ತುಮಕೂರು ಅಭ್ಯರ್ಥಿ ಎನ್ ಗೋವಿಂದರಾಜು ನಡೆಗೆ ಬೇಸರಗೊಂಡು ಅನ್ಯ ಪಕ್ಷದತ್ತ ಮುಖ ಮಾಡಿದ ಜೆಡಿಎಸ್ ಮುಖಂಡರು.
ತುಮಕೂರು – ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎನ್ ಗೋವಿಂದರಾಜು ನಡೆಗೆ ಬೇಸರ ವ್ಯಕ್ತಪಡಿಸಿರುವ ಜೆಡಿಎಸ್ ಮುಖಂಡರು ಅನ್ಯ ಪಕ್ಷದತ್ತ ತೆರಳಲು ಮುಂದಾಗಿದ್ದಾರೆ.
ಇನ್ನು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನ ಪದೇ ಪದೇ ಕಡೆಗಣಿಸುತ್ತ ತಮಗೆ ಇಷ್ಟ ಬಂದಂತೆ ನಡೆದುಕೊಳ್ಳುವ ಮೂಲಕ ಪಕ್ಷದ ಚಿನ್ಹೆ ಹಿಡಿದ ಅಭ್ಯರ್ಥಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮುಖಂಡರನ್ನು ಓಲೈಕೆಗೆ ತೆಗೆದುಕೊಳ್ಳದೆ ತಮ್ ಇಷ್ಟದಂತೆ ಚುನಾವಣಾ ಪ್ರಚಾರಕ್ಕೆ ಮುಂದಾಗಿದ್ದು ಇದರಿಂದ ಬೇಸರಗೊಂಡ ಜೆಡಿಎಸ್ ನ ಹಲವು ಮುಂಚೂಣಿ ನಾಯಕರು ಪಕ್ಷದತ್ತ ಮುಖ ಮಾಡಲು ಮುಂದಾಗಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ತುಮಕೂರಿಗೆ ಭೇಟಿ ನೀಡಿದ ಹೆಚ್ ಡಿ ಕುಮಾರಸ್ವಾಮಿ ರವರು ಸಹ ಎನ್ ಗೋವಿಂದರಾಜು ನಡೆಗೆ ಬೇಸರ ವ್ಯಕ್ತಪಡಿಸಿ ಎಲ್ಲಾ ನಾಯಕರನ್ನ ಓಲೆಕಿಗೆ ತೆಗೆದುಕೊಂಡು ಚುನಾವಣಾ ಪ್ರಚಾರವನ್ನು ಮಾಡಲು ಸೂಚಿಸಿದ್ದರು ಆದರೆ ಅಭ್ಯರ್ಥಿ ಏನ್ ಗೋವಿಂದರಾಜು ಇದಕ್ಕೆ ಯಾವುದೇ ಮನ್ನಣೆ ನೀಡದೆ ಕೆಲ ಯುವಕರ ಪಡೆಯನ್ನ ಕಟ್ಟಿಕೊಂಡು ಚುನಾವಣಾ ಪ್ರಚಾರಕ್ಕೆ ಮುಂದಾಗಿದ್ದು ಇನ್ನು ಈ ನಡೆ ಜೆಡಿಎಸ್ ಪಕ್ಷದ ಮುಂಚೂಣಿ ನಾಯಕರ ಕೆಂಗಣ್ಣಿಗೂ ಸಹ ಗುರಿಯಾಗಿದ್ದು ಇದರಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮುಖಂಡರಿಗೆ ತಂದೊಡ್ಡಿದ್ದು ಇದರಿಂದ ಪಾರಾಗಲು ಬೇರೆ ಪಕ್ಷದ ಮುಂದಾಗಲು ಮುಂದಾಗಿದ್ದಾರೆ ಎನ್ನಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಇಂದು ತುಮಕೂರಿನ ಖಾಸಗಿ ಹೋಟೆಲಲ್ಲಿ ಸಭೆ ಸೇರಿದ ಜೆಡಿಎಸ್ ಮುಖಂಡರು ಇಂದು ಅಥವಾ ನಾಳೆ ಬಿಜೆಪಿ ಪಕ್ಷದ ಟಿಕೆಟ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದ್ದು ಅದನ್ನು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದು ಬಿಜೆಪಿ ಟಿಕೆಟ್ ಘೋಷಣೆಯಾದ ಕೂಡಲೇ ಯಾರಿಗೆ ಬೆಂಬಲ ನೀಡಬೇಕು ಎನ್ನುವ ಕಾರ್ಯತಂತ್ರವನ್ನ ರೂಪಿಸಿದ್ದಾರೆ ಎನ್ನಲಾಗಿದೆ.
ಇನ್ನು ಜೆಡಿಎಸ್ ನ ಹಿರಿಯ ಮುಖಂಡ ನರಸೇಗೌಡ ರವರು ಸಹ ಪಕ್ಷೇತರರಾಗಿ ಚುನಾವಣಾ ಕಣಕ್ಕೆ ಸ್ಪರ್ಧಿಸಲು ಮುಂದಾಗಿದ್ದು ಇದರ ಬೆನ್ನಲ್ಲೇ ಕೆಲ ಮುಖಂಡರು ಸಹ ಅನ್ಯ ಪಕ್ಷದತ್ತ ಮುಖ ಮಾಡಲು ಮುಂದಾಗಿದ್ದು ಕೆಲ ಮುಖಂಡರು, ಬಿಜೆಪಿಯತ್ತ ಹಾಗೂ ಮತ್ತೆ ಕೆಲವರು ಕಾಂಗ್ರೆಸ್ ದತ್ತ ಮುಖ ಮಾಡಲು ಮುಂದಾಗಿದ್ದಾರೆ.
ಧೇನೆ ಇರಲಿ ದಿನದಿನ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಲ್ಲಿ ಮೂರು ಪಕ್ಷದಲ್ಲಿ ಬಂಡಾಯದ ಬಾವುಟ ಹಾರಲು ಮುಂದಾಗಿದ್ದು ಜಯ ಯಾರಿಗೆ ಒಲಿಯಲಿದೆ ಎನ್ನುವುದೇ ನಿಗೂಢವಾಗಿದ್ದು ಮತದಾರ ಪ್ರಭು ಯಾರಿಗೆ ಮತ ನೀಡಲಿದ್ದಾರೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ…..
ವರದಿ ಮಾರುತಿ ಪ್ರಸಾದ್ ತುಮಕೂರು