ಪೊಲೀಸ್ ಮನೆಯಲ್ಲೇ ಕಳವುಗೈದು ಎಸಿ ಆನ್ ಮಾಡಿ ನಿದ್ದೆ ಹೋದ…ಸೋಮಾರಿ ಕಳ್ಳನನ್ನು ಬಂಧಿಸಲು ಬಂಧ ಪೊಲೀಸರೇ ಎಚ್ಚರಿಸಿದ್ರು
ಥಾಯ್ಲೆಂಡ್: ಪೊಲೀಸ್ ಅಧಿಕಾರಿಯೊಬ್ಬರ ಮನೆಗೆ ಕಳ್ಳತನಕ್ಕೆ ಇಳಿದ ವ್ಯಕ್ತಿ ಅಲ್ಲೇ ನಿದ್ದೆ ಹೋದ ಕಾರಣ ಪೊಲೀಸರೇ ಬಂದು ಆತನನ್ನು ಎಬ್ಬಿಸಿರುವುದು ಥಾಯ್ಲೆಂಡ್‌ನಲ್ಲಿ ವರದಿಯಾಗಿದೆ.
ಥಾಯ್ಲೆಂಡ್‌ನ ಪೊಲೀಸ್ ಅಧಿಕಾರಿಯೊಬ್ಬರ ಮನೆಗೆ ನುಗ್ಗಿದ ಕಳ್ಳ ಬಹಳ ಆಯಾಸಗೊಂಡಿದ್ದ. ಕದಿಯುವುದೆಲ್ಲಾ ಮುಗಿದ ನಂತರ ಆತ ವಿಶ್ರಾಂತಿ ಪಡೆಯಲೆಂದು ಪೊಲೀಸ್ ಅಧಿಕಾರಿಯ ಮಗಳ ಕೋಣೆಗೆ ಹೋಗಿದ್ದ. ಏರ್ ಕಂಡೀಷನ್ ವ್ಯವಸ್ಥೆಯನ್ನು ಆನ್ ಮಾಡಿಕೊಂಡು ಚೆನ್ನಾಗಿ ನಿದ್ದೆ ಮಾಡಿದ್ದಾನೆ. ದುರದೃಷ್ಟವಶಾತ್ ಬೆಳಿಗ್ಗೆ ಆತನನ್ನು ಬಂಧಿಸಲು ಬಂದ ಪೊಲೀಸ್ ಅಧಿಕಾರಿಗಳು ಎಚ್ಚರಿಸಿದಾಗಲೇ ಆತನ ನಿದ್ದೆ ಬಿಟ್ಟಿದೆ. ನಿದ್ದೆಯಿಂದ ಎಬ್ಬಿಸಿ ಕಳ್ಳನನ್ನು ಬಂಧಿಸುವ ಪೊಲೀಸ್ ಅಧಿಕಾರಿಗಳ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದ ಬಳಕೆದಾರರ ಸೋಮಾರಿ ಕಳ್ಳನ ಬಗ್ಗೆ ಹಾಸ್ಯ ಮಾಡುತ್ತಿದ್ದಾರೆ.
ಥಾಯ್ ಪೊಲೀಸರ ಪ್ರಕಾರ ಫೆಟ್ಚಬನ್ ಪ್ರಾಂತ್ಯದ ವಿಚೈನ್ ಬುರಿ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುವ ಪೊಲೀಸ್ ಅಧಿಕಾರಿ ಜಿಯಾಮ್ ಪ್ರಸರ್ಟ್ ಮನೆಗೆ ಕಳ್ಳ ಬೆಳಗಿನ ಜಾವ 2 ಗಂಟೆಗೆ ನುಗ್ಗಿದ್ದ. ಪೊಲೀಸ್ ಅಧಿಕಾರಿ ನಿದ್ದೆ ಮಾಡಿದ ಕಾರಣ ಟೂಲ್ ಕಿಟ್ ಬಳಸಿ ಮನೆಯ ಕದ ಒಡೆದು ಕಳ್ಳ ಒಳಗೆ ಪ್ರವೇಶಿಸಿದ್ದ. ಅಧಿಕಾರಿ ಬೆಳಗಿನ ಜಾವ ಕಳ್ಳನ ಇರವನ್ನು ಪತ್ತೆ ಮಾಡಿ 22 ವರ್ಷದ ವ್ಯಕ್ತಿ ತನ್ನ ಮನೆಗೆ ನುಗ್ಗಿದ್ದಾನೆ ಎಂದು ಪೊಲೀಸರಿಗೆ ದದೂರು ನೀಡಿದ್ದರು. ಅತಿತ್ ಕಿನ್ ಕುನ್‌ಥಡ್ ಅಧಿಕಾರಿಯ ಮನೆಗೆ ನುಗ್ಗುವ ಮೊದಲು ಹಲವು ದಿನಗಳಿಂದ ಮನೆಯ ಮುಂದೆ ಅಡ್ಡಾಡಿ ವಿವರ ಕಲೆ ಹಾಕಿದ್ದ. ಅಂತಿಮವಾಗಿ ಮನೆಯೊಳಗೆ ಪ್ರವೇಶಿಸುವ ಅವಕಾಶ ಸಿಕ್ಕಾಗ ಬಹಳ ಸುಸ್ತಾಗಿದ್ದ. ಹೀಗಾಗಿ ಏರ್ ಕಂಡೀಷನ್ ಆನ್ ಮಾಡಿ ಸ್ವಲ್ಪ ಹೊತ್ತು ನಿದ್ದೆ ಮಾಡಲು ಪ್ರಯತ್ನಿಸಿದ್ದ. ಆದರೆ ನಿದ್ದೆ ಧೀರ್ಘವಾಗಿ ಬೆಳಿಗ್ಗೆಯೇ ಎಚ್ಚರವಾಗಿತ್ತು.
ಮಗಳ ಕೋಣೆಯಲ್ಲಿ ಏರ್ ಕಂಡೀಷನ್ ಚಲಾಯಿಸಿರುವುದು ಕಂಡ ಅಧಿಕಾರಿ ಮಗಳು ಮನೆಯಲ್ಲಿ ಇಲ್ಲದಾಗ ಯಾರು ಸ್ವಿಚ್ ಆನ್ ಮಾಡಿದ್ದಾರೆ ಎಂದು ತಿಳಿಯಲು ಕೋಣೆಗೆ ಆಗಮಿಸಿದ್ದರು. ಆದರೆ ಕೋಣೆಯೊಳಗೆ ಬ್ಲಾಂಕೆಟ್ ಹೊದ್ದು ಮಲಗಿದ ಕಳ್ಳನನ್ನು ಕಂಡು ಅಚ್ಚರಿಯಾಗಿತ್ತು. ತಕ್ಷಣವೇ ಪೊಲೀಸರನ್ನು ಕರೆಸಿದ್ದರು. ಅಚಾನಕ್ ಆಗಿ ಎದುರಿಗೆ ಪೊಲೀಸರನ್ನು ಕಂಡು ಬೆಚ್ಚಿ ಬಿದ್ದು ಎದ್ದ ಕಳ್ಳನನ್ನು ಎಬ್ಬಿಸಿ ಬಂಧಿಸುವಾಗ ಪೊಲೀಸರು ವೀಡಿಯೊ ಮಾಡಿದ್ದರು. ನಂತರ ಕೈಕೋಳ ತೊಡಿಸಿ ಆತನನ್ನು ಠಾಣೆಗೆ ಕರೆದೊಯ್ಯಲಾಗಿದೆ. ಆತನ ಮೇಲೆ ಕಳ್ಳತನ ಮತ್ತು ಅನಧಿಕೃತವಾಗಿ ಪ್ರವೇಶಿಸಿರುವ ಆರೋಪ ಹೊರಿಸಲಾಗಿದೆ.
ಕಳ್ಳರು ಇಂತಹ ಮೂರ್ಖತನ ಮಾಡುವುದು ಇದೇ ಮೊದಲೇನಲ್ಲ. 2020 ಸೆಪ್ಟೆಂಬರ್‌ನಲ್ಲಿ ಭಾರತದಲ್ಲೂ ಇಂತಹದೇ ಪ್ರಕರಣ ನಡೆದಿತ್ತು. ಆಂಧ್ರಪ್ರದೇಶದ ಮನೆಯೊಂದಕ್ಕೆ ಕಳ್ಳತನ ಮಾಡಲು ಹೋದ ಕಳ್ಳ ಮನೆಯಲ್ಲೇ ಮಲಗಿದ್ದ. ಅಲ್ಲೂ ಏರ್ ಕಂಡೀಷನ್ ವ್ಯವಸ್ಥೆ ಇದ್ದು, ಕಳ್ಳ ಆರಾಮವಾಗಿ ನಿದ್ದೆ ಹೊಡೆದಿದ್ದ. ಆತನ ಗೊರಕೆ ಸದ್ದು ಕೇಳಿ ಎಚ್ಚರಗೊಂಡ ಮನೆ ಮಾಲೀಕ ಪೊಲೀಸರಿಗೆ ದೂರು ನೀಡಿದ್ದ