ಈ ಬಾರಿ ಪ್ರೀತನ್ ಕೈ ಹಿಡಿಯುತ್ತಾರ ಅವರ ಅಭಿಮಾನಿ ಸೈನ್ಯ??

ಈ ಬಾರಿ ಪ್ರೀತನ್ ಕೈ ಹಿಡಿಯುತ್ತಾರ ಅವರ ಅಭಿಮಾನಿ ಸೈನ್ಯ??

ಹನೂರು :-ದಿವಂಗತ ಎಚ್ ನಾಗಪ್ಪ ರವರ ಹೆಸರಲ್ಲಿ ಇದೆ ಆನೆ ಬಲ ಪ್ರೀತನ್ ನಾಗಪ್ಪ ಗೆಲುವು ನಿಶ್ಚಯ ವರವಾಗಲಿದೆಯೇ ಈ ಬಾರಿ ವೈದ್ಯರ ವೃತ್ತಿ ಬಿಟ್ಟು ರಾಜಕೀಯಕ್ಕೆ ದುಮುಕಿರುವ ಪ್ರೀತನ್ ನಾಗಪ್ಪ 2018 ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಅಲ್ಪ ಮತಗಳಲ್ಲಿ ಪರಾಜೀತ ಗೊಂಡ ಪ್ರೀತನ್ ನಾಗಪ್ಪರವರ ಹಿಂದೆ ದೊಡ್ದ ಒಂದು ನಾಗಪ್ಪರವರ ಅಭಿಮಾನಿಗಳ ಸೈನ್ಯನೆ ಇದ್ದು ಈ ಬಾರಿ ಗೆಲ್ಲುವ ಎಲ್ಲ ಲಕ್ಷಣಗಳು ಕಾಣಿಸುತ್ತಿದೆ,

 

 

 

 

2013 ರಲ್ಲಿ ನೆಡದ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಕೇವಲ 1600 ಮತಗಳು ಮಾತ್ರ ಬಂದಿದ್ದವು, ಆ ಸಮಯದಲ್ಲಿ ಜೆಡಿಎಸ್ ಪಕ್ಷದಲ್ಲಿ ಇದ್ದ ಪ್ರೀತನ್ ನಾಗಪ್ಪರವರ ತಾಯಿ ಪರಿಮಳ ನಾಗಪ್ಪ 45 ಸಾವಿರ ಮತ ಪಡೆದುಕೊಂಡಿದ್ದರು,2018 ರ ಚುನಾವಣೆ ವೇಳೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ನಾಗಪ್ಪರವರ ಹೆಸರಿನ ಮುಖಾಂತರ ಕ್ಷೇತ್ರದಲ್ಲಿ ನೆಲೆ ಕಚ್ಚಿದ್ದ ಪಕ್ಷಕ್ಕೆ ದೊಡ್ದ ಮತ ಬ್ಯಾಂಕನ್ನು ತಂದರು, ಕೊನೆ ಘಳಿಗೆಯಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ ಪಡೆದು ಸ್ಪರ್ಧೆ ಮಾಡಿದ್ದ ಪ್ರೀತನ್ ನಾಗಪ್ಪ ಜೆಡಿಎಸ್ ಹಾಗೂ ಬಹುಜನ ಸಮಾಜ ಪಕ್ಷದ ಮೈತ್ರಿಯ ಅಭ್ಯರ್ಥಿ ಎಂ ಆರ್ ಮಂಜುನಾಥ್ ಹಾಗೂ ಕಾಂಗ್ರೆಸ್ ಪಕ್ಷದ ನರೇಂದ್ರರ ಪೈಪೋಟಿ ನಡುವೆ ಸರಿ ಸುಮಾರು ಹತ್ತಿರ 57 000 ಸಾವಿರ ಮತ ಪಡೆದು ಕೊನೆ ಸಮಯದಲ್ಲಿ ಆದ ಎಡವಟ್ಟಿನಿಂದ ಗೆಲ್ಲಬೇಕಿದ್ದ ಅವರು ಸರಿ ಸುಮಾರು 3000 ಸಾವಿರ ಮತಗಳಿಂದ ಸೊಲ್ನೋಪ್ಪಿದ್ದರು.

 

 

 

 

 

 

 

ಪಕ್ಷಕ್ಕೆ ಒಂದು ದೊಡ್ಡ ಮತ ಬ್ಯಾಂಕ್ ಕರೆದುಕೊಂಡು ಬಂದ ಪ್ರೀತನ್ ನಾಗಪ್ಪ ಈ ಬಾರಿ ಕೂಡ ಬಿಜೆಪಿ ಪಕ್ಷದ ದೊಡ್ಡ ಆಕಾಂಕ್ಷಿಯಾಗಿದ್ದು, ಇವರ ನಡುವೆ ಕ್ಷೇತ್ರಕ್ಕೆ ಬಂದಿರುವ ಜನದ್ವನಿ ವೆಂಕಟೇಶ್, ಹಾಗೂ ನಿಶಾಂತ್ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಆಗಿದ್ದು ಪ್ರೀತನ್ ನಾಗಪ್ಪರವರಿಗೆ ಟಿಕೆಟ್ ತಪ್ಪಿಸಲು ದೊಡ್ದ ಮಟ್ಟದಲ್ಲಿ ಪ್ರಯತ್ನ ಮಾಡುತ್ತ ಇದ್ದಾರೆ.

 

 

 

 

 

ಈ ಬಾರಿ ಪ್ರೀತನ್ ನಾಗಪ್ಪರವರಿಗೆ ಬಿಜೆಪಿ ಪಕ್ಷದಿಂದ ಟಿಕೆಟ್ ತಪ್ಪಿಸಿದ್ದರೆ ಇವರು ಪರ್ಯಾಯವಾಗಿ ಪಕ್ಷೇತರ ನಿಲ್ಲುವುದಿಲ್ಲ ಹಣ ಬಲವಾಗಲಿ ಜನ ಬಲವಾಗಲಿ ಇವರ ಹತ್ತಿರ ಇಲ್ಲಾ ನಮಗೆ ತುಂಬಾ ಅನುಕೂಲವಾಗುತ್ತದೆ ಎಂಬಾ ನಿಟ್ಟಿನಲ್ಲಿ ಲೆಕ್ಕಾಚಾರ ನೆಡುಯುತ್ತ ಇದೆ, ಆದರೆ ದಿವಂಗತ ಎಚ್ ನಾಗಪ್ಪ ಕ್ಷೇತ್ರದಲ್ಲಿ ಸರಳ ಸಜ್ಜನಿಕೆಗೆ ಹೆಸರವಾಸಿಯಾಗಿ ಅವರ ಕಾಲದಲ್ಲಿ ಕ್ಷೇತ್ರದ್ಯಂತ ಶಾಲೆ ಕಾಲೇಜ್ ಆಸ್ಪತ್ರೆ ರಸ್ತೆ ಇನ್ನೂ ಅನೇಕ ಅಭಿವೃದ್ಧಿ ತಮ್ಮದೇ ಸ್ವಂತ ಹಣದಲ್ಲಿ ಎಷ್ಟೋ ಕೆಲಸಗಳನ್ನು ಮಾಡಿ ತಮ್ಮದೇ ಆದ ಛಾಪು ಮೂಡಿಸಿದ್ದ ವ್ಯಕ್ತಿ ಅಂದಿನ ಕಾಲದಲ್ಲೇ ಮನೆಗೆ ಹೋದಂತ ಜನರಿಗೆ ಊಟ ತಿಂಡಿ ನೀಡಿ ಉಪಚಾರಿಸುತ್ತಿದ್ದರು.

 

 

 

ಜನರು ನಾಗಪ್ಪರವರ ಮನೆಯನ್ನು ಧರ್ಮ ಛತ್ರ ಅಂದುಕೊಂಡಿದ್ದರು ಇಷ್ಟಲ್ಲ ನೋಡಿರುವ ಜನ ನಾಗಪ್ಪರವರ ಮಗನನ್ನು ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ ಈಗಾಗಲೇ ತಮ್ಮ ಸ್ವಂತ ಹಣದಿಂದಲೇ ಪ್ರಚಾರ ಮಾಡುತ್ತ ಇದ್ದಾರೆ ನಾವು ಗೆಲ್ಲಿಸಲೇ ಬೇಕು ಎಂಬಾ ಪಣ ತೊಟ್ಟಿದ್ದಾರೆ ಎನ್ನುವುದು ತಿಳಿದುಬಂದಿದೆ,

 

 

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!