ಪಥಸಂಚಲನದ ಮೂಲಕ ಧೈರ್ಯ ತುಂಬಿದ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ.
ತುಮಕೂರು_ರಾಜ್ಯದ್ಯಂತ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಸಾರ್ವಜನಿಕರು ತೀವ್ರ ಆತಂಕಕ್ಕೆ ಈಡಾಗಿದ್ದು ಸಾರ್ವಜನಿಕರಲ್ಲಿ ಧೈರ್ಯ ತುಂಬುವ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಕಿಡಿಗೇಡಿಗಳಿಗೆ ಎಚ್ಚರಿಸುವ ಸಲುವಾಗಿ ಇಂದು ತುಮಕೂರು ನಗರದಲ್ಲಿ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪಥಸಂಚಲನ ನಡೆಸಲಾಯಿತು.
ಇನ್ನು ಪಥಸಂಚಲನ ದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಕೆಎಸ್ಆರ್ಪಿ ತುಕಡಿಗಳು ಪಥಸಂಚಲನ ನಡೆಸಿದ್ದು ತುಮಕೂರು ನಗರದ ಗುಬ್ಬಿ ಗೇಟ್ನಿಂದ, ಸಂತೆಪೇಟೆ, ಬಿ.ಜೆ ಪಾಳ್ಯ ವೃತ್ತ, ಎಸ್.ಎಸ್ ಟೆಂಪಲ್ ರೋಡ್, ಚಾಂದಿನಿ ರಸ್ತೆ ,ವೀರಸಾಗರ, ದಾನ ಪ್ಯಾಲೇಸ್, ಸದಾಶಿವನಗರ ಬನಶಂಕರಿ ಮುಖ್ಯರಸ್ತೆ ,ಶಾಂತಿನಗರ ವಿಶ್ವಣ್ಣ ಲೇಔಟ್ , ಮರಳೂರು ದಿಣ್ಣೆ ರಸ್ತೆಗಳಲ್ಲಿ ಪೊಲೀಸ್ ಪಥಸಂಚಲನ ನಡೆಯಿತು.
ಈಗಾಗಲೇ ಹಿಜಾಬ್ ಮತ್ತು ಕೇಸರಿ ಶಾಲಿನ ಪ್ರಕರಣ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ ಹಾಗೂ ಮಾನ್ಯ ನ್ಯಾಯಾಲಯ ನೀಡುವ ಆದೇಶ ಸೂಚನೆಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಭಟನೆ ಧರಣಿ ಮುಂತಾದವುಗಳನ್ನು ಮಾಡಬಾರದು ಹಾಗೂ ಸುಳ್ಳು ಸಂದೇಶ ಮತ್ತು ವದಂತಿಗಳಿಗೆ ಕಿವಿ ಕೊಡಬಾರದು ಹಾಗೂ ಸಾಮಾಜಿಕ ಜಾಲತಾಣಗಳ ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಗಳಲ್ಲಿ ಪ್ರಚೋದನಾಕಾರಿ ಹೇಳಿಕೆಗಳನ್ನು ಹಬ್ಬಿಸುವುದು ಕಂಡು ಬಂದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.
ವರದಿ_ ಮಾರುತಿ ಪ್ರಸಾದ್ ತುಮಕೂರು