ಬಾವಿಗೆ ಬಿದ್ದ ತಂಗಿ ರಕ್ಷಿಸಿದ ಅಕ್ಕ ಪುಟ್ಟ ವಯಸ್ಸಿನ ಹೆಣ್ಣು ಮಗಳ ಸಾಹಸಗಾಥೆ….

ಬಾವಿಗೆ ಬಿದ್ದ ತಂಗಿ ರಕ್ಷಿಸಿದ ಅಕ್ಕ ಪುಟ್ಟ ವಯಸ್ಸಿನ ಹೆಣ್ಣು ಮಗಳ ಸಾಹಸಗಾಥೆ….

 

 

 

ತುಮಕೂರು –    ಕಥೆ ಅಲ್ಲ.. ನೈಜ ಘಟನೆ. ಉತ್ತರ ಪ್ರದೇಶದ ಒಂದು ಫ್ಯಾಮಿಲಿ ತೋಟದ ಕೆಲಸಕ್ಕಾಗಿ ತೋಟದ ಮನೆಯಲ್ಲಿ ವಾಸ್ತವ್ಯವಿತ್ತು.

 

 

 

 

ಬಡತನವಾದರೂ, ನಾಲ್ಕು ಮಕ್ಕಳೆಂಬ ಚಿಂತೆಯಿಡದೇ, ಮಕ್ಕಳ ಆರೈಕೆಯ ಬಗೆಗೆ ಬೇಜಾರಿಲ್ಲದ, ಮಕ್ಕಳಿಗಾಗಿ ಯಾವ ತ್ಯಾಗಕ್ಕೂ ಸಿದ್ಧರಿರುವಂತಹ ಅವರ ಮಕ್ಕಳ ಬಗೆಗಿನ ಕಾಳಜಿ ನನಗೂ ಒಮ್ಮೊಮ್ಮೆ ಅಸೂಯೆ ತರಿಸಿದ್ದು ಉಂಟು. ಒಟ್ಟಾರೆ ಯಾರೂ ಬೆರಳು ಮಾಡಿ ನಿಂದಿಸದಂತಹ ಸುಖಿ ಕುಟುಂಬ ಹೀಗಿರುವಾಗ ಈ ವರ್ಷದ ಮಳೆಗಾಲ ಪ್ರಾರಂಭಲ್ಲೇ, ಅಂದರೆ ಕಳೆದ ವಾರ ಅವರು ವಾಸ್ತವ್ಯವಿರುವ ಕುಚ್ಚಂಗಿ ಪಾಳ್ಯ ಗ್ರಾಮ ಊರುಕೆರೆ ಅಂಚೆ,ಅರಕೆರೆ ಪಂಚಾಯಿತಿ ತೋಟದ ಮನೆಯ ಪಕ್ಕ ಇರುವ ಬಾವಿ ನೀರಿನಿಂದ ತುಂಬಿ ತುಳುಕುತ್ತಿತ್ತು. ಈ ಫ್ಯಾಮಿಲಿಯ ಕೊನೆಯ ಮಗ 2 ವರ್ಷದವ ಮತ್ತು ಮೂರನೇಯ ಮಗಳು 3 ವರ್ಷದವಳು ಆಟವಾಡುವ ಉಮ್ಮಸ್ಸಿನಲ್ಲಿ ಬಾವಿ ದಡದವರೆಗೆ ಸಾಗಿದ್ದಾರೆ, ಮಕ್ಕಳಾಟದ ಗುಂಗಿನಲ್ಲಿದ್ದ ಇಬ್ಬರು ಏನು ಅರಿಯದ ವಯಸ್ಸಿನಲ್ಲಿ ಯಾವೋದು ವಸ್ತುವನ್ನು ತನ್ನ ವಶ ಮಾಡಿಕೊಳ್ಳುವ ಭರದಲ್ಲಿ ಕೊನೆಯವ, ಮೂರನೇಯವಳಾದ ಅಕ್ಕನನ್ನು ಕೊಡಲಿಲ್ಲವೆಂಬ ಕಾರಣಕ್ಕೊ ಏನೋ ದೂಡಲ್ಪಟ್ಟ ನಿಮಿತ್ತ ಸುಮಾರು 25 ಅಡಿಗೂ ಮಿಗಿಲಾಗಿ ನೀರು ತುಂಬಿಕೊಂಡು ಆಳವಿದ್ದ ಬಾವಿಗೆ ದಡದಿಂದ ಇಳಿಜಾರಾಗಿದ್ದ ಕಡೆ ಉರುಳುರುಳಿ ಬಾವಿಗೆ ಬಿದ್ದೆಬಿಟ್ಟಿದ್ದಾಳೆ.

 

 

 

 

 

 

ಅಪ್ಪ-ಅಮ್ಮ ಇಬ್ಬರು ಸುಮಾರು ನೂರು ಮೀಟರ್ ಅಂತರದ ದೂರದಲ್ಲಿ ತೋಟದ ಕೆಲಸದಲ್ಲಿ ನಿರತರಾಗಿದ್ದಾರೆ, ಏನು ಕಿರುಚಿದ ಶಬ್ದ ಕೇಳಿ ಹಿಂತಿರುಗುವಷ್ಟರಲ್ಲಿ, ಮನೆಯ ಹೊರಗಡೆ ಅನತಿ ದೂರದಲ್ಲಿದ್ದ ಅಕ್ಕ “ಶಾಲಿನಿ” ಎಂಬ ಬಾಲೆ 8 ವರ್ಷದವಳು ಪ್ರಸ್ತುತ ಸ ಹಿ ಪ್ರಾಥಮಿಕ ಶಾಲೆ ಕುಚ್ಚಂಗಿ ಪಾಳ್ಯ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿರುವ ಶಾಲು ಎಂಬ ದೊಡ್ಡ ಮಗಳು ನೋಡಿದವಳೇ ಮನೆಯ ಒಳಗಡೆ ಹೋಗಿ ಆತುರದಲ್ಲಿ ಕೂಡ ಮರೆಯದೇ ಈ ಎರಡು ದಿನದ ಹಿಂದೆ ನಾನು ನನ್ನ ಮಗಳಿಗಾಗಿ ತರಿಸಿದ್ದ ಲೈಫ್ ಜಾಕೆಟ್ ಅವರ ಮನೆಯ ಒಳಗಡೆ ಇರುವುದನ್ನ ನೆನಪುಮಾಡಿಕೊಂಡು ಮತ್ತು ಅದನ್ನ ಧರಿಸಿ (ಕೇವಲ ಈ ಹಿಂದಿನ ಎರಡು ದಿನ ಹಿಂದೆ ಅವಳು ಕೂಡ ಲೈಫ್ ಜಾಕೆಟ್ ಧರಿಸಿ ಈಜಲು ಕಲಿಯಲು ಪರಿಣಾಮಕಾರಿಯಾಗಿ ಪ್ರಯತ್ನಿಸಿದ್ದವಳು) ತನ್ನ ಬುದ್ದಿ ಮತ್ತೆಯಿಂದ ತಕ್ಷಣವೇ ತುಂಬಿದ ಬಾವಿಗೆ ಧುಮುಕಿ ಧೈರ್ಯವಾಗಿ ತಂಗಿಯ ಜೀವ ಕಾಪಾಡಲು ಯಾರನ್ನು ಕಾಯದೇ,ಜೀವದ ಹಂಗು ತೊರೆದು ಮುಳುಗುತ್ತಿದ್ದ ತಂಗಿಯನ್ನ ಮೇಲೆತ್ತಿ ದಡಕ್ಕೆಳೆದು ತರುವಲ್ಲಿ ಒಬ್ಬಂಟಿಯಾಗಿ ಯಶಸ್ವಿಯಾಗಿದ್ದಾಳೆ.

 

 

 

 

 

ಅಷ್ಟರಲ್ಲಿ ಇವಳ ಅಪ್ಪ ಅಮ್ಮನ ತೋಟದ ಕೆಲಸದ ಜೊತೆ ಪೈಂಟ್ ಮಾಡುತ್ತಿದ್ದ ಅಣ್ಣಪ್ಪ ಮತ್ತು ಹರೀಶ್ ದಿಢೀರನೆ ಧಾವಿಸಿ ಬಂದು ದಡದಲ್ಲಿ ಒಂದು ಕೈನಿಂದ ಕಲ್ಲಿನ ಆಸರೆಯಿಡಿದು ಮತ್ತೊಂದು ಕೈಯಿಂದ ತಂಗಿ ‘ರಾಶಿ’ಯನ್ನ ಮುಳುಗದಂತೆ ಹಿಡಿದು ನಿಂತಿದ್ದವಳನ್ನ ಮೇಲಕ್ಕೆ ತಂದು,ಪ್ರಜ್ಞಾಹೀನವಾಗಿದ್ದ ಮಗುವಿಗೆ ಪ್ರಥಮ ಚಿಕಿತ್ಸೆ ಪ್ರಯೋಗಕ್ಕೂಳಪಡಿಸಿ,ತಕ್ಷಣ ಲೋಕಲ್ ಆಸ್ಪತ್ರೆಗೆ ಸಾಗಿಸಿ,ತುರ್ತು ಚಿಕಿತ್ಸೆಗಾಗಿ ತುಮಕೂರಿನ ಶ್ರೀದೇವಿ ಮೇಡಿಕಲ್ ಆಸ್ಪತ್ರೆ ಕಮ್ ಕಾಲೇಜಿಗೆ ಕರೆ ತಂದು ಪ್ರಾಣಾಪಾಯದಿಂದ ಪಾರು ಮಾಡಿದ್ದನ್ನ ಮರೆಯಲಾಗದ್ದು. ಆದರೆ ಅದಕ್ಕಿಂತ ಮಿಗಿಲಾಗಿ ಎಲ್ಲೋ ದೂರದ ರಾಜ್ಯದಿಂದ ಬಂದು, ಭಾಷೆ ಬರದಿದ್ದವಳು, ಈಜು ಬಾರದಿದ್ದವಳು ಬಾವಿಯ ಆಳ ಅರಿಯದವಳು ಕೇವಲ ಎರಡೇ ದಿನ ನಾನು ಹೇಳಿಕೊಟ್ಟ ಈಜಿನ ವರಸೆ ಹಾಗೂ ಸುರಕ್ಷತೆಗಳ ಪಾಠ ಮರೆಯದೇ ನೆನಪಿಸಿಕೊಂಡು ಸಕಾಲದಲ್ಲಿ ಜೀವದ ಹಂಗು ತೊರೆದು, ತಂಗಿಯ ಜೊತೆಗಿನ ಭಾವನಾತ್ಮಕ ಒಡನಾಟ ಉಳಿಸಿಕೊಳ್ಳಲು ,ಸಂಬಂಧದ ಕೊಂಡಿ ಕಳಚಿಹೋಗದಂತೆ ಕಾಪಾಡಿದ್ದಾಳೆ.

Leave a Reply

Your email address will not be published. Required fields are marked *

You cannot copy content of this page

error: Content is protected !!