ನಾವು ಯಾರ ಮೇಲೂ ಸೇಡು ತೀರಿಸಿಕೊಳ್ಳಲ್ಲ : ತಾಲಿಬಾನ್
ಕಾಬುಲ್ : ನಾವು ಯಾವುದೇ ದೇಶಕ್ಕೆ ಬೆದರಿಕೆಯನ್ನು ಹಾಕುವುದಿಲ್ಲ. ಯಾವ ದೇಶದ ವಿರುದ್ಧವೂ ಪ್ರತಿಕಾರ ತೀರಿಸಿಕೊಳ್ಳುವುದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಇಸ್ಲಾಮ್ ಸರ್ಕಾರ ರೂಪುಗೊಳ್ಳಲಿದೆ ಎಂದು ಮುಜಾಹಿದ್ ಹೇಳಿದ್ದಾರೆ.
ಈ ಹಿಂದೆ ಸೇನೆಯಲ್ಲಿ ಕೆಲಸ ಮಾಡಿದವರು ಮತ್ತು ವಿದೇಶಿ ಸರ್ಕಾರಗಳು ಅಥವಾ ಪಡೆಗಳ ಜತೆ ಕೆಲಸ ಮಾಡಿದವರ ಮೇಲೂ ನಾವು ಸೇಡು ತೀರಿಸಿಕೊಳ್ಳುವುದಿಲ್ಲ ಎಂದು ಅವರಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಅಲ್ಲದೆ ಇಸ್ಲಾಮಿಕ್ ಕಾನೂನಿನ ವ್ಯಾಪ್ತಿಯಲ್ಲಿ ಮಹಿಳೆಯರು ಕೂಡ ಸರ್ಕಾರದಲ್ಲಿ ಭಾಗಿಯಾಗಬಹುದು ಎಂದು ತಿಳಿಸಿದ್ದಾರೆ.
ಇದೇ ವೇಳೆ ಮತ್ತೊಂದು ಮಾಹಿತಿಯನ್ನು ಹೇಳಿರುವ ಮುಜಾಹಿದ್, ಖಾಸಗಿ ಮಾಧ್ಯಮಗಳು ಕಾರ್ಯನಿರ್ರವಹಿಸಬೇಕು. ದೇಶದ ಹಿತಾಸಕ್ತಿಗೆ ಧಕ್ಕೆಯಾಗದಂತೆ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಹಿಂದಿನ ತಲೆಮಾರಿನ ಜನರು ತಾಲಿಬಾನ್ನ ಕ್ರೂರ ಆಡಳಿತ ಅನುಭವಿಸಿರುವುದು ಜನರ ಭೀತಿಗೆ ಕಾರಣವಾಗಿದೆ. ಹಾಗೇ ಅಂತರರಾಷ್ಟ್ರೀಯ ಸಮುದಾಯಗಳು ಕೂಡ ತಾಲಿಬಾನ್ ನಡೆಯನ್ನು ಅನುಮಾನದಿಂದ ನೋಡುತ್ತಿವೆ.