ಶಾಂತಿ, ನೆಮ್ಮದಿ ಲಭಿಸಲು ದೇವಾಲಯದ ಪಾತ್ರ ಹೆಚ್ಚು 

ಶಾಂತಿ, ನೆಮ್ಮದಿ ಲಭಿಸಲು ದೇವಾಲಯದ ಪಾತ್ರ ಹೆಚ್ಚು 

ದೇವನಹಳ್ಳಿ: ದಿನನಿತ್ಯದ ಒತ್ತಡದ ಬದುಕಿನಲ್ಲಿ ನೆಮ್ಮದಿಯ ಜೀವನ ಕಟ್ಟಿಕೊಳ್ಳಲು ದೇವಾಲಯದ ಪಾತ್ರ ಹೆಚ್ಚು ಇದೆ ಎಂದು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿ.ಶಾಂತಕುಮಾರ್ ತಿಳಿಸಿದರು.

 

ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಮುನೇಶ್ವರಸ್ವಾಮಿ ದೇಗುಲಕ್ಕೆ ಧನಸಹಾಯ ಮಾಡಿ ಅವರು ಮಾತನಾಡಿದರು. ಪ್ರತಿ ಜನರು ಶಾಂತಿ, ನೆಮ್ಮದಿಯ ಬದುಕು ಕಟ್ಟಿಕೊಂಡು ಸಂತೋಷದ ಜೀವನ ಸಾಗಿಸಲು ಸಾಮಾನ್ಯವಾಗಿ ದೇವರ ಮೊರೆಹೋಗುತ್ತಾರೆ. ದೇವರು ನೆಲೆಸಿರುವ ಪವಿತ್ರ ಸ್ಥಳಗಳ ಅಭಿವೃದ್ಧಿಯಿಂದ ದೇವಾಲಯಕ್ಕೆ ಬರುವ ಭಕ್ತಾಧಿಗಳು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಭಗವಂತನಲ್ಲಿ ಬೇಡಿಕೊಳ್ಳುತ್ತಾರೆ. ಅದರಂತೆ ತಮ್ಮ ಮನಸ್ಸಿಗೆ ನೆಮ್ಮದಿಯನ್ನು ಕರುಣಿಸುವ ಪುಣ್ಯ ಕ್ಷೇತ್ರ ದೇವಾಲಯವಾಗಿದೆ. ಪ್ರತಿಯೊಬ್ಬರು ದೇವಾಲಯಗಳ ಉನ್ನತೀಕರಣ ಮತ್ತು ಜೀರ್ಣೋದ್ಧಾರಗಳಿಗೆ ಕೈಜೋಡಿಸುವ ಕೆಲಸ ಮಾಡಬೇಕು ಎಂದರು.

ದೇವನಹಳ್ಳಿ ತಾಲೂಕಿನ ಹಲವಾರು ದೇವಾಲಯಗಳಿಗೆ ಭೇಟಿ ನೀಡಿ ಅಲ್ಲಿನ ಕುಂದುಕೊರತೆಗಳಿಗೆ ಸ್ಪಂಧಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ನಮ್ಮ ನಾಡ ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡಲಾಗುತ್ತಿದೆ. ಒಂದು ಗ್ರಾಮದಲ್ಲಿ ದೇವಾಲಯವಿದ್ದರೆ ಅಲ್ಲಿ ಯಾವುದೇ ಸಮಸ್ಯೆ ಗ್ರಾಮಕ್ಕೆ ಬರುವುದಿಲ್ಲವೆಂಬ ಗಾಡ ನಂಬಿಕೆ ಗ್ರಾಮಸ್ಥರಲ್ಲಿದೆ. ಇದನ್ನು ನಮ್ಮ ಪೂರ್ವಜರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆದುಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ಈ ವೇಳೆಯಲ್ಲಿ ಮುಖಂಡರಾದ ದೇವನಹಳ್ಳಿ ಸೋಮಣ್ಣ, ಮದ್ದೂರಪ್ಪ, ಆಲೂರುದುದ್ದನಹಳ್ಳಿ ಗ್ರಾಪಂ ಸದಸ್ಯರಾದ ಭೈರೇಗೌಡ, ಯಲ್ಲಪ್ಪ, ಊರಿನ ಮುಖಂಡರು, ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!