ಶೀಘ್ರದಲ್ಲೇ ತುಮಕೂರು ನಗರದ ಕನ್ಸರ್ವೆನ್ಸಿಗಳು ಸಾರ್ವಜನಿಕರಿಗೆ ಮುಕ್ತವಾಗಲಿವೆ.
ತುಮಕೂರು_ ಶೀಘ್ರದಲ್ಲೇ ತುಮಕೂರು ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ವತಿಯಿಂದ ಅಭಿವೃದ್ದಿಪಡಿಸಲಾಗಿದ್ದ ವಿವಿಧ ಬಡಾವಣೆಯ ಕರೆನ್ಸಿಗಳು ಸಾರ್ವಜನಿಕರ ಅನುಕೂಲಕ್ಕೆ ಬಿಟ್ಟು ಕೊಡಲಾಗುವುದು ಎಂದು ತುಮಕೂರು ಮಹಾನಗರಪಾಲಿಕೆ ಆಯುಕ್ತರಾದ ರೇಣುಕಾ ರವರು ತಿಳಿಸಿದ್ದಾರೆ.
ತುಮಕೂರು ಎಂ.ಜಿ ರಸ್ತೆಯ ಕನ್ಸರ್ವೆನ್ಸಿ ಗಳಿಗೆ ಭೇಟಿ ನೀಡಿದ ಆಯುಕ್ತರು ಎಂ ಜಿ ರಸ್ತೆ ,ಎಸ್ಎಸ್ ಪುರಂ ಸೇರಿದಂತೆ ಹಲವು ಬಡಾವಣೆಗಳಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಕನ್ಸರ್ವೆನ್ಸಿ ಗಳನ್ನು ಅಭಿವೃದ್ಧಿಪಡಿಸಲಾಗಿತ್ತು ಆದರೆ ಕಾರಣಾಂತರದಿಂದ ಹಲವುದಿನಗಳಿಂದ ಕನ್ಸರ್ವೆನ್ಸಿ ಗಳು ಸಾರ್ವಜನಿಕರ ಬಳಕೆಗೆ ಬಂದಿಲ್ಲದ ಕಾರಣ ಶೀಘ್ರದಲ್ಲೇ ತುಮಕೂರು ಎಂ.ಜಿ ರಸ್ತೆಯ ಕನ್ಸರ್ವೆನ್ಸಿ ಹಾಗೂ ಎಸ್ಎಸ್ ಪುರಂ ಬಡಾವಣೆಯ ಕನ್ಸರ್ವೆನ್ಸಿಗಳನ್ನು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಇನ್ನು ತುಮಕೂರು ಎಂ.ಜಿ ರಸ್ತೆಯ ಕನ್ಸರ್ವೆನ್ಸಿ ಗಳನ್ನು ಈಗಾಗಲೇ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪಾರ್ಕಿಂಗ್ ಮಾಡಲು ಅನುಮತಿ ನೀಡಲಾಗಿತ್ತು ಆದರೆ ಎಂಜಿ ರಸ್ತೆಯ ಬೀದಿಬದಿ ವ್ಯಾಪಾರಿಗಳು ವೆಂಡರ್ ಝೋನ್ ಮಾಡಿಕೊಡಲು ಪಾಲಿಕೆಯನ್ನು ಒತ್ತಾಯಿಸಿದ್ದಾರೆ ಹಾಗಾಗಿ ಶೀಘ್ರದಲ್ಲೇ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನಯಾಜ್ ಮಾತನಾಡಿ ಬೀದಿ ಬದಿ ವ್ಯಾಪಾರಿಗಳಿಗೆ ಕಳೆದ ಎರಡು ವರ್ಷಗಳಿಂದ ಸಾಕಷ್ಟು ತೊಂದರೆ ಉಂಟಾಗುತ್ತಿದ್ದು ಶೀಘ್ರದಲ್ಲೇ ಬೀದಿಬದಿ ವ್ಯಾಪಾರಿಗಳ ಸಂಘದ ಒತ್ತಾಯದ ಮೇರೆಗೆ ಕೆಲ ಆಯ್ದ ಕನ್ಸರ್ವೆನ್ಸಿ ಗಳನ್ನು ಗುರುತಿಸಿ ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡಿಕೊಡಲಾಗುವುದು ಈ ಬಗ್ಗೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸಿದ್ದಾರೆ.
ವರದಿ _ಮಾರುತಿ ಪ್ರಸಾದ್ ತುಮಕೂರು