುವುದು ಎಷ್ಟು ಸರಿ ಎಂದು ಮಾಜಿ ಶಾಸಕ ಕೆ ಎನ್ ರಾಜಣ್ಣ ಕಿಡಿಕಾರಿದ್ದಾರೆ.

 

 

ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಬಿಜೆಪಿ ನೇತೃತ್ವದ ಸರ್ಕಾರ ಇಂದು ಹಲವು ಕೋಮುವಾದವನ್ನು ಸೃಷ್ಟಿ ಮಾಡುವ ಸಲುವಾಗಿ ಕೇವಲ ಒಂದು ಸಮುದಾಯವನ್ನು ಗುರಿ ಮಾಡಿ ಹಿಜಾಬ್ ವಿವಾದ, ಹಲಾಲ್ ವಿವಾದ ,ಮಾವಿನಹಣ್ಣು ವಿವಾದ ,ದೇವಸ್ಥಾನದ ಆವರಣದಲ್ಲಿ ವ್ಯಾಪಾರ ವಿವಾದವನ್ನು ಸೃಷ್ಟಿ ಮಾಡುವ ಮೂಲಕ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಿಜೆಪಿ ನೇತೃತ್ವದ ಸರ್ಕಾರ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಟಿಪ್ಪು ಸುಲ್ತಾನ್ ಅಪ್ರತಿಮ ದೇಶಭಕ್ತ ಅದರಲ್ಲಿ ಯಾವುದೇ ಅನುಮಾನವಿಲ್ಲ ನಾಲ್ಕು ಬಾರಿ ಮೈಸೂರು ಯುದ್ಧದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದು ಮೂರನೇ ಮೈಸೂರು ಯುದ್ಧದಲ್ಲಿ ಟಿಪ್ಪು ಬ್ರಿಟಿಷರ ವಿರುದ್ಧ ಸೋತ ಕಾರಣ ಬ್ರಿಟಿಷರಿಗೆ ಕಾಣಿಕೆ ನೀಡಲು ವಿಫಲರಾದ ಕಾರಣ ಇಬ್ಬರು ಮಕ್ಕಳನ್ನು 6 ತಿಂಗಳ ಕಾಲ ಬ್ರಿಟಿಷರಿಗೆ ಆಡ ಈ ಡುತ್ತಾನೆ ನಂತರ ಆರು ತಿಂಗಳ ನಂತರ ಹಣ ನೀಡಿ ತನ್ನ ಮಕ್ಕಳನ್ನು ವಾಪಸ್ ಕರೆದುಕೊಂಡು ಬಂದ ಟಿಪ್ಪು ವಿರುದ್ಧ ಇಂದು ಹಲವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಎಷ್ಟು ಸರಿ ಎಂದು ಬಿಜೆಪಿ ನೇತೃತ್ವದ ಸರ್ಕಾರ ಹಾಗೂ ಹಿಂದೂಪರ ಸಂಘಟನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಇನ್ನು ಟಿಪ್ಪು ಸುಲ್ತಾನ್ ಕಾಲದಲ್ಲಿ ನಿರ್ಮಾಣವಾದ ಬೆಂಗಳೂರಿನ ಅರಮನೆ ಆವರಣದಲ್ಲಿ ಇರುವ ವೆಂಕಟೇಶ್ವರನ ದೇವಸ್ಥಾನವಿದೆ ಟಿಪ್ಪು ಹಿಂದೂ ಸಮುದಾಯವನ್ನು ವಿರೋಧ ಮಾಡುವುದಾದರೆ ಅಂದು ದೇವಸ್ಥಾನವನ್ನು ಕಟ್ಟಲು ಯಾಕೆ ಅವಕಾಶ ಕೊಟ್ಟಿದ್ದರು , ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನ ಹೇಗೆ ನಿರ್ಮಾಣ ಮಾಡಲು ಬಿಟ್ಟಿದ್ದರು ನಂತರ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದಲ್ಲಿ ಇಂದು ಸಹ ಟಿಪ್ಪು ನೀಡಿದ್ದ ಪಚ್ಚೆ ಲಿಂಗಕ್ಕೆ ಇಂದೂ ಸಹ ಪೂಜೆ ನೆರವೇರುತ್ತದೆ.

 

 

ಪೇಶ್ವರು ದಂಡೆತ್ತಿ ಬಂದಾಗ ಶೃಂಗೇರಿ ಮಠ ಹಾಳು ಮಾಡಲು ಮುಂದಾದ ಕಾರಣ ಅಂದು ಟಿಪ್ಪುಸುಲ್ತಾನ್ ತನ್ನ ಸೈನ್ಯದ ಮೂಲಕ ಹೋರಾಡಿ ಶೃಂಗೇರಿ ಮಠದಲ್ಲಿ ಕಾಪಾಡಿದರು ಇನ್ನು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಇಂದು ಸಹ ಸಲಾಂ ಆರತಿ ಮಾಡುತ್ತಿದ್ದು ಆಗ ಕೇಸರಿ ಶಾಲು ಹಾಕಿದ್ದ ಸಂಘಟನೆಗಳು ಎಲ್ಲಿ ಇದ್ದವು ಎಂದು ಪ್ರಶ್ನೆ ಮಾಡಿದ್ದಾರೆ.

 

 

ಇಂದಿನ ಯುವ ಪಡೆಯ ಮೂಲಕ ತಪ್ಪು ಸಂದೇಶವನ್ನು ನೀಡಿ ಸಮಾಜ ಒಡೆಯುವ ಕೆಲಸವನ್ನು ಇಂದು ಬಿಜೆಪಿ ಸರ್ಕಾರ ಹಿಂದೂಪರ ಸಂಘಟನೆಗಳು ಮೂಲಕ ಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದರು.

 

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!