ತುಮಕೂರಿನಲ್ಲೊಂದು ಅಕ್ರಮ ಪಟಾಕಿ ಮಾರಾಟ ಮಳಿಗೆ , ಪಟಾಕಿ ಗೋಡನ್ ಎಲ್ಲಿ ಅಂತೀರಾ….??
ಅಕ್ರಮವಾಗಿ ಮಾರುತಿರುವ ನಾಟಿ ಪಟಾಕಿ
ತುಮಕೂರು – ಕಳೆದ ತಿಂಗಳು ರಾಜ್ಯವೇ ಬೆಚ್ಚಿ ಬೀಳುವಂಥ ಪಟಾಕಿ ದುರಂತ ಕಂಡ ಅತ್ತಿಬೆಲೆ ಪಟಾಕಿ ದುರಂತ 17 ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡ ಘಟನೆಯ ನಂತರ ಸರ್ಕಾರ ಕಟ್ಟುನಿಟಿನ ಸೂಚನೆಯೊಂದಿಗೆ ಈ ಬಾರಿ ಪಟಾಕಿ ಮಳಿಗೆ ನಡೆಸಲು ಪರವಾನಗಿ ನೀಡಲು ಹಲವು ಕಟ್ಟುನಿಟಿನ ಕ್ರಮಗಳನ್ನು ತೆಗೆದುಕೊಂಡು ಪಟಾಕಿ ಮಾರಲು ಅನುಮತಿ ನೀಡಿದೆ.
ಇನ್ನು ರಾಜ್ಯ ಸರ್ಕಾರದ ಕಟ್ಟುನಿಟಿನ ಕ್ರಮಗಳಿಗೆ ಬೆಚ್ಚಿಬಿದ್ದಿರುವ ಪಟಾಕಿ ಮಾರಾಟಗಾರರು ಹೇಗಾದರೂ ಮಾಡಿ ಉಳಿದಿರುವ ಪಟಾಕಿಯನ್ನು ಮಾರಿ ಹಣ ಸಂಪಾದಿಸಲು ಹಲವು ವಾಮ ಮಾರ್ಗಗಳನ್ನು ಹುಡುಕಿಕೊಳ್ಳುತ್ತಿದ್ದಾರೆ.
ರಾಜ್ಯ ಸರ್ಕಾರದ ಕಟ್ಟುನಿಟಿನ ಕ್ರಮಗಳನ್ನು ಪೂರ್ಣಗೊಳಿಸಲು ಆಗದ ಪಟಾಕಿ ಮಾರಾಟಗಾರರು ಹಲವು ವಾಮ ಮಾರ್ಗಗಳನ್ನು ಕಂಡುಕೊಂಡು ಪಟಾಕಿ ಮಾರುತಿರುವ ಆರೋಪಗಳು ಕೇಳಿ ಬರುತ್ತಿವೆ.
ಇದಕ್ಕೆ ಪುಷ್ಟಿ ನೀಡುವಂತೆ ತುಮಕೂರಿನಲ್ಲೊಂದು ಅಕ್ರಮ ಪಟಾಕಿ ಮಾರಾಟ ದಂದೆ ಎಗ್ಗಿಲ್ಲದೆ ಸಾಗುತ್ತಿದೆ ಇದಕ್ಕೆ ಕುರಿತಾದ ಕಂಪ್ಲೀಟ್ ಡೀಟೇಲ್ಸ್ ನಿಮ್ಮ ಮುಂದೆ.
ತೋಟದಲ್ಲಿ ಕುಳಿತು ಗ್ರಾಹಕರಿಗೆ ಬೇಕಿರುವ ಪಟಾಕಿಗಳ ಪಟ್ಟಿ ಮಾಡುತ್ತಿರುವ ಮಾಲೀಕ
ತುಮಕೂರಿನ ಕೂಗಳತೆಯ ದೂರದಲ್ಲಿರುವ ಹೆಗ್ಗೆರೆಯಲ್ಲಿ ವರ್ತಕ ಹಲವು ವರ್ಷಗಳಿಂದ ಪಾರಂಪರಿಕ (ನಾಟಿ) ಪಟಾಕಿ ಮಳಿಗೆಯನ್ನ ನಡೆಸಿಕೊಂಡು ಬರುತ್ತಿದ್ದು ಈ ಬಾರಿಯ ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಬೇಸತ್ತಿರುವ ವರ್ತಕ ವಾಮ ಮಾರ್ಗದ ಮೂಲಕ ಪಟಾಕಿ ಮಾರಾಟಕ್ಕೆ ಮುಂದಾಗಿರುವ ಘಟನೆ ವರದಿಯಾಗಿದೆ.
ಹಲವು ವರ್ಷಗಳಿಂದ ಪಟಾಕಿ ಮಾರುತಿದ್ದ ವರ್ತಕ ಈ ಬಾರಿ ಅಧಿಕೃತವಾಗಿ ಲೈಸೆನ್ಸ್ ಇಲ್ಲದೆ ಕಳ್ಳ ದಾರಿಯ ಮೂಲಕ ಪಟಾಕಿ ಮಾರುತಿದ್ದು ಇದಕ್ಕೆ ಸಂಬಂಧಿಸಿದಂತೆ ತುಮಕೂರಿನ ಮಾಧ್ಯಮ ತಂಡ ನಡೆಸಿರುವ ಸ್ಟಿಂಗ್ ಆಪರೇಷನ್ ನಲ್ಲಿ ವರ್ತಕನ ಮುಖವಾಡ ಸಂಪೂರ್ಣ ಬಯಲಾಗಿದೆ.
ಪಟಾಕಿ ತಂದುಕೊಡಲು ನೇಮಕವಾಗಿರುವ ಮತ್ತೊಬ್ಬ ವ್ಯಕ್ತಿ
ಇನ್ನು ವರ್ತಕ ಪಟಾಕಿ ಮಾರಲು ಹಲವು ದಾರಿಗಳನ್ನ ಹುಡುಕಿಕೊಂಡಿರುವ ಮಾಹಿತಿ ಹೀಗಿದ್ದು ಪಟಾಕಿ ಬೇಕಿರುವ ಗ್ರಾಹಕ ಆತನ ತೋಟಕ್ಕೆ ಭೇಟಿ ನೀಡಿದಾಗ ಗ್ರಾಹಕರಿಗೆ ಬೇಕಿರುವ ಪಟಾಕಿಗಳ ಪಟ್ಟಿ ತಯಾರಿಸಿ ಆ ಪಟ್ಟಿಯನ್ನು ವಾಟ್ಸಾಪ್ ಮೂಲಕ ಮತೊಬ್ಬ ವ್ಯಕ್ತಿಗೆ ರವಾನಿಸಿ ಆ ವ್ಯಕ್ತಿಯ ಮೂಲಕ ಅವರು ಕೊಡುವ ಫೋನ್ ನಂಬರ್ ಸಂಪರ್ಕಿಸಿ ಅವರು ಹೇಳುವ ಜಾಗಕ್ಕೆ ಹೋದ ಬಳಿಕ ಬೇಕಿರುವ ಪಟಾಕಿಗಳನ್ನ ಕುದ್ದು ಅವರೇ ತಂದು ಗ್ರಾಹಕರ ಕೈಗೆ ಕೊಟ್ಟು ಹೋಗುತ್ತಿರುವುದು ದಂದೆಯ ಸಂಪೂರ್ಣ ಜಾಡು ಸ್ಟಿಂಗ್ ಆಪರೇಶನ್ನಲ್ಲಿ ಬಯಲಾಗಿದೆ.
ಇನ್ನು ವಾಮ ಮಾರ್ಗದ ಮೂಲಕ ಪಟಾಕಿ ಮಾರುತ್ತಿರುವ ವರ್ತಕ ಪೊಲೀಸರಿಗೆ ಕಣ್ ತಪ್ಪಿಸಿ ಯಾರು ಊಹೆಗೂ ನಿಲುಕದ ಸ್ಥಳವನ್ನು ತನ್ನ ಪಟಾಕಿ ಗೋಧಾಮನ್ನಗಿ ಮಾಡಿಕೊಂಡಿದ್ದಾನೆ ಇನ್ನು ಆ ಗೋದಾಮು ಯಾವುದೆಂದರೆ ಅದು ಸ್ಮಶಾನದ ಜಾಗದಲ್ಲಿ ಇರುವ ಹಳೇ ಕಟ್ಟಡದಲ್ಲಿ ಅಕ್ರಮವಾಗಿ ಪಟಾಕಿ ಗೊಡಾನ್ ನಾಗಿ ಮಾಡಿಕೊಂಡಿದ್ದಾರೆ ಈ ಅಕ್ರಮ ಪಟಾಕಿ ಮಾರಾಟಗಾರರು.
ರುದ್ರ ಭೂಮಿಯಲ್ಲಿರುವ ಕಟ್ಟಡವನ್ನು ಗೋದಮನಾಗಿ ಮಾಡಿಕೊಂಡಿರುವುದು
ಇನ್ನು ಘಟನೆಯ ಬಗ್ಗೆ ಮಾಹಿತಿ ಪಡೆದ ನಮ್ಮ ತಂಡ ಸ್ಥಳಕ್ಕೆ ಭೇಟಿ ನೀಡಿದಾಗ ಮೇಲ್ಕಾಣಿಸಿದ ವ್ಯಕ್ತಿಯೇ ಖುದ್ದು ನಮಗೆ ಪಟಾಕಿಗಳನ್ನ ತಂದುಕೊಡುವ ಮೂಲಕ ಅಕ್ರಮ ಪಟಾಕಿ ಮಾರಾಟ ದಂದೆಗೆ ಮತ್ತಷ್ಟು ಪುಷ್ಟಿಕರಿಸಿರುವುದು ಸ್ಥಳೀಯ ಆಡಳಿತಗಳ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ
ಅದೇನೇ ಇರಲಿ ಅತ್ತಿಬೆಲೆ ಪಟಾಕಿ ದುರಂತದ ನಂತರ ಸರ್ಕಾರ ಹಾಗೂ ಸ್ಥಳೀಯ ಆಡಳಿತಗಳು ಕಟ್ಟುನಿಟ್ಟಿನ ಕ್ರಮದೊಂದಿಗೆ ಈ ಬಾರಿಯ ಪಟಾಕಿ ಮಾರಾಟಕ್ಕೆ ಅನುಮತಿ ನೀಡಿದ್ದು ಒಂದು ಕಡೆಯಾದರೆ ಅದಕ್ಕೆ ವಿರುದ್ಧವಾಗಿ ವಾಮ ಮಾರ್ಗದ ಮೂಲಕ ಅಕ್ರಮವಾಗಿ ಹಣ ಸಂಪಾದಿಸಲು ಉದ್ದೇಶ ಹೊಂದಿರುವ ಇಂತಹ ಅಕ್ರಮ ಪಟಾಕಿ ಮಾರಾಟಗಳಿಗೆ ಶಾಶ್ವತವಾಗಿ ಅಂಕುಶ ಹಾಕುವ ಕೆಲಸ ಸ್ಥಳೀಯ ಆಡಳಿತಗಳು ಮಾಡಬೇಕಿದೆ ಇಲ್ಲವಾದಲ್ಲಿ ಅತ್ತಿ ಬೆಲೆಯ ಪಟಾಕಿ ದುರಂತ ಜಿಲ್ಲೆಯಲ್ಲಿ ಮರುಕಳಿಸುವುದರಲ್ಲಿ ಯಾವುದೇ ಸಂಶಯ ಇಲ್ಲ.
ಇನ್ನಾದರೂ ಸಂಬಂಧಪಟ್ಟ ಇಲಾಖೆಗಳು ಇಂತಹ ಅಕ್ರಮ ಪಟಾಕಿ ಮಳಿಗೆಗಳಿಗೆ ಹಾಗೂ ಮಾರಾಟಗಾರರಿಗೆ ತಕ್ಕ ಕಾನೂನಿನ ಪಾಠ ಕಲಿಸುವ ಮೂಲಕ ಅಕ್ರಮಗಳಿಗೆ ಬ್ರೇಕ್ ಹಾಕಬೇಕಿದೆ.