‘ಕಾಶ್ಮೀರ ಮುಸ್ಲಿಮರಿಗಾಗಿ ಧ್ವನಿ ಎತ್ತುವ ಹಕ್ಕು ಇದೆ ‘ ಎಂದ ತಾಲಿಬಾನ್ ವಕ್ತಾರ
ಕಾಬೂಲ್: ತಾಲಿಬಾನ್ ಆಡಳಿತದಲ್ಲಿ ವಿದೇಶಗಳು ಅಫ್ಘಾನಿಸ್ತಾನ ಪ್ರದೇಶವನ್ನು ಭಾರತ ವಿರೋಧಿ ಚಟುವಟಿಕೆಗೆ ಬಳಸಬಹುದೆಂಬ ಭಾರತದ ಕಾಳಜಿಯ ನಡುವೆಯೇ ತಾಲಿಬಾನಿಗರು ಖ್ಯಾತೆ ತೆಗೆಯಲು ಆರಂಭಿಸಿದ್ದಾರೆ.
“ಮುಸ್ಲಿಮರಾಗಿರುವ ನಮಗೆ ಕಾಶ್ಮೀರ, ಭಾರತ ಮತ್ತು ಯಾವುದೇ ಇತರ ದೇಶಗಳಲ್ಲಿ ಮುಸ್ಲಿಮರಿಗಾಗಿ ಧ್ವನಿ ಎತ್ತುವ ಹಕ್ಕು ಇದೆ.” ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ಹೇಳಿದ್ದಾರೆ
ಬಿಬಿಸಿ ಉರ್ದುಗೆ ನೀಡಿದ ಸಂದರ್ಶನದಲ್ಲಿ, “ನಾವು ನಮ್ಮ ಧ್ವನಿಯನ್ನು ಎತ್ತುತ್ತೇವೆ ಯಾಕೆಂದರೆ ಮುಸ್ಲಿಮರು ನಿಮ್ಮ ಸ್ವಂತ ಜನರಾಗಿದ್ದಾರೆ, ನಿಮ್ಮ ಸ್ವಂತ ಪ್ರಜೆಗಳು, ನಿಮ್ಮ ಕಾನೂನುಗಳ ಅಡಿಯಲ್ಲಿ ಅವರಿಗೆ ಸಮಾನ ಹಕ್ಕುಗಳಿವೆ ಎಂದು ಶಾಹೀನ್ ಹೇಳಿದ್ದಾರೆ. ಆದಾಗ್ಯೂ, ಯಾವುದೇ ದೇಶದ ವಿರುದ್ಧ ಶಸ್ತ್ರಾಸ್ತ್ರಗಳನ್ನು ಎತ್ತುವ ನೀತಿಯನ್ನು ಈ ಗುಂಪು ಹೊಂದಿಲ್ಲ ಎಂದು ತಾಲಿಬಾನ್ ಹೇಳಿದೆ.
ಶಾಹೀನ್ ಅವರ ಈ ಹೇಳಿಕೆಯೂ ಕಾಶ್ಮೀರದ ಕುರಿತು ತಾಲಿಬಾನ್ ಹಿಂದೆ ನೀಡಿದ ಹೇಳಿಕೆಗಳಿಗೆ ವ್ಯತಿರಿಕ್ತವಾಗಿದೆ. ಯಾಕೆಂದರೆ ಈ ಹಿಂದೆ ಕಾಶ್ಮೀರದ ವಿಚಾರವಾಗಿ ತಾಲಿಬಾನ್ ದ್ವಿಪಕ್ಷೀಯ ಮತ್ತು ಆಂತರಿಕ ವಿಷಯ” ಎಂದು ಹೇಳಿತ್ತು.