ರಷ್ಯಾ ಹಾಗೂ ಉಕ್ರೇನ್ ಯುದ್ಧ ಹಿನ್ನೆಲೆ, ಉಕ್ರೇನ್ ನಲ್ಲಿರುವ ಮಗನ ಬಗ್ಗೆ ಆತಂಕ ವ್ಯಕ್ತಪಡಿಸಿದ ಪೋಷಕರು.
ತುಮಕೂರು_ರಷ್ಯಾ ಹಾಗೂ ಉಕ್ರೇನ್ ಯುದ್ಧ ಹಿನ್ನೆಲೆಯಲ್ಲಿ ತುಮಕೂರಿನ ಮಧುಗಿರಿ ಪಟ್ಟಣದ ರವಿತೇಜ ಎಂಬುವವರು ಉಕ್ರೇನಿನ ಕಾರ್ಕಿ ಯುನಿವರ್ಸಿಟಿಯಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದು ಎರಡು ದೇಶಗಳ ನಡುವೆ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ರವಿತೇಜ ಪೋಷಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ನಮ್ಮ ಮಗ ವಿದ್ಯಾಭ್ಯಾಸದ ಹಿನ್ನೆಲೆಯಲ್ಲಿ ಉಕ್ರೇನ್ ಗೆ ತೆರಳಿದ್ದು ಆ ಸಂದರ್ಭದಲ್ಲಿ ಉಕ್ರೇನಿನ ಮೇಲೆ ರಷ್ಯಾ ದಾಳಿ ಮಾಡುತ್ತಿದ್ದು ಇದರಿಂದ ಕಾರ್ಕಿ ಯುನಿವರ್ಸಿಟಿಯಲ್ಲಿ ಸಿಲುಕಿರುವ ಪುತ್ರನ ಬಗ್ಗೆ ತೀವ್ರ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ತಂದೆ ಪ್ರದೀಪ್ ಕುಮಾರ್ ರವರು ಮಗನ ಪರಿಸ್ಥಿತಿ ನೋಡಿ ನಮಗೆ ತೀವ್ರ ಆತಂಕ ಹಾಗೂ ದಿಗ್ಬ್ರಮೆ ಉಂಟಾಗಿದ್ದು ಕೂಡಲೇ ಸರ್ಕಾರ ಉಕ್ರೇನ್ ನಲ್ಲಿರುವ ನಮ್ಮ ದೇಶದ ಮಕ್ಕಳನ್ನ ಶೀಘ್ರವೇ ಕರೆತರಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ತಮ್ಮ ಮಗ ರವಿತೇಜ ಕಾರ್ಕಿ ಯುನಿವರ್ಸಿಟಿ ಮೆಟ್ರೋ ಸ್ಟೇಷನ್ ನಲ್ಲಿ ತಂಗಿದ್ದು ತನ್ನ ಮಗನ ಜೊತೆ ಇತರ 10 ವಿದ್ಯಾರ್ಥಿಗಳು ಜೊತೆಗಿದ್ದು.ಎಲ್ಲರೂ ಆತಂಕವನ್ನು ವ್ಯಕ್ತಪಡಿಸಿದ್ದಾರೆ ಇನ್ನು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ತಾವಿಲ್ಲಿ ಕ್ಷೇಮವಾಗಿದ್ದೀವೆ ಕುಡಿಯುವ ನೀರು, ಆಹಾರಕ್ಕೂ ಸಹ ತೀವ್ರ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ ಎಂದರು.
ಇನ್ನು ತಾಯಿ ಮಗನನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ ಇನ್ನು ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಶೀಘ್ರವೇ ಮುಂದಾಗಿ ಉಕ್ರೇನಿನ ಲ್ಲಿರುವ ಎಲ್ಲರನ್ನು ಕರೆತರಬೇಕು ಎಂದು ಒತ್ತಾಯಿಸಿದ್ದಾರೆ.
ವರದಿ _ಮಾರುತಿ ಪ್ರಸಾದ್ ತುಮಕೂರು