ಮಾಜಿ ಸಚಿವ ಸೊಗಡು ಶಿವಣ್ಣ ಅವರಿಗೆ ತುಮಕೂರು ಲೋಕಸಭಾ ಟಿಕೆಟ್ ನೀಡುವಂತೆ ಬೆಂಬಲಿಗರ ಆಗ್ರಹ

ಮಾಜಿ ಸಚಿವ ಸೊಗಡು ಶಿವಣ್ಣ ಅವರಿಗೆ ತುಮಕೂರು ಲೋಕಸಭಾ ಟಿಕೆಟ್ ನೀಡುವಂತೆ ಬೆಂಬಲಿಗರ ಆಗ್ರಹ

ತುಮಕೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯವಾದಿ, ಹಿರಿಯ ಮುಖಂಡ , ಮೀಸಾಬಂದಿ, ಕರಸೇವಕ, ಹಿಂದೂ ಫೈರ್ ಬ್ರಾಂಡ್ , ಅಜಾತಶತ್ರು , ಜನಪರ ಹೋರಾಟಗಾರ ಸೊಗಡು ಶಿವಣ್ಣನವರಿಗೆ ಟಿಕೆಟ್ ನೀಡುವಂತೆ ಬಿಜೆಪಿ ವರಿಷ್ಟರು ತೀರ್ಮಾನಿಸಬೇಕೆಂದು ಸೊಗಡು ಶಿವಣ್ಣನವರ ಅಭಿಮಾನಿಗಳು ಮತ್ತು ಸ್ವಾಭಿಮಾನಿ ಸಮಾನ ಮನಸುಳ್ಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.

 

 

 

 

ಇಂದು ತುಮಕೂರಿನ ಸಮೃದ್ಧಿ ಗ್ರಾಂಡ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಭಾರತಮಾತಾಗೆ ಪುಪ್ಪಾರ್ಚನೆ ಮಾಡಿ ನಂತರ ನಡೆದ ಸಭೆಯಲ್ಲಿ ಒಕ್ಕೊರಲಿನಿಂದ ಸೊಗಡುಶಿವಣ್ಣ ಅವರ ಬೆಂಬಲಿಗರ ಸಭೆಯಲ್ಲಿ ಬಿಜೆಪಿ ಇಂದ ತುಮಕೂರು ಲೋಕಸಭಾ ಟಿಕೆಟ್ ನೀಡುವಂತೆ ಒಕ್ಕೋರಲಿನಿಂದ ಆಗ್ರಹ ಕೇಳಿ ಬಂತು.

 

 

 

ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಿರುವ ಸೊಗಡು ಶಿವಣ್ಣ ಅವರು ಜಿಲ್ಲೆಯ ಒಂದು ಶಕ್ತಿ ಕೇಂದ್ರವಾಗಿದ್ದಾರೆ. ಅವರ ಮೌನವನ್ನು ಅವರ ದೌರ್ಬಲ್ಯ ಎಂದು ಭಾವಿಸಬೇಡಿ ಬಹಳ ಸಮರ್ಥರಿದ್ದಾರೆ ಹಿಂದುತ್ವದ ಬಲವಾದ ಪ್ರತಿಪಾದಕರು ಜೊತೆಗೆ ತುಮಕೂರು ಜಿಲ್ಲೆಯ ಜನತೆ ಹಿಂದೂ – ಮುಸ್ಲಿಂ ಗಲಾಟೆ ಇಲ್ಲದೆ ನೆಮ್ಮದಿ ಇಂದ ಇರಲು ಅದಕ್ಕೆ ಶಿವಣ್ಣ ಅವರ ಕೊಡುಗೆ ಅಪಾರವಾಗಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ಪಕ್ಷಕ್ಕೆ ಇದೊಂದು ಅವಕಾಶ ಇದೆ. ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಕುಣಿಗಲ್ ನ ಹಿರಿಯ ಕಾರ್ಯಕರ್ತ ಮತ್ತು ಪ್ರಬುದ್ಧ ಪಕೋಷ್ಟದ ತುಮಕೂರು ಜಿಲ್ಲಾ ಸಂಚಾಲಕ ನಟರಾಜ್ ಮಾತನಾಡುತ್ತ ಅಗ್ರಹಿಸಿದರು.

 

 

 

 

ಸೊಗಡು ಶಿವಣ್ಣ ಅವರು ಜಿಲ್ಲೆಯ ಪ್ರಶ್ನಾತೀತ ನಾಯಕ ಇದ್ದಾರೆ. ಪಕ್ಷದ ಸಿದ್ಧಾಂತ ಇರುವ ಸಮರ್ಥ ನಾಯಕ ಹಾಗಾಗಿ ಈ ಬಾರಿ ಅವರಿಗೆ ಟಿಕೆಟ್ ನೀಡಬೇಕು ಎಂದು ಹಿಂದುಳಿದರ ಒಕ್ಕೂಟದ ಪ್ರಮುಖ ಧನಿಯಕುಮಾರ್ ವರಿಷ್ಠರಿಗೆ ಒತ್ತಾಯಿಸಿದರು.

 

 

 

 

 

ತುಮಕೂರಿನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಸಮರ್ಥವಾಗಿ ಎದುರಿಸಬಲ್ಲ ನಾಯಕ ಎಂದರೆ ಅದು ಸೊಗಡು ಶಿವಣ್ಣ ಎಂದು ಮಧುಗಿರಿ ಪಿ.ಎನ್. ನರಸಿಂಹಮೂರ್ತಿ(ಪುರವರ ಮೂರ್ತಿ) ಹೇಳಿದರು.

 

 

 

2 ಲಕ್ಷ ಅಂತರದಲ್ಲಿ ಸೊಗಡು ಶಿವಣ್ಣ ಅವರು ಗೆಲ್ಲುತ್ತಾರೆ ಇದನ್ನು ಅರ್ಥ ಮಾಡಿಕೊಂಡು ಪಕ್ಷ ಟಿಕೆಟ್ ನೀಡಬೇಕು ಎಂದು ಯುವ ಮುಖಂಡ ಬೆಳಗುಂಬ ಪ್ರಭಾಕರ ಒತ್ತಾಯಿಸಿದರು.

 

 

 

ಸಂಧರ್ಭದಲ್ಲಿ ಪ್ರಮುಖರಾದ ಬಸವಕುಮಾರ್, ಸೊಗಡು ವೆಂಕಟೇಶ್, ಬಡ್ಡಿಹಳ್ಳಿ ಚಂದ್ರಣ್ಣ , ಬೆಸ್ಟ್ ಕ್ಸ್ ರಾಮರಾಜು, ಗೋಕುಲ್ ಮಂಜುನಾಥ್, ಗುಬ್ಬಿ ಪ್ರಮೋದ್, ರೈತ ಮುಖಂಡ ಸುರೇಶ್ ಮುಂತಾದವರು ಮಾತನಾಡಿದರು.

ಸಭೆಯಲ್ಲಿ ಜಿಲ್ಲೆಯಿಂದ ಬಂದಂತಹ ನೂರಾರು ಬೆಂಬಲಿಗರು ಉಪಸ್ಥಿತರಿದ್ದರು.

 

 

 

 

ವೇದಿಕೆಯಲ್ಲಿ ಹಿರಿಯರು , ಪ್ರಮುಖರಾದ ಕಾಂಡಿಮೆಂಟ್ ಶಿವಣ್ಣ, ಸತ್ಯಮಂಗಲ ಕೆ.ಎಸ್.ಸದಾಶಿವಯ್ಯ, ಗರುಡಯ್ಯ, ಕುಣಿಗಲ್ ನಟರಾಜ್, ಧನಿಯ ಕುಮಾರ್, ಕೆ. ಪಿ ಮಹೇಶ ಉಪಸ್ಥಿತರಿದ್ದರು.

 

 

 

 

ಕಾರ್ಯಕ್ರಮದಲ್ಲಿ ತುಮಕೂರು ಮಹಾನಗರಪಾಲಿಕೆ ಮಾಜಿ ಸದಸ್ಯ ಕೆ.ಪಿ.ಮಹೇಶ ಪ್ರಸ್ತಾವಿಕ ನುಡಿಗಳನ್ನಾಡಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕರ್ತರಾದ ರಾಜಕುಮಾರ್ ಗುಪ್ತ ಸ್ವಾಗತಿಸಿದರೆ , ಗೋಕುಲ್ ಮಂಜುನಾಥ್ ವಂದಿಸಿದರು.

 

Leave a Reply

Your email address will not be published. Required fields are marked *

You cannot copy content of this page

error: Content is protected !!