ಬಸ್ನಲ್ಲಿ ಸೀಟಿಗಾಗಿ ಮಹಿಳೆಯರ ಹೊಡೆದಾಟ, ಗಲಾಟೆ ನೋಡಿದ ಡ್ರೈವರ್ ಬಸ್ಸನ್ನು ಠಾಣೆಗೆ ಕೊಂಡೊಯ್ದ.
ತುಮಕೂರು – ಕಾಂಗ್ರೆಸ್ ಸರ್ಕಾರ ಅಧಿಕಾರದ ಗದ್ದುಗೆ ಏರಿ 5 ಗ್ಯಾರಂಟಿಗಳನ್ನು ಜಾರಿ ಮಾಡುವ ನಿಟ್ಟಿನಲ್ಲಿ ತನ್ನ ಕೆಲಸವನ್ನ ಮಾಡುತ್ತಿದ್ದು ಇದರ ನಡುವೆ ಮಹಿಳೆಯರ ಅನುಕೂಲಕ್ಕಾಗಿ ರಾಜ್ಯಾದ್ಯಂತ ಉಚಿತ ಬಸ್ ಪ್ರಯಾಣ ನೀಡಿದ್ದು ಮಹಿಳೆಯರಿಂದ ತುಂಬಿ ತುಳುಕುತ್ತಿರುವ ಬಸ್ ಹಾಗೂ ಬಸ್ ನ ನಿಲ್ದಾಣಗಳಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಗಲಾಟೆ ಗದ್ದಲ ಕಂಡುಬರುತ್ತವೆ.
ಇದರ ನಡುವೆ ತುಮಕೂರಿನಲ್ಲಿ ಸೋಮವಾರ ಮಧ್ಯಾಹ್ನ ಬೆಂಗಳೂರಿನಿಂದ ಬೆಳಗಾವಿಗೆ KA -52 -F-1702 ಹೊರಟಿದ್ದ ಬಸ್ನಲ್ಲಿ ಮಹಿಳೆಯರಿಬ್ಬರು ಸೀಟಿಗಾಗಿ ಕಿತ್ತಾಟ ಮಾಡಿ ಕೊನೆಗೆ ಮಹಿಳೆಯರ ರೋಷಾವೇಶ ಮಿತಿಮೀರಿ ಕೊನೆಗೆ ಜುಟ್ಟು ಹಿಡಿದು ಪರಸ್ಪರ ನಿಂದಿಸುತ್ತಾ ಹೊಡೆದಾಡಿದ ಘಟನೆ ನಡೆದಿದೆ.
ಇನ್ನು ಘಟನೆಯಿಂದ ರೋಸಿ ಹೋದ ಬಸ್ ನ ಡ್ರೈವರ್ ಕೊನೆಗೆ ಬಸ್ ಅನ್ನು ತುಮಕೂರಿನ ನಗರ ಠಾಣೆಗೆ ಕೊಂಡು ಹೋದ ವಿಚಿತ್ರ ಪ್ರಸಂಗ ಸಹ ಕಂಡುಬಂದಿತು.
ಇದರಿಂದ ಕೆಲಕಾಲ ಬಸ್ ನಲ್ಲಿದ್ದ ಪ್ರಯಾಣಿಕರು ಕಂಗಾಲಾಗಿ ಟ್ರಾಫಿಕ್ ಜಾಮ್ ಸಹ ಉಂಟಾಯಿತು.
ಇದಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ ಬದಲಾಗಿ ಹಲ್ಲೆ ಮಾಡಿದ ಮಹಿಳೆ ಬಸ್ಸಿನಿಂದ ಇಳಿದು ಕಾಲ್ ಕಿತ್ತಿದ್ದು ಹಲ್ಲೆಗೊಳಗಾದ ಮಹಿಳೆ ಬಸ್ ನಲ್ಲಿ ತನ್ನ ಪ್ರಯಾಣ ಮುಂದುವರೆಸಿದ್ದಾರೆ.
ಅದೇನೇ ಇರಲಿ ಮಹಿಳೆಯರ ಜುಟಿನ ಗಲಾಟೆ ಬಲು ಜೋರಾಗಿ ಕೆಲಕಾಲ ಬಸ್ನಲ್ಲಿದ್ದ ಪ್ರಯಾಣಿಕರಂತು ಕಂಗಾಲಾಗಿದ್ದಂತು ಸತ್ಯ ಮುಂದಿನ ದಿನದಲ್ಲಿ ಇಂತಹ ಘಟನೆಗಳು ಮರುಕಳಿಸದೆ ಇದ್ದರೆ ಎಲ್ಲರಿಗೂ ಒಳಿತು.