ಸ್ಮಶಾನಕ್ಕೆ ತೆರಳಲು ರಸ್ತೆ ಇಲ್ಲದೆ ರಸ್ತೆಯಲ್ಲೇ ಅಂತ್ಯಸಂಸ್ಕಾರ ನೆರವೇರಿಸಿದ ವೃದ್ಧನ ಕುಟುಂಬ
ತುಮಕೂರು-ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ದುರ್ಗದಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನವಿಲ್ಲದೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರನ್ನು ರಸ್ತೆ ಬದಿ ಅಂತ್ಯ ಸಂಸ್ಕಾರ ನೆರವೇರಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ದುರ್ಗದಹಳ್ಳಿ ಗ್ರಾಮದ ಸಾರ್ವಜನಿಕ ಹೋರಾಟಗಾರ ತಿಮ್ಮರಾಜು ಅವರ ತಂದೆ ಪೆದ್ದಯ್ಯ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ನಿಧನರಾಗಿದ್ದರು,ಅವರ ಅಂತ್ಯ ಸಂಸ್ಕಾರಕ್ಕೆ ಸಾರ್ವಜನಿಕ ಸ್ಮಶಾಣವಿಲ್ಲದ ಕಾರಣ ತಿಮ್ಮನಾಯಕನಹಳ್ಳಿ ಗ್ರಾಮಕ್ಕೆ ತೆರಳುವ ರಸ್ತೆ ಬದಿ ತಮ್ಮ ತಂದೆಯ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ದುರ್ಗದಹಳ್ಳಿ ಗ್ರಾಮಕ್ಕೆ ಸಾರ್ವಜನಿಕ ಸ್ಮಶಾಣ ಮಂಜೂರು ಮಾಡಿಕೊಡಲು ತಹಶೀಲ್ದಾರರಿಗೆ ಹಲವು ಭಾರಿ ಮನವಿ ಸಲ್ಲಿಸಿದರೂ ಸಹ ತಹಶೀಲ್ದಾರ್ ಸ್ಮಶಾಣ ಮಂಜೂರಾತಿಗೆ ಕ್ರಮ ಕೈಗೊಂಡಿಲ್ಲ, ಅರೆಗುಜ್ಜನ ಹಳ್ಳಿ ಗ್ರಾಮಪಂಚಾಯ್ತಿ ಗೆ ಅರ್ಜಿ ನೀಡಿದರೆ ತಾಲ್ಲೂಕು ಆಡಳಿತ ಬೆಟ್ಟದ ಮೇಲೆ ಸ್ಮಶಾಣ ಭೂಮಿಗೆ ಮಂಜೂರಾತಿ ನೀಡಿದ್ದಾರೆ ಅಲ್ಲಿಗೆ ದಾರಿ ಇಲ್ಲ ಎಂದು ಹೇಳುತ್ತಿದ್ದಾರೆ,ಬಡವರ ಕೂಗಿಗೆ ತಹಶೀಲ್ದಾರ್ ಕಚೇರಿಯಲ್ಲಿ ಬೆಲೆ ಇಲ್ಲ ಎಂದು ತಿಮ್ಮರಾಜು ವ್ಯವಸ್ತೆಯ ವಿರುದ್ದ ಅಸಹನೆ ವ್ಯಕ್ತಪಡಿಸಿದ್ದಾರೆ