ಉದ್ಘಾಟನೆಗೆ ಮುನ್ನವೇ ಶಿಥಿಲಗೊಳ್ಳುತ್ತಿರುವ ರಿಂಗ್ ರೋಡ್ : ಡಾ. ರಫೀಕ್ ಅಹ್ಮದ್.

ಉದ್ಘಾಟನೆಗೆ ಮುನ್ನವೇ ಶಿಥಿಲಗೊಳ್ಳುತ್ತಿರುವ ರಿಂಗ್ ರೋಡ್ : ಮಾಜಿ ಶಾಸಕ ಡಾ. ರಫೀಕ್ ಅಹ್ಮದ್.

 

ತುಮಕೂರು : ನಗರದ ಹೊರವಲಯದಲ್ಲಿರುವ ರಿಂಗ್ ರೋಡ್ ಉದ್ಘಾಟನೆಗೆ ಮುನ್ನವೇ ಶಿಥಿಲಗೊಳ್ಳುತ್ತಿದ್ದು

ಇದೊಂದು ಸ್ಮಾರ್ಟ್ ಸಿಟಿ ಲಿಮಿಟೆಡ್ ಪ್ರಾಯೋಜಕತ್ವದ ಅಪ್ರಯೋಜಕ ಕೆಲಸ ಎಂದರೆ ತಪ್ಪಾಗಲಾರದು ಎಂದು ತುಮಕೂರು ಮಾಜಿ ಶಾಸಕ ರಫೀಕ್ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಸುಮಾರು ೯೭ ಕೋಟಿ ವೆಚ್ಚದಲ್ಲಿ ಪುನರಾಭಿವೃದ್ದಿಗೊಳಿಸಿರುವ ಈ ರಸ್ತೆ ಅವ್ಯವಸ್ಥೆಗಳ ಆಗರವಾಗಿದೆ ಎಂದು ಡಾ.ರಫೀಕ್ ಅಹಮದ್ ಆಗ್ರಹಿಸಿದ್ದಾರೆ.

ನಗರದ ಗುಬ್ಬಿ ರೋಡ್ ನಿಂದ ಪ್ರಾರಂಭವಾಗಿ ಕ್ಯಾತ್ಸಂದ್ರ ಟೋಲ್ ಗೇಟ್ ಬಳಿ ಮುಕ್ತಾಯವಾಗುವ ಈ ರಸ್ತೆ ಸ್ಮಾರ್ಟ್ಸಿಟಿ ವತಿಯಿಂದ ಪುನರಾಭಿವೃದ್ದಿಗೊಂಡು ಉದ್ಘಾಟನೆ ಹಂತ ತಲುಪಿದೆ.

 

 

ಆದರೆ ರಸ್ತೆ ಬದಿ ಸರತಿ ಸಾಲಿನಲ್ಲಿ ಅಳವಡಿಸಿರುವ ಬಹುತೇಕ ಎಲ್.ಇ.ಡಿ ಬಲ್ಬ್ಗಳು ಬೆಳಗುತ್ತಿಲ್ಲ, ಕೆಲವೊಂದು ಬೆಳಗುತ್ತಿದ್ದರೂ ಮಂದ ಬೆಳಕಿನಿಂದ ಕೂಡಿವೆ.

ಈ ರಸ್ತೆಯೂ ಸಹ ಹದಗೆಟ್ಟಿದ್ದು ಅಸಮತೋಲನವಾಗಿ ಅಲ್ಲಲ್ಲಿ ಗುಂಡಿಗಳoತೆ ಮಾರ್ಪಟ್ಟಿದೆ ಈ ಕಾರಣ ಮಳೆ ನೀರು ಹೊರಹೋಗದೆ ರಸ್ತೆ ಮೇಲೆ ನೀರು ನಿಲ್ಲುತ್ತಿದೆ. ಡಿವೈಡರ್ ಗಳು ಹಾಳಾಗಿದ್ದು ಅಪಘಾತಗಳು ಹೆಚ್ಚುತ್ತಿದೆ.

 

ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು ಅವುಗಳು ಎಷ್ಟರ ಮಟ್ಟಿಗೆ ಚಾಲ್ತಿಯಲ್ಲಿವೆ ಎಂಬ ಅನುಮಾನ ಮೂಡಿದೆ. ಇಷ್ಟೆಲ್ಲಾ ಲೋಪಗಳಿದ್ದು .

 

 

ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಮಾಜಿ ಶಾಸಕರು ವಾಗ್ದಾಳಿ ನಡೆಸಿದ್ದಾರೆ.

೯೭ ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡು ನಗರದ ಅಭಿವೃದ್ದಿಗೆ ಹಿಡಿದ ಕೈಗನ್ನಡಿಯಂತೆ ಇರಬೇಕಾದ ಈ ರಸ್ತೆ ಉದ್ಘಾಟನೆಗೆ ಮುನ್ನವೇ ಶಿಥಿಲಾವಸ್ಥೆ ತಲುಪಿರುವುದು ದುರ್ದೈವದ ಸಂಗತಿ. ಸ್ಮಾರ್ಟ್ ಸಿಟಿ

ಲಿಮಿಟೆಡ್ ಭ್ರಷ್ಟಾಚಾರ ಎಷ್ಟರ ಮಟ್ಟಿಗೆ ಇದೆ ಎಂದರೆ ನಗರದ ಪ್ರಮುಖ ಹೆದ್ದಾರಿಯಲ್ಲಿಯೇ ಇವರ ಅಸಮರ್ಪಕ ಕಾಮಗಾರಿಗಳು ನಾಟ್ಯವಾಡುತ್ತಾ ಸ್ಮಾರ್ಟ್ ಸಿಟಿ ಎಂಬ ಹೆಸರನ್ನೇ ನಾಚಿಸುವಂತಿದೆ. ಕೂಡಲೇ ಈ ಸಮಸ್ಯೆಗಳನ್ನು ಪರಿಹರಿಸಿ ಎಂದು ಡಾ.ರಫೀಕ್ ಅಹ್ಮದ್ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!