ತುಮಕೂರು ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಮತ ಇಲ್ಲ ಎಲ್ಲರೂ ಒಗ್ಗಟ್ಟಾಗಿದ್ದೇವೆ – ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅಹಮದ್

ತುಮಕೂರು ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಮತ ಇಲ್ಲ ಎಲ್ಲರೂ ಒಗ್ಗಟ್ಟಾಗಿದ್ದೇವೆ – ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅಹಮದ್

 

ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಶಾಸಕ ಅಭ್ಯರ್ಥಿಯಾಗಿ ಇಕ್ಬಾಲ್‌ ಅಹಮ್ಮದ್‌ ರವರು ಇಂದು ಉಮೇದುವಾರಿಕೆ ಸಲ್ಲಿಸಿ ಖಾಸಗಿ ಹೋಟೆಲ್‌ವೊಂದರಲ್ಲಿ ಸುದ್ಧಿಗೋಷ್ಠಿಯನ್ನು ನಡೆಸಿ ತಾನು ಗೆದ್ದರೆ ಅದು ಸಾಮಾನ್ಯ ಕಾಂಗ್ರೆಸ್‌ ಕಾರ್ಯಕರ್ತನ ಗೆಲುವಾಗಿರುತ್ತದೆಂದು ಇಕ್ಬಾಲ್‌ ಅಹ್ಮದ್‌ ರವರು ತಿಳಿಸಿದರು.

 

 

 

 

 

 

 

 

 

 

ಇಂದು ಸಹಸ್ರಾರು ಸಂಖ್ಯೆಯ ಜನರೊಂದಿಗೆ ಆಗಮಿಸಿ ಮಹಾನಗರ ಪಾಲಿಕೆಯಲ್ಲಿನ ಚುನಾವಣಾಧಿಕಾರಿಗಳ ಕಛೇರಿಗೆ ತೆರಳಿ, ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ತಾನು ಕಳೆದ 25 – 30 ವರ್ಷಗಳಿಂದ ಯೂತ್‌ ಕಾಂಗ್ರೆಸ್‌ ಕಾರ್ಯಕರ್ತನಾಗಿ ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿಕೊಂಡು ಇದುವರೆವಿಗೂ ಪಕ್ಷ ನೀಡಿದ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದನೆ, ನನ್ನ ಸೇವೆ ಮತ್ತು ಅರ್ಹತೆಗಳನ್ನು ಪರಿಗಣನೆಗೆ ತೆಗೆದುಕೊಂಡು ಸಾಮಾನ್ಯ ಕಾರ್ಯಕರ್ತನಾದ ನನಗೆ ಟಿಕೇಟ್‌ನ್ನು ಕಾಂಗ್ರೆಸ್‌ ಪಕ್ಷವು ನೀಡಿದ್ದು, ನನ್ನ ಮೇಲೆ ಇಟ್ಟಿರುವ ಭರವಸೆಯನ್ನು ಸಫಲ ಮಾಡಲು ಶ್ರಮಿಸುತ್ತೇನೆಂದರು.

 

 

 

 

 

 

 

ಮುಂದುವರೆದು  ತನಗೆ ಟಿಕೇಟ್‌ ಲಭಿಸಿದಾಗ ಕೆಲವೊಂದು ಅಸಮಾಧನಗಳು ತುಮಕೂರು ಕಾಂಗ್ರೆಸ್‌ ಪಕ್ಷದಲ್ಲಿ ನಡೆದೆತ್ತು, ನಮ್ಮ ಕಾಂಗ್ರೆಸ್ ಪಕ್ಷ ಒಂದು ಕುಟುಂಬ ಇದ್ದಹಾಗೆ ಜಿಲ್ಲಾ ರಾಜ್ಯ ಮತ್ತು ರಾಷ್ಟೀಯ ಮಟ್ಟದಲ್ಲಿ ಇದ್ದಾರೆ ಹಾಗಾಗಿ ಏನೇ ಸಮಸ್ಯೆ ಬಂದರು ಬಹು ಬೇಗೆ ಇತ್ಯಾರ್ಥವಾಗುತ್ತೆ ಆದರೆ ತುಮಕೂರು ವಿಚಾರದಲ್ಲಿ ಕೊಂಚ ತಡವಾಗಿದೆ ಅದಕ್ಕೆ ನಾನು ತಡವಾಗಿ ಮಧ್ಯಮಗೋಷ್ಠಿ ಮಾಡುತ್ತಿದ್ದೇನೆಂದು ತಿಳಿಸಿದರಲ್ಲದೇ ನನಗೆ ಟಿಕೇಟ್‌ ದೊರೆಯಲು ಕಾರಣರಾದ ಪ್ರತಿಯೊಬ್ಬ ಕಾಂಗ್ರೆಸ್‌ ನಾಯಕರಿಗೆ ಧನ್ಯವಾದಗಳನ್ನು ಮಾದ್ಯಮಗಳ ಮೂಲಕ ಅರ್ಪಿಸುತ್ತಿದ್ದೇನೆಂದರು.

 

 

 

 

 

 

 

 

 

 

ಇನ್ನುಳಿದಂತೆ ತುಮಕೂರು ನಗರ ಕ್ಷೇತ್ರದಲ್ಲಿ ಯಾವೊಂದು ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ, ನನ್ನನ್ನು ಜನರು ಆಯ್ಕೆ ಮಾಡಿದ ಕ್ಷಣದಿಂದಲೇ ನಾನು ಆ ಕೆಲಸ ಕಾರ್ಯಗಳಿಗೆ ಹೆಚ್ಚು ಒತ್ತು ನೀಡುವುದರೊಂದಿಗೆ ಅವರ ಆತ್ಮವಿಶ್ವಾಸನ್ನು ದೃಢಗೊಳಿಸುತ್ತೇನೆಂದರು. ಈ ಕ್ಷೇತ್ರದಲ್ಲಿ ಕಳಪೆ ಗುಣಮಟ್ಟದ ಹಾಗೂ ಅವೈಜ್ಞಾನಿಕ ರೀತಿಯಲ್ಲಿ ಮಾತ್ರ ಸ್ಮಾರ್ಟ್‌ ಸಿಟಿ ಕೆಲಸ ಕಾರ್ಯಗಳು ಆಗಿದ್ದು ಅದರ ಬಗ್ಗೆ ಮುಂದಿನ ದಿನಗಳಲ್ಲಿ ಅವಲೋಕನೆ ಮಾಡಿ ಅದನ್ನು ಸರಿಪಡಿಸುವಲ್ಲಿ ಶ್ರಮಿಸುವುದಾಗಿ ತಿಳಿಸಿದರಲ್ಲದೇ ಉದಾಹರಣೆಗೆ ನಗರದಲ್ಲಿ ಮಳೆ ಬಂದತಹ ಸಂದರ್ಭದಲ್ಲಿ ಮಳೆ ನೀರು ಸರಸಗವಾಗಿ ಸಾಗಲು ಸರಿಯಾದ ವ್ಯವಸ್ಥೆ ಇಲ್ಲ ಹೀಗೆ ಹತ್ತು ಹಲವಾರು ಸಮಸ್ಯೆಗಳು ಇವೆ ಈ ಕುರಿತು ಇನ್ನೇರಡು ದಿನಗಳ್ಳಲ್ಲಿ ವಿಶೇಷ ಪ್ರಣಾಳಿಕೆ ತಯಾರು ಮಾಡಿ ಮತ ಯಾಚನೆ ಮಾಡುತ್ತೇನೆ ಅಲ್ಲದೆ ನಾನು ಅದೇ ರೀತಿ ನಡೆದುಕೊಳ್ಳುತ್ತೇನೆ ಎಂದರು.

 

 

 

 

 

 

 

 

 

 

ಕೊನೆಯದಾಗಿ ತುಮಕೂರಿನ ನಡೆದಾಡುವ ದೇವರು ಎಂದು ಖ್ಯಾತಿ ಪಡೆದಿರುವ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಅನುಯಾಯಿ ಕೂಡ ನಾನು ಆಗಿದ್ದು, ಅವರು ಇದ್ದಂತಹ ಸಮಯದಲ್ಲಿ ಹಾಕಿಕೊಟ್ಟ ಕೆಲವು ಮಾರ್ಗದರ್ಶನ ಮತ್ತು ಅವರ ಸೇವಾ ಮನೋಭಾವಗಳು ನನಗೆ ಪ್ರೇರಣೆಯಾಗಿರುತ್ತವೆಂದು ಸ್ಮರಿಸಿದರು.

 

 

 

 

 

 

 

 

 

 

ಸುದ್ಧಿಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರುಗಳಾದ ನಯಾಜ್‌ ಅಹಮ್ಮದ್‌, ಗುರುಪ್ರಸಾದ್‌ ಹಾಗೂ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!