ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದುದು ಡಾ. ಫರ್ಹಾನಾ
ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ವಿದ್ಯಾರ್ಥಿ ಜೀವನವೆಂಬುದು ಬಹಳ ಪ್ರಮುಖವಾದದ್ದು ಮತ್ತು ಅಮೂಲ್ಯವಾದದು ಎಂದು ನಗರದ ಎಂಎಸ್ ಫಾರ್ಮಸಿ ಕಾಲೇಜಿನಲ್ಲಿ ರಾಜ್ಯ ಕಾಂಗ್ರೆಸ್ ನಾಯಕಿ ಡಾ.ಫರ್ಹನಾ ತಿಳಿಸಿದರು.
ಅವರು ನಗರದ ಎಂ ಎಸ್ ಫಾರ್ಮಸಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿಶ್ವ ಫಾರ್ಮಸಿಸ್ಟ್ ಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ವ್ಯಕ್ತಿಯು ಹುಟ್ಟಿನಿಂದ ಸಾಯುವ ತನಕ ಹಲವಾರು ಘಟ್ಟಗಳನ್ನು ತಲುಪಿ ಮುನ್ನಡೆಯುತ್ತಾನೆ. ಅದರೆಲ್ಲದರಲ್ಲಿಯೂ ವಿದ್ಯಾರ್ಥಿ ಜೀವನವೆಂಬುದು ಬಹಳ ಪ್ರಾಮುಖ್ಯತೆಯನ್ನು ಪಡೆದಿದ್ದು, ಜೀವನದ ಸಾಧನೆಯ ಮಟ್ಟ ತಲುಪುವ ಹಂತವಾಗಿದೆ ಪ್ರತಿಯೊಬ್ಬ ವ್ಯಕ್ತಿಯು ವಿದ್ಯಾರ್ಥಿ ದೆಸೆಯಲ್ಲಿ ಶ್ರದ್ಧಾ ಭಕ್ತಿಯಿಂದ ವ್ಯಾಸಂಗ ಮಾಡಿ ಜೀವನದಲ್ಲಿ ಸಾಧನೆಯನ್ನು ಮಾಡುವ ಮನಸ್ಥಿತಿಯನ್ನು ಹೊಂದಬೇಕು ತಂದೆ ತಾಯಿಂದಿರು ಗುರು ಹಿರಿಯರ ಆಸೆಯನ್ನು ಈಡೇರಿಸುವ ಸಲುವಾಗಿ ಪ್ರತಿಯೊಬ್ಬರು ಕಾಲಹರಣ ಮಾಡದಂತೆ ವಿದ್ಯಾಭ್ಯಾಸ ಮಾಡಬೇಕು ಇನ್ನಿತರ ಯಾವುದೇ ಆಕರ್ಷಣೆಗಳಿಗೆ ಒಳಗಾಗದೆ ಮೊದಲು ನನ್ನ ಜೀವನ ನನ್ನ ಸಾಧನೆ ಎಂಬ ತತ್ವವನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಇನ್ನು ಇದೇ ವೇಳೆ ಅವರು ಮಾತನಾಡಿ ಪ್ರಪಂಚದಲ್ಲಿ ವೈದ್ಯರು ಮತ್ತು ಫಾರ್ಮಸಿಸ್ಟ್ಗಳು ಒಂದು ನಾಣ್ಯದ ಎರಡು ಮುಖಗಳಂತಿದ್ದು ಒಬ್ಬರಿಗೊಬ್ಬರು ಪರಸ್ಪರ ಅವಲಂಬಿಗಳಾಗಿ ಕೆಲಸ ಮಾಡಬೇಕು ವೈದ್ಯಕ್ಷೇತ್ರದಲ್ಲಿ ಗಣನೆ ಸಲ್ಲಿಸುತ್ತಿರುವ ಎಲ್ಲರೂ ಸಹ ಸಮಾಜ ಸೇವ ಮನೋಭಾವ ಹೊಂದಿರಬೇಕೆoದು ತಿಳಿಸಿದರು ಈ ಸಂದರ್ಭದಲ್ಲಿ ನಗರದ ಖ್ಯಾತ ವೈದ್ಯರಾದ ಡಾ.ಉದಯ್ ಡಾ.ತ್ಯಾಗರಾಜು ಡಾ.ಪ್ರಸಾದ್ ಎಂ ಗೌಡ ಡಾ.ಮುರುಳಿಧರ್ ಡಾ.ನರಸಿಂಹಮೂರ್ತಿ ಡಾ.ರಾಘವೇಂದ್ರ, ಎಂ ಎಸ್ ಫಾರ್ಮಸಿ ಕಾಲೇಜಿನ ಆಡಳಿತ ಮಂಡಳಿ ಸದಸ್ಯರು ಪ್ರಾಂಶುಪಾಲರು ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು