ಸಿದ್ದಗಂಗಾ ಮಠದ ಐದು ಸಾವಿರ ವಿದ್ಯಾರ್ಥಿಗಳಿಂದ ಸೂರ್ಯ ನಮಸ್ಕಾರ.
ತುಮಕೂರು_ ತುಮಕೂರಿನ ಸಿದ್ದಗಂಗಾ ಮಠದ ಆವರಣದಲ್ಲಿ ಹೊಸವರ್ಷದಂದು ದೇಶಭಕ್ತರಿಂದ ಸೂರ್ಯನಮಸ್ಕಾರ ಕಾರ್ಯಕ್ರಮದ ಅಂಗವಾಗಿ ಪತಂಜಲಿ ಯೋಗ ಸೇವಾ ಸಂಸ್ಥೆ, ಭಾರತ ಸ್ವಾಭಿಮಾನ ಟ್ರಸ್ಟ್, ಗೀತ ಪರಿವರ್, ಅರ್ ಫುಲ್ ನೆಸ್ ಸಂಘ , ಎಸ್. ಡಿ.ಎಸ್ ಅಂತರಾಷ್ಟ್ರೀಯ ಯೋಗ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿದ್ದ 75 ಕೋಟಿ ಸೂರ್ಯನಮಸ್ಕಾರದ ಯೋಗ ಕಾರ್ಯಗಾರದ ಪ್ರಯುಕ್ತ ತುಮಕೂರಿನ ಸಿದ್ದಗಂಗಾ ಮಠದ ಆವರಣದಲ್ಲಿ ಶ್ರೀಮಠದ ಐದು ಸಾವಿರ ವಿದ್ಯಾರ್ಥಿಗಳಿಂದ ಸಾಮೂಹಿಕವಾಗಿ ಸೂರ್ಯ ನಮಸ್ಕಾರ ಮಾಡುವ ಮೂಲಕ ಕಾರ್ಯಾಗಾರಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು ಮಾತನಾಡಿ ಇನ್ನೂ ದೇಶದ ಹಲವು ಸಂಘ ಸಂಸ್ಥೆಗಳಿಂದ 75 ಕೋಟಿ ಸೂರ್ಯನಮಸ್ಕಾರದ ಕಾರ್ಯಗಾರವನ್ನು ಮಾಡುವ ಪುರಾತನವಾದ ಯೋಗ ಕ್ಕೆ ಗೌರವ ಸಮರ್ಪಿಸಿರುವ ನಿಜಕ್ಕೂ ಶ್ಲಾಘನೀಯ, ಭಾರತದ ಯೋಗ ಹಾಗೂ ಆಯುರ್ವೇದ ಅತ್ಯಂತ ಪುರಾತನವಾದದ್ದು ಪ್ರತಿಯೊಬ್ಬರಿಗೂ ಯೋಗ ಹಾಗೂ ಆಯುರ್ವೇದ ಎರಡು ಬಹಳ ಮುಖ್ಯವಾದದ್ದು ಮನುಷ್ಯನಿಗೆ ದೈಹಿಕ ಆರೋಗ್ಯ ಹಾಗೂ ಮಾನಸಿಕ ಆರೋಗ್ಯ ಎರಡು ಕೂಡ ಅವಶ್ಯಕವಾದದ್ದು ಉತ್ತಮ ಆರೋಗ್ಯಕ್ಕೆ ಯೋಗ ಬಹಳ ಮುಖ್ಯವಾದದ್ದು ಶ್ರೀಮಠದ ವಿದ್ಯಾರ್ಥಿಗಳಿಂದ ಇಂತಹ ಒಂದು ಅದ್ಭುತ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದರು.
ಯೋಗ ಆಚಾರ್ಯ ಡಾಕ್ಟರ್ ನಿರಂಜನಮೂರ್ತಿ ಮಾತನಾಡಿ ವಿಶ್ವದಾದ್ಯಂತ ವಿವಿಧ ಯೋಗ ಶಿಬಿರಗಳು ಮೂಲಕ 75 ಕೋಟಿ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಯುತ್ತಿರುವುದು ಹೆಮ್ಮೆಯ ವಿಷಯ ಅದರಲ್ಲೂ ಸಿದ್ದಗಂಗಾ ಮಠದ ಪುಣ್ಯಭೂಮಿಯಲ್ಲಿ ಇಂತಹ ಒಂದು ಕಾರ್ಯಕ್ರಮ ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದರು ಅದರಲ್ಲೂ ದೇಶದ ಐದು ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಸೂರ್ಯ ನಮಸ್ಕಾರ ಕಾರ್ಯಗ್ರಹ ಮಾಡಿರುವುದು ಎಲ್ಲರೂ ಹೆಮ್ಮೆ ಪಡುವಂಥದ್ದು ಎಂದರು.
ಇದೇ ಸಂದರ್ಭದಲ್ಲಿ ಮೈಸೂರಿನ ಶಿವಕುಮಾರ್ ಸೇರಿದಂತೆ ಶ್ರೀಮಠದ ವಿದ್ಯಾರ್ಥಿಗಳು ಹಾಗೂ ಮಠದ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ _ಮಾರುತಿ ಪ್ರಸಾದ್ ತುಮಕೂರು
ಇಂತಹ ಸಂದರ್ಭದಲ್ಲಿ ನಾವು ಭಾಗವಹಿಸುವುದು ತುಂಬಾ ಒಳ್ಳೆಯ ಸಮಯ… ಇದನ್ನು ನೋಡಿ ಪುನೀತರದೇವು