ಗರ್ಭಿಣಿ ಮತ್ತು ಮಕ್ಕಳ ಸಾವು ಪ್ರಕರಣ,ಮೃತಪಟ್ಟ ಮಹಿಳೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದ ವಿಡಿಯೋ ಲಭ್ಯ.
ತುಮಕೂರು_ತುಮಕೂರು ಜಿಲ್ಲಾ ಆಸ್ಪತ್ರೆಗೆ ಬಂದ ಮಹಿಳೆಗೆ ಸೂಕ್ತ ಚಿಕಿತ್ಸೆ ನೀಡದೆ ದಾಖಲಾತಿ ಕೊರತೆ ಹೇಳಿ ವಾಪಸ್ ಕಳುಹಿಸಿದ್ದು ನಂತರ ಮನೆಗೆ ವಾಪಸ್ ತೆರೆಯುವುದು ಹೇಗೆ ವೇಳೆ ತಾಯಿ ಹಾಗೂ ಮಕ್ಕಳು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟ ಮಹಿಳೆ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿರುವ ವಿಡಿಯೋ ಲಭ್ಯವಾಗಿದ್ದು.
ಇನ್ನು ತುಂಬ ಗರ್ಭಿಣಿಯಾಗಿದ್ದ ಮಹಿಳೆ ಚಿಕಿತ್ಸೆಗಾಗಿ ಸ್ಥಳೀಯರ ನೆರವಿನಿಂದ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದು ಚಿಕಿತ್ಸೆ ನೀಡದೆ ವಾಪಸ್ ಕಳುಹಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸರಿಯಾಗಿದೆ.
ಇನ್ನು ಚಿಕಿತ್ಸೆ ನೀಡದ ಹಿನ್ನೆಲೆಯಲ್ಲಿ ಮಹಿಳೆ ಮನೆಗೆ ವಾಪಸ್ ತೆರಳಿದ್ದು ಮನೆಯಲ್ಲಿಯ ಮಹಿಳೆಗೆ ಹೆರಿಗೆ ಆಗಿದ್ದು ನಂತರ ತಾಯಿ ಹಾಗೂ ಎರಡು ನವಜಾತ ಶಿಶುಗಳು ಸಹ ಮರಣವನ್ನು ಆಪ್ಪಿದ್ದು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರದಂತ ತೀವ್ರ ಚರ್ಚೆ ಹಾಗೂ ಆಕ್ರೋಶಕ್ಕೆ ವ್ಯಕ್ತವಾಗಿತ್ತು.
ಇನ್ನು ಘಟನೆ ನಡೆದ ಕೂಡಲೇ ಆರೋಗ್ಯ ಸಚಿವ ಕೆ ಸುಧಾಕರ್ ಅವರು ಸಹ ತುಮಕೂರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ಕರ್ತವ್ಯದಲ್ಲಿದ್ದ ವೈದ್ಯೆ ಹಾಗೂ ಮೂವರು ನರ್ಸ್ ಗಳ ವಿರುದ್ಧ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತು ಸಹ ಮಾಡಿದ್ದಾರೆ.
ಅದೇನೇ ಇರಲಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದ ಮಹಿಳಗೆ ಚಿಕಿತ್ಸೆ ನೀಡುವ ಬದಲು ವಾಪಸ್ ಕಳುಹಿಸಿರುವುದು ನಿಜಕ್ಕೂ ದುರದೃಷ್ಟಕರ ಹಾಗೂ ಮಹಿಳೆ ಹೆರಿಗೆ ವೇಳೆ ಮನೆಯಲ್ಲಿ ಮೃತಪಟ್ಟಿದ್ದು ನಿಜಕ್ಕೂ ಆರೋಗ್ಯ ಇಲಾಖೆಗೆ ತೀವ್ರ ಮುಜುಗರ ತರುವುದರ ಜೊತೆಗೆ ರಾಜ್ಯಾದ್ಯಂತ ಸಾರ್ವಜನಿಕರ ಆಕ್ರೋಶಕ್ಕೆ ಸಹ ಕಾರಣವಾಗಿದೆ.